ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಲಿದೆ. ಮತ್ತು 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ....

ಮುಂದುವರೆದ ಆರ್ಭಟ: ಉತ್ತರ ಕನ್ನಡ ಜಿಲ್ಲೆಯ ಹಲವು ಹಳ್ಳಿಗಳಿಗೆ ನುಗ್ಗಿದ ನೀರು

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಹೊನ್ನಾವರ  ಕುಮಟಾ  ತಾಲೂಕಿನಲ್ಲಿ ಭಾರಿ ಮಳೆಯಿಂದ ಪ್ರವಾಹವಾಗಿದೆ. ಕುಮಟಾ ಪಟ್ಟಣದ ಊರುಕೇರಿ, ಕೆಳಗಿನಕೇರಿ, ಹರಿಜನ ಕೇರಿ, ಕೋನಳ್ಳಿ, ಗುಡ್ಡಿನಕಟ್ಟು ಸೇರಿದಂತೆ ಹಲವು ಭಾಗಗಳಲ್ಲಿ ಪ್ರವಾಹ ಬಂದಿದೆ. ಭಾರಿ ಮಳೆಯಿಂದ ಹಿರೆಕಟ್ಟು, ಬಡಗಣಿ ಹಳ್ಳ ಉಕ್ಕಿ ಹರಿಯುತ್ತಿವೆ. ಹೊನ್ನಾವರ ತಾಲೂಕಿನಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಶರಾವತಿ, ಗುಂಡಬಾಳ ನದಿ ತೀರದ ಪ್ರದೇಶದಲ್ಲಿ ಪ್ರವಾಹವಾಗಿದ್ದು ಕಡತೋಕ, ಬಾಸ್ಕೇರಿ, ಹಾಡಗೇರಿ, ಹಡಿನಬಾಳ ಗ್ರಾಮಕ್ಕೆ ಜಲದಿಗ್ಬಂಧನವಾಗಿದೆ. ಭಾರಿ ಮಳೆ, ಪ್ರವಾಹದಿಂದ ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ಬೆಳೆಗಳು ನೀರುಪಾಲಾಗಿದ್ದು ರೈತರು ಕಂಗಾಲಾಗಿದ್ದಾರೆ.

ಭಾರಿ ಮಳೆಯಿಂದಾಗಿ ಕಾರವಾರದ ಕದ್ರಾ ಜಲಾಯಶ ಭರ್ತಿಯಾಗಿದೆ. ಡ್ಯಾಂ ಭರ್ತಿಯಿಂದಾಗಿ ಅಸ್ನೋಟಿ, ಹಳಗ ಪ್ರದೇಶ ಜಲಾವೃತಗೊಂಡಿದೆ. ಮಳೆ ಹಿನ್ನೆಲೆಯಲ್ಲಿ ಎನ್​ಡಿಆರ್​ಎಫ್​ ತಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.

No Comments

Leave A Comment