ಜಿಯೋ ಬೆನ್ನಲ್ಲೇ ಭಾರ್ತಿ ಏರ್ ಟೆಲ್ ರಿಚಾರ್ಜ್ ದರ ಹೆಚ್ಚಳ!
ನವದೆಹಲಿ: ಮೊಬೈಲ್ ಬಳಕೆದಾರರಿಗೆ ಜಿಯೋ ಬೆನ್ನಲ್ಲೇ ಇದೀಗ ಏರ್ ಟೆಲ್ ಕೂಡಾ ಶಾಕ್ ನೀಡಿದೆ. ಶೇ. 10-21 ರಷ್ಟು ಮೊಬೈಲ್ ರಿಜಾರ್ಜ್ ದರವನ್ನು ಏರಿಕೆ ಮಾಡುವುದಾಗಿ ಭಾರ್ತಿ ಏರ್ ಟೆಲ್ ಹೇಳಿದೆ. ಮೊಬೈಲ್ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ನಿನ್ನೆ ರಿಚಾರ್ಜ್ ದರ ಹೆಚ್ಚಿಸಿತ್ತು. ಇದರ ಬಾರ್ತಿ ಏರ್ ಟೆಲ್ ಕೂಡಾ ರಿಚಾರ್ಜ್ ದರವನ್ನು ಶುಕ್ರವಾರ ಹೆಚ್ಚಿಸಿದೆ. ಜುಲೈ 3ರಿಂದ ಹೊಸ ದರ ಅನ್ವಯವಾಗಲಿದೆ ಎಂದು ಸುನಿಲ್ ಭಾರ್ತಿ ಮಿತ್ತಲ್ ಅವರ ದೂರ ಸಂಪರ್ಕ ಸಂಸ್ಥೆ ಹೇಳಿದೆ.
10ನೇ ತರಂಗಾಂತರ ಹರಾಜು ಪ್ರಕ್ರಿಯೆ ಕೇವಲ ಎರಡು ದಿನಗಳಲ್ಲಿ ಮುಗಿದ ಕೂಡಲೇ ಮೊಬೈಲ್ ಟಾರಿಫ್ ದರ ಏರಿಕೆ ಘೋಷಣೆಯಾಗಿದೆ. 5ಜಿ ಸೇವೆಗಳಿಗೆ ಭಾರಿ ಹೂಡಿಕೆ ಕಾರಣದಿಂದ ಪ್ರತಿ ಬಳಕೆದಾರರ ಸರಾಸರಿ ಆದಾಯವನ್ನು (ಎಆರ್‌ಪಿಯು) ಹೆಚ್ಚಿಸುವ ಗುರಿಯೊಂದಿಗೆ ಇದು ಜಾರಿಗೆ ಬಂದಿದೆ.
ಏರ್ ಟೆಲ್ ನ ಪರಿಷ್ಕೃತ ಪ್ರೀಪೇಯ್ಡ್ ಪ್ಲಾನ್ ಗಳು ಹೀಗಿವೆ..
ಅನ್ಲಿಮಿಟೆಡ್ ವಾಯ್ಸ್ ಪ್ಲಾನ್:
• ರೂ. 179ರಿಂದ ರೂ. 199ಕ್ಕೆ ಹೆಚ್ಚಳ (28 ದಿನ ವ್ಯಾಲಿಡಿಟಿ)
• ರೂ. 455ರಿಂದ ರೂ. 509ಕ್ಕೆ ಹೆಚ್ಚಳ (84 ದಿನ ವ್ಯಾಲಿಡಿಟಿ)
• ರೂ.1,799ರಿಂದ ರೂ.1,999ಕ್ಕೆ ಹೆಚ್ಚಳ (365 ದಿನ ವ್ಯಾಲಿಡಿಟಿ)