Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ರಷ್ಯಾ ಭಾರತದ ಮಿತ್ರರಾಷ್ಟ್ರ; ಜಗತ್ತಿಗೆ ಬೇಕಾಗಿರುವುದು ಒಗ್ಗೂಡುವಿಕೆ, ಪ್ರಭಾವ ಬೀರುವುದಲ್ಲ: ಮಾಸ್ಕೋದಲ್ಲಿ ಪ್ರಧಾನಿ ಮೋದಿ

ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಷ್ಯಾವನ್ನು ಭಾರತದ ಎಲ್ಲಾ ಸಮಯದಲ್ಲಿಯೂ ಮಿತ್ರರಾಷ್ಟ್ರ ಎಂದು ಬಣ್ಣಿಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಾಯಕತ್ವವನ್ನು ಈ ಸಂದರ್ಭದಲ್ಲಿ ಅವರು ಶ್ಲಾಘಿಸಿದ್ದಾರೆ.

ಉಕ್ರೇನ್‌ನಲ್ಲಿನ ಯುದ್ಧದ ಬಗ್ಗೆ ಪಾಶ್ಚಿಮಾತ್ಯ ಶಕ್ತಿಗಳು ರಷ್ಯಾದ ನಾಯಕನನ್ನು ಪ್ರತ್ಯೇಕಿಸಲು ನಡೆಸಿದ ಪ್ರಯತ್ನಗಳ ನಡುವೆ ಮಾಸ್ಕೊದಲ್ಲಿ ಇಂದು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ ಪುಟಿನ್ ಅವರನ್ನು ಪ್ರಧಾನಿ ಶ್ಲಾಘಿಸಿದರು.

ರಷ್ಯಾ ಪದವನ್ನು ಕೇಳಿದಾಗ, ಪ್ರತಿಯೊಬ್ಬ ಭಾರತೀಯನ ನೆನಪಿಗೆ ಬರುವ ಮೊದಲ ಪದವೆಂದರೆ ಎಲ್ಲಾ ಕಾಲಕ್ಕೂ ಭಾರತದ ಸ್ನೇಹಿತ (ಸುಖ್-ದುಖ್ ಕಾ ಸಾಥಿ) ಮತ್ತು ವಿಶ್ವಾಸಾರ್ಹ ಮಿತ್ರದೇಶ ಎಂದರು.

ರಷ್ಯಾದಲ್ಲಿ ಚಳಿಗಾಲದಲ್ಲಿ ತಾಪಮಾನವು ಮೈನಸ್‌ಗಿಂತ ಕಡಿಮೆಯಿದ್ದರೂ ಸಹ, ಭಾರತ-ರಷ್ಯಾ ಸ್ನೇಹವು ಯಾವಾಗಲೂ ‘ಪ್ಲಸ್’ ನಲ್ಲಿ, ಬೆಚ್ಚಗೆ ಉಳಿಯುತ್ತದೆ ಅಂದರೆ ಭಾರತ-ರಷ್ಯಾ ಸ್ನೇಹ ಯಾವಾಗಲೂ ಚಿರವಾಗಿರುತ್ತದೆ ಎಂಬರ್ಥದಲ್ಲಿ ಹೇಳಿದರು. ಈ ಸಂಬಂಧವು ಪರಸ್ಪರ ನಂಬಿಕೆ ಮತ್ತು ಗೌರವದ ಬಲವಾದ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿದ ಎಂದರು.

ಜಗತ್ತಿಗೆ ಸದ್ಯಕ್ಕೆ ಬೇಕಾಗಿರುವುದು ಸಂಗಮದ ಪ್ರಭಾವವಲ್ಲ ಮತ್ತು ಸಂಗಮಗಳನ್ನು ಪೂಜಿಸುವ ಬಲವಾದ ಸಂಪ್ರದಾಯವನ್ನು ಹೊಂದಿರುವ ಭಾರತಕ್ಕಿಂತ ಉತ್ತಮವಾಗಿ ಈ ಸಂದೇಶವನ್ನು ಯಾರೂ ನೀಡಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು. ಭಾರತವು ಪರಿವರ್ತನೆಗೆ ಒಳಗಾಗುತ್ತಿದೆ, ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯ ವೇಗವು ಜಗತ್ತನ್ನು ಅಚ್ಚರಿಯಿಂದ ನೋಡುತ್ತಿದೆ ಎಂದರು.

ಇಂದು ಮೋದಿ 3.0 ಕ್ಕೆ ಒಂದು ತಿಂಗಳಾಗಿದೆ ಎಂದು ನೆನಪಿಸಿದ ಪ್ರಧಾನಿ, ನನ್ನ ಮೂರನೇ ಅವಧಿಯಲ್ಲಿ ಮೂರು ಪಟ್ಟು ವೇಗವಾಗಿ ಮತ್ತು ಮೂರು ಪಟ್ಟು ಹೆಚ್ಚು ಶಕ್ತಿಯೊಂದಿಗೆ ಕೆಲಸ ಮಾಡಲು ನಾನು ಪ್ರಮಾಣ ಮಾಡಿದ್ದೇನೆ” ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿರುವ ಅಭಿವೃದ್ಧಿಯ ವೇಗವನ್ನು ನೋಡಿ ಇಡೀ ವಿಶ್ವವೇ ಬೆರಗಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

No Comments

Leave A Comment