ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
40 ವರ್ಷದ ವಿವಾಹಿತ ಪುರುಷನೊಂದಿಗೆ 20ರ ಯುವತಿ ಪ್ರೀತಿ: ಇಬ್ಬರ ಶವ ಕೆರೆಯಲ್ಲಿ ಪತ್ತೆ
ತುಮಕೂರು: 40 ವರ್ಷದ ವಿವಾಹಿತ ಪುರುಷನೊಂದಿಗೆ 20 ವರ್ಷದ ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಶವ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಪತ್ತೆಯಾಗಿದೆ.
ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಯುವತಿ ಅನನ್ಯ (20), ಬೈರಗೊಂಡ್ಲು ಗ್ರಾಮದ ರಂಗಸ್ವಾಮಿ (40) ಮೃತ ದುರ್ದೈವಿಗಳು.
ಕೋಳಾಲದ ಬ್ಯಾಂಕ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಗಂಗಾರತ್ನಮ್ಮ ಅವರನ್ನು ರಂಗಸ್ವಾಮಿ ವಿವಾಹವಾಗಿದ್ದು, ದಂಪತಿಗಳಿಗೆ ಪಿಯುಸಿ ಹಾಗೂ 8ನೇ ತರಗತಿ ಓದುತ್ತಿರುವ ಇಬ್ಬರು ಗಂಡು ಮಕ್ಕಳಿದ್ದಾರೆ.
ಚಿನ್ನಹಳ್ಳಿ ಸಮೀಪದ ಲಕ್ಕಯ್ಯನಪಾಳ್ಯ ಗ್ರಾಮದ ಯುವತಿ, ಕೋಳಾಲ ಪಟ್ಟಣದ ಚನ್ನಮ್ಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಬೈರಗೊಂಡ್ಲು ಗ್ರಾಮದವರಾದ ರಂಗಸ್ವಾಮಿ ಕಾಲೇಜು ಬಳಿ ಜೆರಾಕ್ಸ್ ಹಾಗೂ ಗ್ರಾಮ ಒನ್ ಅಂಗಡಿ ನಡೆಸುತ್ತಿದ್ದರು.
ರಂಗಸ್ವಾಮಿ ಅವರ ಜೆರಾಕ್ಸ್ ಅಂಗಡಿಗೆ ಅನನ್ಯ ಆಗಾಗ ಬರುತ್ತಿದ್ದಳು. ಇದರಿಂದ ಇಬ್ಬರ ನಡುವೆ ಸಲುಗೆ ಬೆಳೆದಿದೆ. ನಂತರ ಅನನ್ಯ-ರಂಗಶಾಮಣ್ಣ ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ. ಈ ವಿಚಾರ ಅನನ್ಯ ಪೋಷಕರಿಗೆ ತಿಳಿದಿದ್ದು, ವಿರೋಧ ವ್ಯಕ್ತವಾಗಿದೆ. ಬಳಿಕ ಇಬ್ಬರೂ 3 ದಿನಗಳ ಹಿಂದೆ ನಾಪತ್ತೆಯಾಗಿದ್ದರು.
ಭಾನುವಾರ ಬೆಳಿಗ್ಗೆ ಕೆರೆಯ ದಡದಲ್ಲಿ ಅನನ್ಯ ಮತ್ತು ರಂಗಶಾಮಣ್ಣ ಚಪ್ಪಲಿಗಳು ಸಿಕ್ಕಿವೆ. ಅಲ್ಲದೆ, ಕೆರೆ ಬಳಿ ನಿಂತಿದ್ದ ಕಾರಿನಲ್ಲಿ ಇಬ್ಬರ ಮೊಬೈಲ್ಗಳು ಸಿಕ್ಕಿವೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅನನ್ಯಾಳ ತಂದೆ ಮತ್ತು ರಂಗಸ್ವಾಮಿ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.