ಹಿಂದೂಜಾ ಕುಟುಂಬವು ತಮ್ಮ ಗೃಹ ಸಹಾಯಕರಿಗೆ 18 ಗಂಟೆಗಳ ಕೆಲಸಕ್ಕೆ ಭಾರತೀಯ ರೂಪಾಯಿಯಲ್ಲಿ 6.19 ಫ್ರಾಂಕ್‌ಗಳಿಗೆ ಸಮಾನವಾದ ವೇತನವನ್ನು ಮಾತ್ರ ನೀಡುತ್ತಿದೆ ಎಂದು ಆರೋಪಿಸಲಾಗಿದೆ. ಅದೇ ಸಮಯದಲ್ಲಿ, ಕುಟುಂಬವು ತಮ್ಮ ಸಾಕು ನಾಯಿಗಾಗಿ ವಾರ್ಷಿಕವಾಗಿ 8554 ಫ್ರಾಂಕ್ಗಳನ್ನು ಖರ್ಚು ಮಾಡಿತು. ಪ್ರಕಾಶ್ ಹಿಂದೂಜಾ ಮತ್ತು ಕಮಲ್ ಹಿಂದುಜಾ ಅವರ ವಯಸ್ಸು ಮತ್ತು ಅನಾರೋಗ್ಯದ ಕಾರಣಕ್ಕಾಗಿ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲಿಲ್ಲ. ಆದರೆ ನ್ಯಾಯಾಲಯವು ಅಜಯ್ ಹಿಂದುಜಾ ಮತ್ತು ನಮ್ರತಾ ಹಿಂದುಜಾ ಅವರನ್ನು ಬಂಧಿಸಲು ಆದೇಶಿಸಿದೆ.
ಭಾರತದಲ್ಲಿ ತನ್ನ ಬೇರುಗಳನ್ನು ಹೊಂದಿರುವ ಹಿಂದೂಜಾ ಕುಟುಂಬವು 1980ರ ದಶಕದ ಅಂತ್ಯದಲ್ಲಿ ಸ್ವಿಟ್ಜರ್ಲೆಂಡ್ನಲ್ಲಿ ನೆಲೆಸಿತ್ತು. ಹಿಂದುಜಾ ಗ್ರೂಪ್ ಐಟಿ, ಮಾಧ್ಯಮ, ವಿದ್ಯುತ್, ರಿಯಲ್ ಎಸ್ಟೇಟ್ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ವ್ಯವಹಾರವನ್ನು ಹೊಂದಿದೆ. ಫೋರ್ಬ್ಸ್ ಪ್ರಕಾರ, ಹಿಂದೂಜಾ ಕುಟುಂಬದ ಒಟ್ಟು ಸಂಪತ್ತು ಸುಮಾರು 20 ಬಿಲಿಯನ್ ಡಾಲರ್ ಆಗಿದೆ.