ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ತಮಿಳುನಾಡು ಬಿಎಸ್ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಬರ್ಬರ ಹತ್ಯೆ: 8 ಶಂಕಿತರು ಅರೆಸ್ಟ್

ಚೆನ್ನೈ: ತಮಿಳುನಾಡು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಬರ್ಬರ ಹತ್ಯೆಯಾಗಿದ್ದಾರೆ. ಪೆರಂಬೂರ್‌ನಲ್ಲಿರುವ ಆರ್ಮ್‌ಸ್ಟ್ರಾಂಗ್‌ ಅವರ ನಿವಾಸದ ಬಳಿ ಆರು ಮಂದಿ ಅಪರಿಚಿತ ದಾಳಿಕೋರರು ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‌

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಹತ್ಯೆಯ ಉದ್ದೇಶವನ್ನು ಕೂಲಂಕುಶವಾಗಿ ವಿಚಾರಣೆ ನಡೆಸಲಾಗುತ್ತದೆ ಎಂದು ಚೆನ್ನೈ ಹೆಚ್ಚುವರಿ ಆಯುಕ್ತ (ಉತ್ತರ) ಆಸ್ರಾ ಗರ್ಗ್‌ ಹೇಳಿದ್ದಾರೆ. ಆರ್ಮ್‌ಸ್ಟ್ರಾಂಗ್‌ ಅವರನ್ನು ಕೊಲೆಗೈದ ಬಳಿಕ ಆರೋಪಿಗಳು ಪರಾರಿಯಾಗುತ್ತಿರುವ ಸಿಸಿಟಿವಿ ದೃಶ್ಯಾವಳಿ ವೈರಲ್‌ ಆಗಿದೆ.
ಅಪರಿಚಿತರ ಗ್ಯಾಂಗ್‌ ಚೂರಿಯಿಂದ ಇರಿದು ಅವರನ್ನು ಹತ್ಯೆ ಮಾಡಿದೆ. ಘಟನೆ ಚೆನ್ನೈನ ಪೆರಂಬೂರ್‌ ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ.

No Comments

Leave A Comment