ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

T20 ವಿಶ್ವಕಪ್ ವಿಜೇತ ಟೀಂ ಇಂಡಿಯಾಗೆ ಅದ್ದೂರಿ ಸ್ವಾಗತ: ಪ್ರಧಾನಿ ಮೋದಿ ಭೇಟಿ, ಸಂವಾದ

ನವದೆಹಲಿ: ಬಾರ್ಬಡೋಸ್‌ನಲ್ಲಿ 2024 ರ ಆವೃತ್ತಿಯ ಟಿ 20 ವಿಶ್ವಕಪ್‌ ಗೆದ್ದ ನಂತರ ಇಂದು ಗುರುವಾರ ತವರಿಗೆ ಆಗಮಿಸಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಗುರುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.

ಟಿ20 ವಿಶ್ವಕಪ್ ವಿಜೇತರು ದೆಹಲಿಯ ಲೋಕ ಕಲ್ಯಾಣ್ ಮಾರ್ಗ್ 7ರಲ್ಲಿರುವ ಪ್ರಧಾನಿ ಮೋದಿ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಪ್ರಧಾನಿ ಮೋದಿಯವರನ್ನು ಭೇಟಿಯಾಗುವಾಗ ಮೆನ್ ಇನ್ ಬ್ಲೂ ವಿಶೇಷ ಜರ್ಸಿಯನ್ನು ಧರಿಸಿದ್ದರು. ಜೆರ್ಸಿಯ ಮುಂಭಾಗದಲ್ಲಿ ‘ಚಾಂಪಿಯನ್ಸ್’ ಎಂದು ದಪ್ಪ ಅಕ್ಷರದಲ್ಲಿ ಬರೆಯಲಾಗಿತ್ತು.

ಪ್ರಧಾನಿ ಮೋದಿಯವರು ಟೀಂ ಇಂಡಿಯಾ ಆಟಗಾರರನ್ನು ಅಭಿನಂದಿಸಿ ಅವರೊಂದಿಗೆ ಉಪಾಹಾರ ಸೇವಿಸಿದರು. ಈ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್​ ಶಾ ಕೂಡ ಹಾಜರಿದ್ದರು.

ವಿಶ್ವಕಪ್ ಗೆದ್ದು ಆಗಮಿಸಿದ ಟೀಮ್ ಇಂಡಿಯಾವನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ಕೆಲ ಹೊತ್ತು ಕುಶಲೋಪರಿ ನಡೆಸಿದರು. ಅಲ್ಲದೆ ಆ ಬಳಿಕ ಟೀಮ್ ಇಂಡಿಯಾ ಆಟಗಾರರು ಪ್ರಧಾನಿಯೊಂದಿಗೆ ಟಿ20 ವಿಶ್ವಕಪ್ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದೀಗ ಭಾರತ ತಂಡದ ಆಟಗಾರರೊಂದಿಗಿನ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದಕ್ಕೂ ಮುನ್ನ ಇಂದು ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗಿನ ಜಾವ 6 ಗಂಟೆಗೆ ಬಂದಿಳಿದ ನಂತರ ಅಲ್ಲಿಂದ ನೇರ ಮೌರ್ಯ ಹೊಟೇಲ್ ಗೆ ತೆರಳಿದರು. ಅಲ್ಲಿ ಬೆಳಗ್ಗೆ ಹೊಟೇಲ್ ಸಿಬ್ಬಂದಿ ಆಟಗಾರರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಇನ್ನು ಇಂದು ಸಂಜೆ 5 ಗಂಟೆಗೆ ಮುಂಬೈನಲ್ಲಿ ಮರೈನ್ ಡ್ರೈವ್ ಮತ್ತು ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಮಾಡಲಿದ್ದಾರೆ.

ಅಭಿಮಾನಿಗಳ ಹರ್ಷೋದ್ಘಾರ: ಕಳೆದ ವಾರ ಶನಿವಾರ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿದ ಭಾರತದ ವಿಜಯಶಾಲಿ ತಂಡವನ್ನು ಸ್ವಾಗತಿಸಲು ನೂರಾರು ಬೆಂಬಲಿಗರು, ತಮ್ಮ ನೆಚ್ಚಿನವರನ್ನು ಅಭಿನಂದಿಸುವ ಫಲಕಗಳನ್ನು ಹಿಡಿದು ರಾಷ್ಟ್ರಧ್ವಜವನ್ನು ಬೀಸಿದರು.

ನಾವು ಕಳೆದ 13 ವರ್ಷಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೇವೆ. ವಿಶ್ವಕಪ್ ಗೆಲ್ಲುವ ಮೂಲಕ ತಂಡವು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿಕೊಂಡ ಅಭಿಮಾನಿಯೊಬ್ಬರು, ಬೆಳಗ್ಗೆ 4:30 ರಿಂದ ಭಾರತದ ಕೊನೆಯ ವಿಶ್ವಕಪ್ ನ್ನು ಉಲ್ಲೇಖಿಸಿ ಹೇಳಿದರು. ಭಾರತ ಕಳೆದ ಬಾರಿ 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಏಕದಿನ ಪಂದ್ಯದಲ್ಲಿ ವಿಶ್ವಕಪ್ ಗೆದ್ದುಕೊಂಡಿತ್ತು.

ಇಂದು ಬೆಳಗ್ಗೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು ಆದರೆ ಅಭಿಮಾನಿಗಳ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ. ಆಟಗಾರರನ್ನು ಅವರ ಹೋಟೆಲ್‌ಗೆ ಕರೆದೊಯ್ಯಲು T3 ಟರ್ಮಿನಲ್‌ನ ಹೊರಗೆ ಎರಡು ಬಸ್‌ಗಳನ್ನು ನಿಲ್ಲಿಸಲಾಗಿತ್ತು,

ದಣಿದಿದ್ದರೂ ಉತ್ಸುಕರಾಗಿದ್ದ ಆಟಗಾರರು ಕಾಯುತ್ತಿದ್ದ ಅಭಿಮಾನಿಗಳತ್ತ ಕೈ ಬೀಸುವ ಮೂಲಕ ನಗುತ್ತಾ ಸಾಗಿದರು.

kiniudupi@rediffmail.com

No Comments

Leave A Comment