ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿ ಪೇಜಾವರ ಮಠಾಧೀಶರು ಮೋದಿ, ಬಿಜೆಪಿಯ ಕೈಗೊಂಬೆಯಂತೆ ವರ್ತಿಸುವುದನ್ನು ನಿಲ್ಲಿಸಲಿ: ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ಮಾನ್ಯ ಪೇಜಾವರ ಮಠದೀಶರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರದ ಹಾಗೂ ಕೇಂದ್ರ ಸರಕಾರ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ರಾಹುಲ್ ಗಾಂಧಿಯವರು ಬಗ್ಗೆ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ ಉಂಟು ಮಾಡುವಂತಹ ಹೇಳಿಕೆಯನ್ನು ನೀಡುತ್ತಿದ್ದು ಇದು ಮಧ್ವಾಚಾರ್ಯರ ಪೀಠದಲ್ಲಿ ಕುಳಿತುಕೊಳ್ಳುವಂತ ಸ್ವಾಮೀಜಿಯವರಿಗೆ ಶೋಭೆ ತರುವಂತದ್ದಲ್ಲ ಶ್ರೀ ಕೃಷ್ಣ ಪರಮಾತ್ಮನ ಪೂಜೆ ಮಾಡುವಂತಹ ಮಠಾಧೀಶರು ಒಂದು ಪಕ್ಷದ ಪರವಾಗಿ ಕೇವಲ ಬಿಜೆಪಿ ಪಕ್ಷದ ಪರವಾಗಿ ಮೋದಿಯವರ ಪರವಾಗಿ ಮಾತನಾಡುತ್ತಿರುವುದನ್ನು ನೋಡಿದರೆ ಇದು ಉಡುಪಿಯ ಶ್ರೀ ಕೃಷ್ಣ ಪರಮಾತ್ಮನಿಗೆ ಮಾಡಿದಂತ ಅವಮಾನ ಶ್ರೀ ಕೃಷ್ಣ ಪರಮಾತ್ಮನಿಗೆ ಎಲ್ಲಾ ಪಕ್ಷದವರು ಅವರ ಭಕ್ತರೇ ಪರಮಾತ್ಮ ಯಾವತ್ತೂ ಕಾಂಗ್ರೆಸ್ ಹಾಗೂ ಬಿಜೆಪಿ ಎಂದು ಯಾವತ್ತು ವಿಭಜನೆ ಮಾಡಿದವರಲ್ಲ ಎ೦ದು ಸುರೇಶ್ ಶೆಟ್ಟಿ ಬನ್ನಂಜೆಯವರು ತಿಳಿಸಿದ್ದಾರೆ.

ಈ ಪೇಜಾವರ ಮಠಾಧೀಶರು ಒಂದೇ ಪಕ್ಷದ ಹಿಂದೆ ಒಬ್ಬ ನಾಯಕನ ಹಿಂದೆ ಹೋಗುತ್ತಿರುವುದನ್ನು ನೋಡಿದರೆ ಅವರ ಪರವಾಗಿ ಮಾತನಾಡುವುದನ್ನು ಅವರಿಗೆ ಬೆಂಬಲಕ್ಕಾಗಿ ನಿಂತದ್ದನ್ನು ನೋಡಿದರೆ ಇವರು ಮಠಾಧೀಶರೋ ಅಥವಾ ಬಿಜೆಪಿಯ ವಕ್ತರರೋ ಎಂಬಂತೆ ಭಾಸವಾಗುತ್ತಿದೆ ಬಿಜೆಪಿಯ ನಾಯಕರು ಹಾಗೂ ತಾವು ಮಾತ್ರ ಹಿಂದುತ್ವದ ರೂವಾರಿಗಳು ಎಂದು ನಿಮ್ಮ ತಲೆಯಲ್ಲಿ ಅಡಗಿದ್ದರೆ ಅದನ್ನು ಮರೆತು ಬಿಟ್ಟು ಸಮಾಜದಲ್ಲಿ ಎಲ್ಲಾ ಪಕ್ಷದಲ್ಲಿಯೂ ಹಿಂದುಗಳು ಇದ್ದಾರೆ ಹಿಂದುತ್ವ ಇದೆ ಎಂಬುದನ್ನು ಮಠಾಧೀಶರಾದ ತಾವು ಅರಿತುಕೊಂಡು ಇರಬೇಕಾಗೀದೆ ಎ೦ದು ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ನಾಯಕರದ ರಾಹುಲ್ ಗಾಂಧಿಯವರ ಬಗ್ಗೆ ಆಗಲಿ ಕಾಂಗ್ರೆಸ್ ಪಕ್ಷದ ವಿರುದ್ಧವಾಗಲಿ ಅನಗತ್ಯ ಹೇಳಿಕೆಯನ್ನು ನೀಡುವುದನ್ನು ಮಾಡಿದರೆ ತಮ್ಮ ವಿರುದ್ಧ ಪ್ರತಿಭಟನೆಯನ್ನು ಮಾಡಬೇಕಾಗದಿತು ಅದಕ್ಕೆ ಅವಕಾಶವನ್ನು ಕೊಡದೆ ತಾವು ಒಬ್ಬರು ಹಿಂದೂ ಸಮಾಜದ ಎಲ್ಲರಿಗೂ ಧರ್ಮಗುರು ಎಂದು ಸಾಬೀತುಪಡಿಸಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment