ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ರಾಹುಲ್ ಗಾಂಧಿಯವರ ವಿರುದ್ಧ ಶಾಸಕ ಡಾಕ್ಟರ್ ಭರತ್ ಶೆಟ್ಟಿ ಹೇಳಿಕೆ- ನಿಮ್ಮ ಕೇಂದ್ರದ ನಾಯಕರಿಗೆ ಮೊದಲು ಕೆನ್ನೆಗೆ ಬಾರಿಸೀ -ನಾಯಿ ಬೊಗಳಿದರೆ ದೇವಲೋಕ ಹಾಳಾದಿತೇ- ಸುರೇಶ್ ಶೆಟ್ಟಿ ಬನ್ನಂಜೆ ವ್ಯಂಗ್ಯ
ಉಡುಪಿ: ಶಾಸಕ ಡಾಕ್ಟರ್ ಭರತ್ ಶೆಟ್ಟಿ ಅವರು ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಕೇಂದ್ರ ಸರಕಾರದ ವಿರೋಧ ಪಕ್ಷದ ನಾಯಕರಾದಂತಹ ಸನ್ಮಾನ್ಯ ರಾಹುಲ್ ಗಾಂಧಿಯವರ ವಿರುದ್ಧ ಮಾತನಾಡಿರುವುದು ಮಾತ್ರವಲ್ಲದೆ ಅವರಿಗೆ ತಾನು ಹೊಡೆಯುತ್ತೇನೆ ಎಂದು ಹುಚ್ಚು ಹುಚ್ಚಾಗಿ ಮಾತನಾಡಿದ್ದು ಬಿಜೆಪಿಯವರು ಈ ಕರಾವಳಿಯಲ್ಲಿ ಜನರನ್ನು ಯಾವ ರೀತಿಯಲ್ಲಿ ಹೆದರಿಸುತ್ತಿದ್ದಾರೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ .
ಮಾನ್ಯ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಈ ಬಿಜೆಪಿ ನಾಯಕರುಗಳು ಹಾಗೂ ಸಚಿವರು ಮಾಡುತ್ತಿರುವ ದುಷ್ಟ ಕೃತ್ಯಗಳನ್ನು ಎಳೆ ಎಳೆಯಾಗಿ ಸಂಸತ್ ನಲ್ಲಿ ಬಿಡಿಸಿ ಈ ಬಗ್ಗೆ ಭಾಷಣವನ್ನು ಮಾಡಿರುತ್ತಾರೆ ಅದಕ್ಕೆ ಪ್ರತಿಯಾಗಿ ಸರಿಯಾಗಿ ವಿದ್ಯಾಭ್ಯಾಸ ಇಲ್ಲದಂತಹ ಕೆಲವರು ರಾಹುಲ್ ಗಾಂಧಿಯವರ ವಿರುದ್ಧವಾಗಿ ಮಾತನಾಡಿರುತ್ತಾರೆ . ಆದರೆ ಶಾಸಕರಾದ ಭರತ್ ಶೆಟ್ಟಿ ಅವರು ಡಾಕ್ಟರ್ ಆಗಿದ್ದು ವಿದ್ಯಾವಂತರಾಗಿದ್ದಾರೆ. ಅವರು ಕೂಡ ನಮ್ಮ ನಾಯಕರ ರಾಹುಲ್ ಗಾಂಧಿಯವರ ವಿರುದ್ಧ ಹೇಳಿಕೆಯನ್ನು ನೀಡಿ ತಾನು ಕೂಡ ಅವಿದ್ಯಾವಂತರ ಸಾಲಿಗೆ ಸೇರಿಕೊಂಡಿದೇನೇ ಎಂಬುದನ್ನು ನಮ್ಮ ರಾಜ್ಯದ ಜನತೆಗೆ ತೋರಿಸಿಕೊಟ್ಟಿದ್ದರೇ ಕೇಂದ್ರದ ವಿರೋಧ ಪಕ್ಷದ ನಾಯಕರಿಗೆ ಹೊಡೆಯುತ್ತೇನೆ ಎಂದು ಹೇಳುವ ಒಬ್ಬ ಶಾಸಕ ತಮ್ಮ ಕ್ಷೇತ್ರದಲ್ಲಿ ತಮ್ಮ ಮತದಾರರ ವಿರುದ್ಧ ಯಾವ ರೀತಿ ವರ್ತಿಸಿರಬಹುದು? ಎಂಬುದನ್ನು ನಮ್ಮ ಮತದಾರರು ಉಹಿಸಿ ಕೊಳ್ಳಬೇಕಾಗಿದೆ.
ನಮ್ಮ ಕರಾವಳಿ ಪ್ರದೇಶದಲ್ಲಿ ಈ ರೀತಿ ಸುಳ್ಳು ದರ್ಪದಿಂದಲೇ ಬಿಜೆಪಿ ಗೆಲುವು ಸಾಧಿಸಿದೆ ಹೊರತು ತಮ್ಮ ನೈಜ ಬಲದಿಂದ ಅಲ್ಲ ಎಂಬುದು ಸಾಬೀತಾಗಿದೆ. ಇಲ್ಲಿನ ಬಿಜೆಪಿ ನಾಯಕರ ಬಣ್ಣ ಬಯಲಾಗಿದೆ ಮಾನ್ಯ ಭರತ್ ಶೆಟ್ರೆ ನಿಮಗೆ ತಾಕತ್ತಿದ್ದರೆ ಕಳೆದ ಹತ್ತು ವರ್ಷಗಳಿಂದ ನಮ್ಮ ದೇಶದಲ್ಲಿ ಬೆಲೆ ಏರಿಕೆ ಮಾಡಿ ಬಡ ಜನರ ಬದುಕನ್ನು ನಾಶ ಮಾಡಿ, ರೈತರು ಹಾಗೂ ಮಧ್ಯಮವರ್ಗದವರ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಿಕರ್ತರಾದ ನಿಮ್ಮ ಕೇಂದ್ರದ ನಾಯಕರಿಗೆ ಮೊದಲು ಕೆನ್ನೆಗೆ ಬಾರಿಸೀ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸುರೇಶ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.