ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಮಂಗಳೂರು/ಉಡುಪಿ: ಅವಳಿ ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ -ಮರವಂತೆಯಲ್ಲಿ ತ್ರೀವಗೊಂಡ ಕಡಲ್ಕೊರೆತ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶನಿವಾರ ಧಾರಾಕಾರ ಮಳೆಯಾಗಿದೆ.ಕೊಡಾಜೆ-ಅನಂತಾಡಿ ರಸ್ತೆಯ ಗೋಳಿಕಟ್ಟೆ ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬಿದ್ದಿದೆ. ಕಾರಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಕಾಶಿಬೆಟ್ಟು ಹೆದ್ದಾರಿಯಲ್ಲಿ ಕೆಸರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಧಾರಾಕಾರ ಮಳೆ ಸುರಿದಿದ್ದು, ನಂತರದ ತೀವ್ರತೆ ಕಡಿಮೆಯಾಗಿದೆ. IMD ಪ್ರಕಾರ ಜುಲೈ 7 ರಿಂದ 9 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ದಿನವಿಡೀ ತುಂತುರು ಮಳೆ ಸುರಿದಿದೆ. ಕಾರ್ಕಳ, ಹೆಬ್ರಿ ಮತ್ತು ಉಡುಪಿಯಲ್ಲಿ ಧಾರಾಕಾರ ಮಳೆಯಾಗಿದೆ. ಉಡುಪಿ, ಮಣಿಪಾಲ ಮತ್ತು ಮಲ್ಪೆ ಸುತ್ತಮುತ್ತಲಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಧ್ಯಾಹ್ನ ಮತ್ತು ಸಂಜೆ ಮಳೆ ಸ್ವಲ್ಪ ಬಿಡುವು ನೀಡಿದ್ದು, ಪ್ರವಾಹದ ನೀರು ಇಳಿಮುಖವಾಗಿದೆ. ಕೆಲವೆಡೆ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ.

ಮರವಂತೆಯಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದೆ. ಮರವಂತೆ ಹೊರ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬೊಬ್ಬರ್ಯ ದೈವಸ್ಥಾನದ ಬಳಿ ರಭಸವಾಗಿ ಬೀಸಿದ ಅಲೆಗಳ ಅಬ್ಬರಕ್ಕೆ ಬಂಡೆಗಳು ಸಮುದ್ರ ಪಾಲಾಗುತ್ತಿವೆ. ತಡೆಗೋಡೆ ಕುಸಿಯುವ ಹಂತದಲ್ಲಿದ್ದು, ಸಂಪರ್ಕ ರಸ್ತೆ ಕೊಚ್ಚಿಹೋಗುವ ಭೀತಿ ಎದುರಾಗಿದೆ. ಮೂರು ವರ್ಷಗಳ ಹಿಂದೆ ಟೌಕ್ಟೆ ಚಂಡಮಾರುತದ ಸಂದರ್ಭದಲ್ಲಿ ಇದೇ ರಸ್ತೆ ಕೊಚ್ಚಿಹೋಗುವ ಹಂತದಲ್ಲಿತ್ತು.

ಗಳೂರು ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಧಾರಾಕಾರ ಮಳೆ ಸುರಿದಿದ್ದು, ನಂತರದ ತೀವ್ರತೆ ಕಡಿಮೆಯಾಗಿದೆ. IMD ಪ್ರಕಾರ ಜುಲೈ 7 ರಿಂದ 9 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ದಿನವಿಡೀ ತುಂತುರು ಮಳೆ ಸುರಿದಿದೆ. ಕಾರ್ಕಳ, ಹೆಬ್ರಿ ಮತ್ತು ಉಡುಪಿಯಲ್ಲಿ ಧಾರಾಕಾರ ಮಳೆಯಾಗಿದೆ. ಉಡುಪಿ, ಮಣಿಪಾಲ ಮತ್ತು ಮಲ್ಪೆ ಸುತ್ತಮುತ್ತಲಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಧ್ಯಾಹ್ನ ಮತ್ತು ಸಂಜೆ ಮಳೆ ಸ್ವಲ್ಪ ಬಿಡುವು ನೀಡಿದ್ದು, ಪ್ರವಾಹದ ನೀರು ಇಳಿಮುಖವಾಗಿದೆ. ಕೆಲವೆಡೆ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ.

ಮರವಂತೆಯಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದೆ. ಮರವಂತೆ ಹೊರ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬೊಬ್ಬರ್ಯ ದೈವಸ್ಥಾನದ ಬಳಿ ರಭಸವಾಗಿ ಬೀಸಿದ ಅಲೆಗಳ ಅಬ್ಬರಕ್ಕೆ ಬಂಡೆಗಳು ಸಮುದ್ರ ಪಾಲಾಗುತ್ತಿವೆ. ತಡೆಗೋಡೆ ಕುಸಿಯುವ ಹಂತದಲ್ಲಿದ್ದು, ಸಂಪರ್ಕ ರಸ್ತೆ ಕೊಚ್ಚಿಹೋಗುವ ಭೀತಿ ಎದುರಾಗಿದೆ. ಮೂರು ವರ್ಷಗಳ ಹಿಂದೆ ಟೌಕ್ಟೆ ಚಂಡಮಾರುತದ ಸಂದರ್ಭದಲ್ಲಿ ಇದೇ ರಸ್ತೆ ಕೊಚ್ಚಿಹೋಗುವ ಹಂತದಲ್ಲಿತ್ತು.

No Comments

Leave A Comment