ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಮೈಮೇಲೆ ಕೆಜಿಗಟ್ಟಲೇ ಚಿನ್ನ, ಕೈಯಲ್ಲಿ ಎಕೆ 47 ಹಿಡ್ಕೊಂಡು ಸುಂದರಿಯರ ಜತೆ ರೀಲ್ಸ್‌ ಮಾಡ್ತಿದ್ದವ ಜೈಲುಪಾಲು!

 ಬೆಂಗಳೂರು, (ಜುಲೈ 01) : ಮೈಮೇಲೆ ಕೆಜಿಗಟ್ಟಲೇ ಚಿನ್ನ, ಕೈಯಲ್ಲಿ ಎಕೆ 47, ಹಿಂದೆ-ಮುಂದೆ ಬಾಡಿಗಾರ್ಡ್ಸ್‌ ಇಟ್ಟುಕೊಂಡು ಸುಂದರಿಯರ ನಡುವೆ ರೀಲ್ಸ್‌ ಶೋಕಿ ಮಾಡುತ್ತಿದ್ದವ ಇದೀಗ ಜೈಲು ಸೇರಿದ್ದಾನೆ.  ಈ ವ್ತಕ್ತಿಯ ಹೆಸರು ಅರುಣ್ ಕಟಾರೆ ಅಂತ. ಈತ ಎಕೆ 47 ರೈಫಲ್‌ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್‌ ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕಿಲೋಗಟ್ಟಲೆ ಚಿನ್ನ ಧರಿಸಿಕೊಂಡು ಶೋಕಿ ಮಾಡುತ್ತಿದ್ದ. ಅಲ್ಲದೇ ಬೀದಿಬೀದಿಯಲ್ಲಿ ಗನ್‌ ತೋರಿಸಿಕೊಂಡು ರೀಲ್ಸ್​​ಗಾಗಿ ಶೋಕಿ ಮಾಡಿದವನನ್ನು ಇದೀಗ ಕೊತ್ತನೂರು ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳಿಸಿದ್ದಾರೆ.

ಅರುಣ್ ಕಟಾರೆ ಮೈಮೇಲೆ ಕೆಜಿಗಟ್ಟಲೇ ಚಿನ್ನ ಗಾಕಿಕೊಂಡು, ಬಾಡಿಗಾರ್ಡ್ಸ್‌ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋಆಫ್‌ ಮಾಡುತ್ತಿದ್ದ. ಈತನ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ಕೊತ್ತನೂರು ಪೊಲೀಸರು, ಅರುಣ್ ಕಟಾರೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಬೀದಿಬೀದಿಯಲ್ಲಿ ಈತನ ಗನ್‌ ಝಳಪಿಸುವಿಕೆ ಕಂಡು ಜನ ಆತಂಕಕ್ಕೊಳಗಾಗಿದ್ದರು. ಆದ್ರೆ, ಈತ ಹಿಡಿದುಕೊಂಡು ಓಡಾಡಿರುವುದು ನಕಲಿ ಗನ್​ ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ. ಆದರೂ ನಕಲಿ ಗನ್ ಹಿಡಿದು ಏರಿಯಾದಲ್ಲಿ ಆತಂಕ ಸೃಷ್ಟಿಸಿದಕ್ಕೆ ಕೇಸ್ ದಾಖಲು ಕೊತ್ತನೂರು ಪೊಲೀಸರು, ಆರ್ಮ್ಸ್ ಆಕ್ಟ್, IPC ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಹಿಂದೆಯೂ ಜೈಲಿಗೆ ಹೋಗಿ ಬಂದ್ದ ರೀಲ್ಸ್​ ರಾಜ

ಚಿತ್ರದುರ್ಗದಲ್ಲಿ SSLC ಹುಡುಗನನ್ನ ಬೆದರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪದಲ್ಲಿ ಈ ರೀಲ್ಸ್​ ರಾಜ ಅರುಣ್ ಕಟಾರೆ ಜೈಲಿಗೆ ಹೋಗಿ ಬಂದಿದ್ದ. ಬಾಲಕನಿಗೆ ಬಲವಂತವಾಗಿ ಸಿಗರೇಟ್, ಡ್ರಿಂಕ್ಸ್ ಮಾಡಿಸಿ ಫೋಟೋ ತೆಗೆದು ಬೆದರಿಸಿ ಬರೋಬ್ಬರಿ 35 ಲಕ್ಷ ಮೌಲ್ಯದ 656 ಗ್ರಾಂ ಚಿನ್ನಭರಣ ಸುಲಿಗೆ ಮಾಡಿದ್ದ. ಈ ಸಂಬಂಧ 2023ರಲ್ಲಿ ಚಿತ್ರದುರ್ಗ ನಗರ ಠಾಣೆ ಪೊಲೀಸರು ಅರುಣ್ ನನ್ನ ಬಂಧಿಸಿದ್ದರು. ಇದೇ ಕೇಸ್ ನಲ್ಲಿ ಅರುಣ್ ನ ಇಬ್ಬರು ಸಹೋದರರು ಕೂಡ ಆರೋಪಿಗಳಾಗಿದ್ದರು. ಬಳಿಕ ಜಾಮೀನಿನ‌ ಮೇಲೆ ಹೊರಬಂದಿದ್ದ ಅರುಣ್ ಮೇಲೆ ಮತ್ತೊಂದು ವಂಚನೆ ಕೇಸ್ ದಾಖಲಾಗಿತ್ತು. ಪರಿಚಯಸ್ಥರೊಬ್ಬರ ಬಳಿ 3.5 ಲಕ್ಷ ಸಾಲ ಪಡೆದು ವಂಚಿಸಿದ್ದರ ಬಗ್ಗೆ 2023ರಲ್ಲೇ ಚಿತ್ರದುರ್ಗ ನಗರ ಠಾಣೆಯಲ್ಲೇ ಪ್ರಕರಣ ದಾಖಲಾಗಿತ್ತು. ಸದ್ಯ ಬೆಂಗಳೂರಿನಲ್ಲಿ ರೀಲ್ಸ್ ಗಾಗಿ ಶೋಕಿ ಮಾಡಿ ನ್ಯೂಸೆನ್ಸ್ ಕ್ರಿಯೆಟ್ ಮಾಡಿ ಜೈಲುಪಾಲಾಗಿದ್ದಾನೆ.

No Comments

Leave A Comment