ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ತೆರಿಗೆ ಎಫೆಕ್ಟ್: ಪೆಟ್ರೋಲ್’ಗಾಗಿ ಗೋವಾ ಗಡಿಯಲ್ಲಿ ಸಾಲುಗಟ್ಟಿ ನಿಟ್ಟ ರಾಜ್ಯದ ವಾಹನಗಳು!

ಕಾರವಾರ: ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟದ ಮೇಲಿನ ತೆರಿಗೆ ಹೆಚ್ಚಳವಾಗಿದ್ದು, ಇದರ ಪರಿಣಾಮ ಕಾರವಾರದ ಹೆಚ್ಚಿನ ವಾಹನ ಸವಾರರು ಇದೀಗ ಗೋವಾದತ್ತ ಮುಖ ಮಾಡುತ್ತಿದ್ದಾರೆ.

ಗೋವಾದಲ್ಲಿ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಅಲ್ಲಿನ ಪೆಟ್ರೋಲ್ ಬೆಲೆ ಸುಮಾರು 8 ರೂ. ಕಡಿಮೆಯಿದೆ. ಡೀಸೆಲೆ ಬೆಲೆ ಕೂಡ 1.50ರೂ ಕಡಿಮೆಯಿದೆ. ಹೀಗಾಗ ಸೂರ್ಯಾಸ್ತವಾಗುತ್ತಿದ್ದಂತಯೇ ಟ್ರಕ್ ಚಾಲಕರು ಕರ್ನಾಟಕ-ಗೋವಾ ಗಡಿಗೆ ತೆರಳಿ ಅಲ್ಲಿ, ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್-ಡೀಸೆಲ್ ತುಂಬಿಸಿಕೊಳ್ಳುತ್ತಿದ್ದಾರೆ.

ಗೋವಾದಲ್ಲಿ ಪೆಟ್ರೋಲ್ ಕರ್ನಾಟಕಕ್ಕಿಂತ ಯಾವಾಗಲೂ ಅಗ್ಗವಾಗಿರುತ್ತದೆ, ಇದೀಗ, ಕರ್ನಾಟಕದ ತೈಲ ಬೆಲೆಗೆ ಹೋಲಿಕೆ ಮಾಡಿದರೆ, ಇನ್ನೂ ಅಗ್ಗವಾಗಿದೆ. ಕೇಂದ್ರ ಸರ್ಕಾರವು ಇಂಧನ ಶುಲ್ಕವನ್ನು ಕಡಿಮೆ ಮಾಡಿದ ಬಳಿಕ ಇದೀಗ ಲೀಟರ್‌ಗೆ 99 ರೂ.ಗೆ ಇಳಿದಿದೆ. ಕಾರವಾರಕ್ಕೆ ಹೋಲಿಸಿದರೆ ಗೋವಾದಲ್ಲಿ ಡೀಸೆಲ್ ಬೆಲೆ ಸ್ವಲ್ಪ ಕಡಿಮೆಯಾಗಿದೆ, ಅಲ್ಲಿ 88.07 ರೂ.ಗೆ ಮಾರಾಟವಾದರೆ, ಕರ್ನಾಟಕದಲ್ಲಿ 90.57 ರೂಗೆ ಮಾರಾಟ ಮಾಡಲಾಗುತ್ತಿದೆ ಎಂದು ಚಾಲಕರೊಬ್ಬರು ಹೇಳಿದ್ದಾರೆ.

ಕಾರವಾರದಲ್ಲಿ ಈಗ ಪೆಟ್ರೋಲ್ ಬೆಲೆ 104 ರೂ ಇದೆ. ಆದರೆ, ಕಡಿಮೆ ಬೆಲೆಗೆ ಪೆಟ್ರೋಲ್ ಬೇಕು ಎಂದರೆ 15 ಕಿ.ಮೀ ಪ್ರಯಾಣಿಸಿ ಗೋವಾ ಗಡಿಯಲ್ಲಿ ಟ್ಯಾಂಕ್ ತುಂಬಿಸಿಕೊಳ್ಳಬಹುದು ಕಾರವಾರದ ಪೆಟ್ರೋಲ್ ಪಂಪ್‌ನ ಉದ್ಯೋಗಿ ಪ್ರಶಾಂತ್ ಅವರು ಹೇಳಿದ್ದಾರೆ.

