ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಸೋನು ಗೌಡಗೆ ದರ್ಶನ್ ಅಭಿಮಾನಿಗಳಿಂದ ಕಿರುಕುಳ, ಅಳಲು ತೋಡಿಕೊಂಡ ನಟಿ

ರೇಣುಕಾ ಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಈಗ ಆತನ ಕೊಲೆಯೇ ಆಗಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಅವರ ಸಹಚರರಲು ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಈಗ ಅದೇ ದರ್ಶನ್​ರ ಅಭಿಮಾನಿಗಳು ಕೆಲವು ನಟಿಯರಿಗೆ ಅವಾಚ್ಯವಾಗಿ ಬೈದು ಸಂದೇಶಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ನಟಿ, ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಸೋನು ಗೌಡ ಮಾತನಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ವಿಡಿಯೋ ಒಂದರಲ್ಲಿ, ರೇಣುಕಾ ಸ್ವಾಮಿಯದ್ದು ಎನ್ನಲಾಗುತ್ತಿರುವ ಖಾತೆಯಿಂದ ನನಗೂ ಕೆಟ್ಟ ಸಂದೇಶ ಬಂದಿದೆ ಎಂದು ಸೋನು ಗೌಡ ಹೇಳಿದ್ದರು. ಇದೀಗ ಹೊಸ ವಿಡಿಯೋ ಒಂದನ್ನು ಹರಿಬಿಟ್ಟಿರುವ ನಟಿ, ತಮಗೆ ದರ್ಶನ್ ಅಭಿಮಾನಿಗಳಿಂದ ಕೆಟ್ಟ ಸಂದೇಶಗಳು, ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ಸಂದೇಶಗಳು ಬಂದಿವೆ ಎಂದಿದ್ದಾರೆ.

‘ತುಂಬಾ ಬ್ಯಾಡ್ ಕಮೆಂಟ್ಸ್, ಯೂಟ್ಯೂಬ್, ಇನ್​ಸ್ಟಾಂ, ಫೇಸ್​ಬುಕ್​ನಲ್ಲಿ ಹಾಕುತ್ತಿದ್ದಾರೆ. ನಿಮ್ಮ ಡಿ ಬಾಸ್ ದರ್ಶನ್ ಪರವಾಗಿ ಮಾತನಾಡಿಲ್ಲ ಎಂದು ಒತ್ತಾಯಿಸುತ್ತಲೇ ಇದ್ದಾರೆ. ನಾವು ಇನ್ನೂ ಚಿಕ್ಕೋರು, ಅವರ ಬಗ್ಗೆ ಮಾತನಾಡುವಷ್ಟು ನಾವಿನ್ನೂ ಬೆಳೆದಿಲ್ಲ. ನಾವು ಯಾರಿಗಾದರೂ ಒಮ್ಮೆ ಅಭಿಮಾನಿಯಾದರೆ ಸಾಯುವವರೆಗೆ ಅಭಿಮಾನಿಯಾಗಿಯೇ ಇರುತ್ತೇವೆ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆ ಆಗಿಯೇ ಆಗುತ್ತೆ’ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.

ಮುಂದುವರೆದು, ‘ಒಳ್ಳೆಯರಾಗಿರಬಹುದು, ಕೆಟ್ಟವರಾಗಿರಬಹುದು, ತೀರ್ಪು ಅಂತ ಬರುತ್ತದೆ. ಅಲ್ಲಿಯವರೆಗೆ ಕಾಯೋಣ. ಅಲ್ಲಿಯವರೆಗೆ ದಯವಿಟ್ಟು ಕಾಯಿರಿ, ನಮಗೆ ಯಾವುದೇ ಥರ ಕೆಟ್ಟ ಸಂದೇಶಗಳನ್ನು, ಕಮೆಂಟ್ಸ್​ಗಳನ್ನು ಮಾಡಬೇಡಿ. ಅದೇ ರೀತಿ ಆ ಎರಡು ಕುಟುಂಬಗಳಿಗೂ ಸಹ ನ್ಯಾಯ ಸಿಗಲಿ, ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ’ ಎಂದಿದ್ದಾರೆ.

‘ಆದಷ್ಟು ಬೇಗ ದರ್ಶನ್ ಅವರು ನಿರಪರಾಧಿ ಎಂದಾಗಿ ಜೈಲಿನಿಂದ ಹೊರಗೆ ಬರಲಿ. ಅವರು ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಕಷ್ಟ ಎಂದವರಿಗೆ ಸಹಾಯ ಮಾಡಿದ್ದಾರೆ. ಅವರು ಇಂಥಹಾ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬುದು ನನ್ನ ವೈಯಕ್ತಿಕ ನಂಬಿಕೆ. ನನ್ನ ನಂಬಿಕೆ ನಿಜವಾಗಲಿ ಎಂದು ಬಯಸುತ್ತೀನಿ. ಎಲ್ಲರಿಗೂ ಒಳ್ಳೆಯದಾಗಲಿ, ಮತ್ತೊಮ್ಮೆ ಹೇಳುತ್ತಿದ್ದೀನಿ, ಕೆಟ್ಟ ಕಮೆಂಟ್ಸ್​ಗಳು ಬೇಡ’ ಎಂದಿದ್ದಾರೆ ಸೋನು ಗೌಡ.

No Comments

Leave A Comment