ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

3 ವರ್ಷದ ಮಗುವಿಗೆ ಸಿಗರೇಟ್’ನಿಂದ ಸುಟ್ಟು ಚಿತ್ರಹಿಂಸೆ: ಮಲತಂದೆ ಬಂಧನ

ಕೋಲಾರ: ಮೂರು ವರ್ಷದ ಬಾಲಕಿಗೆ ಮಲತಂದೆಯೊಬ್ಬ ಸಿಗರೇಟ್’ನಿಂದ ಸುಟ್ಟು ಚಿತ್ರಹಿಂಸೆ ನೀಡಿರುವ ಘಟನೆಯೊಂದು ಗೌರಿಬಿದನೂರಿನ ಟಿಪ್ಪು ನಗರದಲ್ಲಿ ವರದಿಯಾಗಿದೆ. ಆರೋಪಿ ಅಮ್ಜದ್‌ನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಗುವಿನ ತಾತ ಎಸ್‌ಜಿ ಅನ್ವರ್ ನೀಡಿದ ದೂರಿನ ಆಧಾರದ ಮೇಲೆ ಗೌರಿಬಿದನೂರು ಪೊಲೀಸರು ಅಮ್ಜದ್‌ನನ್ನು ಬಂಧಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಡಿಎಲ್ ನಾಗೇಶ್ ತಿಳಿಸಿದ್ದಾರೆ.

ಜರೀನಾ ತಾಜ್ ಎಂಬಾಕೆ ಮೂರು ಮದುವೆಯಾಗಿದ್ದು ಮೊದಲ ಪತಿಯಿಂದ ಇಬ್ಬರು ಹೆಣ್ಣು ಮಕ್ಕಳು ಮತ್ತು ಎರಡನೇ ಪತಿಯಿಂದ ಮತ್ತೊಂದು ಹೆಣ್ಣು ಮಗು ಜನಿಸಿದ್ದು ಇಬ್ಬರು ಗಂಡಂದಿರನ್ನು ತೊರೆದಿದ್ದ ಜರೀನಾ, 10 ತಿಂಗಳ ಹಿಂದೆ ಟ್ರಕ್ ಡ್ರೈವರ್ ಆಗಿದ್ದ 40 ವರ್ಷದ ಅಮ್ಜದ್ ಅಲಿಯಾಸ್ ಅಶು ನನ್ನು ಮೂರನೇ ಮದುವೆಯಾಗಿದ್ದಳು.

ಎರಡನೇ ಪತಿಯ ಮೂರು ವರ್ಷದ ಹೆಣ್ಣು ಮಗುವಿಗೆ ಅಮ್ಜದ್ ಚಿತ್ರ ಹಿಂಸೆ ನೀಡಿದ್ದಾನೆ. ಮಗುವಿನ ಮುಖ, ಕತ್ತು ಹಾಗೂ ತಲೆ ಭಾಗಕ್ಕೆ ಸಿಗರೇಟ್ ನಿಂದ ಸುಟ್ಟು, ಮಗುವಿನ ಗುಪ್ತಾಂಗ ಕಚ್ಚಿ, ಮನಬಂದಂತೆ ಥಳಿಸಿದ್ದಾನೆ.

15 ವರ್ಷದ ಮತ್ತೊಬ್ಬ ಮಗಳ ಕೈ ಮುರಿದು ಬಳಿಕ ಪತ್ನಿ ಜರೀನಾ ಮೇಲೂ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿರುವ ಮೂರು ವರ್ಷದ ಮಗುವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ತಂದೆಯ ವಿಕೃತಿಯಿಂದ ಪುತ್ರಿ ಶಾಕ್ ಗೆ ಒಳಗಾಗಿದ್ದಾಳೆ.

No Comments

Leave A Comment