Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಳ್ಳಾಲ: ಕಡಲ್ಕೊರೆತಕ್ಕೆ ಸಮುದ್ರಪಾಲಾದ 1 ಮನೆ; ಅಪಾಯದಲ್ಲಿರುವ ಮನೆಗಳು

ಉಳ್ಳಾಲ: ಜೂ.28,ಕಡಲ್ಕೊರೆತಕ್ಕೆ ಮನೆಯೊಂದು ಸಮುದ್ರ ಪಾಲಾದ ಘಟನೆ ಉಚ್ಚಿಲ ಬಟ್ಟಪಾಡಿಯಲ್ಲಿ ಗುರುವಾರ ನಡೆದಿದ್ದು, ಇನ್ನು 3 ಮನೆ ಅಪಾಯದಲ್ಲಿರುವ ಘಟನೆ ವರದಿಯಾಗಿದೆ.

ಅಪಾಯದಂಚಿನಲ್ಲಿದ್ದ ಈ ಮನೆಯಲ್ಲಿ ನೆಲೆಸಿದ್ದ ಬೀಫಾತುಮ್ಮಾ ಅವರ ಕುಟುಂಬವನ್ನು ಜೂನ್ 26ರಂದೇ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಸಂಭವನೀಯ ಅಪಾಯ ತಪ್ಪಿದಂತಾಗಿದೆ. ಇನ್ನು ಈ ಪ್ರದೇಶದಲ್ಲಿ ಅಪಾಯದಂಚಿನಲ್ಲಿದ್ದ 3 ಮನೆಗಳ ಸದಸ್ಯರನ್ನು ಜೂನ್ 27ರಂದು ಅಧಿಕಾರಿಗಳು ಸ್ಥಳಾಂತರಿಸಿದ್ದರು.

ಈ ಪ್ರದೇಶದಲ್ಲಿ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಈಗಾಗಲೇ ಕೊಚ್ಚಿಹೋಗಿರುವ ಬೀಫಾತುಮ್ಮಾ ಅವರ ಮನೆಯ ಹಿಂಬದಿಯಲ್ಲೇ ಇರುವ ಮೂರು ಮನೆಗಳು ಅಪಾಯಕ್ಕೆ ಸಿಲುಕಿವೆ. ಈ ಮನೆಗಳಿಗೂ ಕಡಲ ಅಲೆಗಳು ರಭಸವಾಗಿ ಅಪ್ಪಳಿಸುತ್ತಿದ್ದು, ಇವುಗಳು ಕೂಡ ಸಮುದ್ರಪಾಲಾಗುವ ಹಿನ್ನಲೆಯಲ್ಲಿ ಈ ಮನೆಯ ಸದಸ್ಯರನ್ನು ಸ್ಥಳಾಂತರಿಸಲಾಗಿತ್ತು.

ಸ್ಥಳಾಂತರಗೊಂಡ ನಾಲ್ಕು ಮನೆಯ ಸದಸ್ಯರುಗಳು ಸದ್ಯ ಸಂಬಂಧಿಕರ ಮನೆಗಳಲ್ಲಿ ನೆಲೆಸಿದ್ದಾರೆ. ಶೀಘ್ರವೇ ಅವರುಗಳಿಗೆ ಪರ್ಯಾಯ ಬಾಡಿಗೆ ಮನೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಮಾಹಿತಿ ನೀಡಿದ್ದಾರೆ.

No Comments

Leave A Comment