ಬೆಲೆ ಏರಿಕೆಯಾದ ಬೆನ್ನಲ್ಲೇ ಇಲ್ಲಿನ ಬಹುತೇಕ ಗ್ರಾಹಕರು ಗೋವಾಗೆ ಗಡಿಗಳಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾರೆ. ಹೀಗಾಗ ಕಾರವಾರದ ಬಂಕ್‌ಗಳಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ನಾವು ಪ್ರತಿ ಲೀಟರ್‌ಗೆ 9 ರೂ.ವರೆಗೆ ಉಳಿಸಬಹುದು. ಗೋವಾದಲ್ಲಿ ಪ್ರತಿ ಲೀಟರ್‌ಗೆ 95.50 ರೂ.ಗಳನ್ನು ನೀಡುತ್ತಿದ್ದೇವೆ. ಕರ್ನಾಟಕದಲ್ಲಿ 104.49 ರೂ ನೀಡಬೇಕಾಗಿದೆ ಗೋವಾದಲ್ಲಿ 11 ಲೀಟರ್ ಇಂಧನವನ್ನು ಖರೀದಿಸಿದರೆ, ಉಳಿದ ಹಣದಲ್ಲಿ ಮತ್ತೊಂದು ಲೀಟರ್ ಹಾಕಿಸಿಕೊಳ್ಳಬಹುದು ಎಂದು ಸುನಿಲ್ ಎಂಬುವವರು ಹೇಳಿದ್ದಾರೆ.

ಕರ್ನಾಟಕ ಮತ್ತು ಗೋವಾದಲ್ಲಿ ಇಂಧನ ಬೆಲೆಗಳು 15 ರೂಪಾಯಿಗಳ ಅಂತರ ಹೊಂದಿದೆ. ಹೀಗಾಗಿ ಜನರು ಅದರ ಲಾಭವನ್ನು ಪಡೆಯುತ್ತಿದ್ದಾರೆ. ಈ ಹಿಂದೆ ಗೋವಾಲದಲ್ಲಿ ತೆರಿಗೆ ಹೆಚ್ಚಿಸಲಾಗಿತ್ತು. ಈ ವೇಳೆ ಚಾಲಕರು ಗೋವಾಗೆ ಹೋಗುವುದನ್ನು ನಿಲ್ಲಿಸಿದ್ದರು. ಇದೀಗ ಮತ್ತೆ ಗೋವಾದತ್ತ ಮುಖ ಮಾಡುತ್ತಿದ್ದಾರೆಂದು ಪೆಟ್ರೋಲ್ ಬಂಕ್ ಹೊಂದಿರುವ ಗೋವಾದ ಪೋಂಡಾ ಮೂಲದ ಅಮರ್ ಕೋಟಾರ್ಕರ್ ಅವರು ಹೇಳಿದ್ದಾರೆ.

ಗೋವಾದ ಪೊಲೆಮ್‌ನಲ್ಲಿರುವ ಪೆಟ್ರೋಲ್ ಪಂಪ್‌ನ ಉದ್ಯೋಗಿ ಮಹೇಶ್ ರತ್ನಾಕರ್ ನಾಯಕ್ ಅವರು ಮಾತನಾಡಿಸ ಇಂಧನಕ್ಕಾಗಿ ಹೆಚ್ಚಿನ ವಾಹನಗಳು ಬರುತ್ತಿವೆ ಎಂದು ದೃಢಪಡಿಸಿದ್ದಾರೆ.

kiniudupi@rediffmail.com

No Comments

Leave A Comment