ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಬಂಟ್ವಾಳ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ : ಟೈಲರ್ ಅರೆಸ್ಟ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಅಂಗಡಿಗೆ ತೆರಳಿದ್ದ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಟೈಲರೊಬ್ಬನನ್ನು ಬಂಟ್ವಾಳ ಪೋಲೀಸರು ಬಂಧಿಸಿರುವ ಘಟನೆ ಸಂಭವಿಸಿದೆ

ಬಂಧಿತ ಆರೋಪಿಯನ್ನು ಬ್ರಹ್ಮರಕೂಟ್ಲು ನಿವಾಸಿಯಾಗಿರುವ ಧರ್ಮರಾಜ್ ಯಾನೆ ಧರ್ಮ (40) ಗುರುತಿಸಲಾಗಿದೆ.

ವೃತ್ತಿಯಲ್ಲಿ ಟೈಲರ್ ಕೆಲಸ ಮಾಡಿಕೊಂಡಿರುವ ಈತ, ತನ್ನ ಟೈಲರ್ ಅಂಗಡಿಯಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಬಂಟ್ವಾಳ ತಾಲೂಕಿನ‌ ಕಳ್ಳಿಗೆ ಗ್ರಾಮದಲ್ಲಿ ಈ‌ ಘಟನೆ ಜುಲೈ 8ರಂದು ಈ ಘಟನೆ ನಡೆದಿದ್ದು, ಈತನ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಜುಲೈ 8ರ ಸಂಜೆ ಅಂಗಡಿಗೆ ತೆರಳಿದ್ದ ಬಾಲಕಿಯೊಂದಿಗೆ ಆರೋಪಿ ಧರ್ಮ, ʼನಿನಗೆ ಹೊಸ ಇಸ್ತ್ರಿ ಪೆಟ್ಟಿಗೆ ತೋರಿಸುತ್ತೇನೆ‌ ಒಳಗೆ ಬಾʼ ಎಂದು ಪಕ್ಕದಲ್ಲೇ ಇದ್ದ ತನ್ನ ಟೈಲರ್ ಅಂಗಡಿಯೊಳಕ್ಕೆ ಕರೆದು ಲೈಂಗಿಕ ಕೃತ್ಯ ಎಸಗಿದ್ದಾನೆ. ಘಟನೆ ಬಳಿಕ ಮನೆಗೆ ತೆರಳಿದ ಬಾಲಕಿ ಈ ವಿಚಾರವನ್ನು ತಿಳಿಸಿದ್ದಾಳೆ ಎಂದು ಬಾಲಕಿಯ ಪೋಷಕರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ‌. ಈ ಸಂಬಂಧ ಪೋಷಕರು ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ‌ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧಿಸಿ ಬಾಲಕಿಯ ಪೋಷಕರು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಸೋಮವಾರ ರಾತ್ರಿಯೇ ಬಂಧಿಸಿದ್ದಾರೆ.

No Comments

Leave A Comment