``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಯುಪಿ ಕಾಲ್ತುಳಿತ: ಎಫ್‌ಐಆರ್‌ನಲ್ಲಿ ಬೋಲೆ ಬಾಬಾ ಹೆಸರಿಲ್ಲ, ಹತ್ರಾಸ್‌ಗೆ ಸಿಎಂ ಯೋಗಿ ಭೇಟಿ

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತದಿಂದ 122 ಜನ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಸ್ವಯಂ ಘೋಷಿತ ದೇವ ಮಾನವ ಬೋಲೆ ಬಾಬಾ ಹೆಸರನ್ನು ಎಫ್ಐಆರ್ ನಿಂದ ಕೈಬಿಡಲಾಗಿದೆ.

ಹತ್ರಾಸ್ ಪಟ್ಟಣದಿಂದ 47 ಕಿಮೀ ದೂರದಲ್ಲಿರುವ ಫುಲ್ರೈ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದುರಂತದಲ್ಲಿ ನೂರಾರು ಭಕ್ತರು ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈ ಮಧ್ಯೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಬೆಳಗ್ಗೆ ಹತ್ರಾಸದ ಫುಲ್ರೈ ಗ್ರಾಮಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿದರು. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಂಡರು.

ಸಿಎಂ ಯೋಗಿ ಅದಿತ್ಯನಾಥ್ ಅವರು ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ಭೇಟಿ, ಆರೋಗ್ಯ ವಿಚಾರಿಸಿದರು. ಮೂವರು ಸಚಿವರು-ಯುಪಿ ಕ್ಯಾಬಿನೆಟ್ ಸಚಿವ ಚಧುರಿ ಲಕ್ಷ್ಮಿ ನಾರಾಯಣ್, ಯುಪಿ ಎಂಒಎಸ್ ಸಂದೀಪ್ ಸಿಂಗ್ ಮತ್ತು ಅಸಿಮ್ ಅರುಣ್ ಮತ್ತು ಯುಪಿ ಮುಖ್ಯ ಕಾರ್ಯದರ್ಶಿ ಮನೋಜ್ ಸಿಂಗ್ ಮತ್ತು ಯುಪಿ ಡಿಜಿಪಿ ಪ್ರಶಾಂತ್ ಕುಮಾರ್ ಅವರು ಈಗಾಗಲೇ ಹತ್ರಾಸ್‌ನಲ್ಲಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಈ ಮಧ್ಯೆ, ಹತ್ರಾಸ್ ಜಿಲ್ಲಾಡಳಿತವು ಪ್ರಮುಖ ಸೇವಾದಾರ್ ದೇವಪ್ರಕಾಶ್ ಮಧುಕರ್ ಸೇರಿದಂತೆ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಆದರೆ, ಎಫ್‌ಐಆರ್‌ನಲ್ಲಿ ದೇವಮಾನವ ಬೋಲೆ ಬಾಬಾ ಹೆಸರಿಲ್ಲ. ರಾಜ್ಯ ಸರ್ಕಾರವು ಪಶ್ಚಿಮ ಮತ್ತು ಮಧ್ಯ ಯುಪಿಯ ಸುಮಾರು 34 ಜಿಲ್ಲೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಿದ್ದರೆ, ಹತ್ರಾಸ್ ಪೊಲೀಸರು ಬೋಲೆ ಬಾಬಾಗಾಗಿ ಶೋಧ ನಡೆಸುತ್ತಿದ್ದಾರೆ. ಅಲ್ಲದೆ ಮಂಗಳವಾರ ರಾತ್ರಿ ಬಾಬಾ ಅವರ ಮೈನ್‌ಪುರಿ ಆಶ್ರಮದ ಮೇಲೆ ದಾಳಿ ನಡೆಸಲಾಗಿದೆ.

No Comments

Leave A Comment