ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಅಶ್ಲೀಲ ದೃಶ್ಯ ಹಂಚಿಕೆ ಆರೋಪ: ಪ್ರೀತಂ ಗೌಡ ಬಂಧಿಸದಂತೆ ಹೈಕೋರ್ಟ್ ಆದೇಶ

ಬೆಂಗಳೂರು, ಜೂನ್​ 28: ಅಶ್ಲೀಲ ದೃಶ್ಯ ಹಂಚಿಕೆ ಆರೋಪದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ  ಬಂಧಿಸದಂತೆ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ಆ ಮೂಲಕ ಅವರಿಗೆ ಬಂಧನದಿಂದ ಬಿಗ್​ ರಿಲೀಫ್ ಸಿಕ್ಕಿದೆ. ತನಿಖೆ ಮುಂದುವರಿಸಲು ಎಸ್ಐಟಿಗೆ ತಿಳಿಸಿದ್ದು, ವಿಚಾರಣೆಗೆ ಸಹಕರಿಸಲು ಅರ್ಜಿದಾರ ಪ್ರೀತಂ ಗೌಡಗೆ ಹೈಕೋರ್ಟ್ ಸೂಚನೆ ನೀಡಿದೆ. ಪ್ರಜ್ವಲ್​ ರೇವಣ್ಣ  ಪೆನ್ ಡ್ರೈವ್ ಕೇಸ್ ಪ್ರೀತಂ ಗೌಡಗೆ ಸಂಕಷ್ಟ ತಂದೊಡ್ಡಿತ್ತು.

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ರಿಲೀಸ್ ಮಾಡಿದ್ದು ಯಾರು ಎನ್ನುವುದರ ಬಗ್ಗೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಕೆಲ ಶಂಕಿತರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆದರೆ ಸಂತ್ರಸ್ತ ಮಹಿಳೆಯೊಬ್ಬರು ಖುದ್ದು ಪ್ರಜ್ವಲ್‌ ರೇವಣ್ಣ, ಪ್ರೀತಂಗೌಡ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದರು.

ಪೆನ್‌ಡ್ರೈವ್‌ ಖರೀದಿ ಮಾಡಿಸಿದ್ದೇ ಪ್ರೀತಂಗೌಡ. ಪ್ರೀತಂಗೌಡ ಸಹಚರರು ಪೆನ್‌ಡ್ರೈವ್‌ ಹಂಚಿದ್ದಾರೆ ಅಂತಾ ಆರೋಪಿಸಿದ್ದರು. ಮಹಿಳೆ ನೀಡಿರುವ ದೂರು ಆಧರಿಸಿ ಎಫ್​ಐಆರ್​ ದಾಖಲಿಸಿದ್ದ ಬೆಂಗಳೂರಿನ ಸೈಬರ್‌ ಕ್ರೈಂ ಪೊಲೀಸರು, ಪ್ರೀತಂಗೌಡ ವಿರುದ್ಧ ಕಠಿಣ ಸೆಕ್ಷನ್‌ಗಳನ್ನೇ ಹಾಕಿದ್ದರು.

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋಗಳನ್ನ ಚಿತ್ರೀಕರಿಸಿದರೆ ಅದನ್ನ ಶೇರ್‌ ಮಾಡಿದ್ದಾರೆ ಅಂತಾ ಪ್ರೀತಂ ವಿರುದ್ಧ ಮಹಿಳೆ ಆರೋಪಿಸಿದ್ದರು. ಹೀಗಾಗಿ, ಪ್ರೀತಂಗೌಡ ವಿರುದ್ಧ ಕಠಿಣ ಸೆಕ್ಷನ್‌ಗಳನ್ನ ಎಫ್ಐಆರ್‌ನಲ್ಲಿ ಸೇರ್ಪಡೆ ಮಾಡಲಾಗಿತ್ತು.

ಐಟಿ ಕಾಯ್ದೆ 66ಇ ಅಡಿಯಲ್ಲಿ ಮಹಿಳೆಯರ ಖಾಸಗಿ ದೃಶ್ಯ ಸೆರೆ ಹಿಡಿದು ಬಹಿರಂಗ ಮಾಡಿರುವ ಆರೋಪದ ಸೆಕ್ಷನ್‌ ಸೇರಿಸಲಾಗಿತ್ತು. ಇದಷ್ಟೇ ಅಲ್ಲ, ಬೆಂಗಳೂರಿನಲ್ಲಿ ಪೆನ್‌ಡ್ರೈವ್‌ ಖರೀದಿ ಮಾಡಿಸಿದ್ದೇ ಪ್ರೀತಂಗೌಡ, ಅವರ ಸಹಚರರಾದ ಕಿರಣ್ ಮತ್ತು ಶರತ್‌ ಪೆನ್‌ಡ್ರೈವ್‌ ಹಂಚಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿತ್ತು.

No Comments

Leave A Comment