ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಓಂ ಬಿರ್ಲಾ ಮುಂದುವರಿಕೆಗೆ ವಿಪಕ್ಷಗಳ ವಿರೋಧ: ಎನ್ ಡಿಎ ಇಂದು ಲೋಕಸಭೆಯ ಸ್ಪೀಕರ್ ಅಭ್ಯರ್ಥಿ ಘೋಷಿಸುವ ಸಾಧ್ಯತೆ

ನವದೆಹಲಿ: 18ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಇಂದು ಅಭ್ಯರ್ಥಿಗಳ ನಾಮನಿರ್ದೇಶನ ನಡೆಯಲಿದ್ದು, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತನ್ನ ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆಯಿದೆ.

ಮೂಲಗಳ ಪ್ರಕಾರ ಹಿಂದಿನ ಲೋಕಸಭೆಯಲ್ಲಿ ಸ್ಪೀಕರ್ ಆಗಿದ್ದ ಓಂ ಬಿರ್ಲಾ ಅವರನ್ನು ಸ್ಪೀಕರ್ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯಾಗಿ ಎನ್‌ಡಿಎ ಸೂಚಿಸಿದೆ ಆದರೆ ವಿರೋಧ ಪಕ್ಷಗಳಿಂದ ಬೆಂಬಲ ಸಿಗುತ್ತಿಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ನಿರಂತರತೆಯ ಥೀಮ್‌ಗೆ ಅನುಗುಣವಾಗಿ ಬಿರ್ಲಾ ಮೊದಲ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಒಮ್ಮತದ ಅಭ್ಯರ್ಥಿ ಕುರಿತು ಎನ್‌ಡಿಎ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಇನ್ನೂ ಮೂವರ ಹೆಸರುಗಳನ್ನು ಪರಿಗಣಿಸಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. “ಎಲ್ಲವೂ ಅಂದುಕೊಂಡಂತೆ ನಡೆದರೆ ಮತ್ತು ಪ್ರತಿಪಕ್ಷಗಳು ಓಂ ಬಿರ್ಲಾ ಅವರ ಮುಂದುವರಿಕೆಯನ್ನು ವಿರೋಧಿಸದಿದ್ದರೆ, ಬಿರ್ಲಾ ಅವರ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಭಿನ್ನಾಭಿಪ್ರಾಯವಿದ್ದಲ್ಲಿ ಬಿಜೆಪಿಯ ಪೂರ್ವ ಚಂಪಾರಣ್ (ಬಿಹಾರ) ಸಂಸದ ರಾಧಾ ಮೋಹನ್ ಸಿಂಗ್ ಅಥವಾ ಪಾಲಿ ಕ್ಷೇತ್ರದ ಸಂಸದ ಪಿಪಿ ಚೌಧರಿ ಅವರನ್ನು ಸ್ಪೀಕರ್‌ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯನ್ನಾಗಿ ಘೋಷಿಸಬಹುದು ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ಆಂಧ್ರದ ಬಿಜೆಪಿ ಮುಖ್ಯಸ್ಥೆ ದಗ್ಗುಬಾಟಿ ಪುರಂದೇಶ್ವರಿ ಅವರ ಹೆಸರು ಕೂಡ ಕೇಳಿಬರುತ್ತಿದೆ. ಚೌಧರಿ ಅವರು ಹಿರಿಯ ವಕೀಲರು ಮತ್ತು ಜನ ವಿಶ್ವಾಸ್ ಬಿಲ್ 2022 ರ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಅವರು ಈ ಹಿಂದೆ 2019 ರಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯ ಹಾಗೂ 2017ರಲ್ಲಿ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದ ರಾಜ್ಯ ಸಚಿವರೂ ಆಗಿ ಸೇವೆ ಸಲ್ಲಿಸಿದ್ದರು. ಅವರು 2015 ಮತ್ತು 2016 ರಲ್ಲಿ ಎರಡು ಬಾರಿ ಸಂಸತ್ ರತ್ನ ಪ್ರಶಸ್ತಿಯನ್ನು ಸಹ ಪಡೆದಿದ್ದರು.

ಚೌಧರಿ ಮತ್ತು ಸಿಂಗ್ ಇಬ್ಬರೂ ಸಂಸದೀಯ ವ್ಯವಹಾರಗಳಲ್ಲಿ ಅನುಭವಿಗಳು ಮತ್ತು ವಿರೋಧ ಪಕ್ಷಗಳೊಂದಿಗೆ ಬಾಂಧವ್ಯವನ್ನು ಹೊಂದಿದ್ದಾರೆ. ಪುರಂದೇಶ್ವರಿ ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸೊಸೆ. ಲೋಕಸಭೆ ಸ್ಪೀಕರ್ ಚುನಾವಣೆ ಜೂನ್ 26 ರಂದು ನಡೆಯಲಿದೆ.

No Comments

Leave A Comment