Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಬೆಲೆ ಏರಿಕೆಯ ಪ್ರಧಾನಿ ಎಂದು ಹೆಸರುವಾಸಿಯಾದ ಮೋದಿಯವರ ಬೆಲೆ ಏರಿಕೆಯ ನೀತಿಯಿಂದ ದೇಶದ ಜನಸಾಮಾನ್ಯರ ಉಸಿರೇ ಇಲ್ಲದಂತಾಗಿತ್ತು:ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ:ಕಳೆದ ಹತ್ತು ವರ್ಷಗಳಿಂದ ನಮ್ಮ ದೇಶದ ಆಡಳಿತದ ಚುಕ್ಕಾಣಿ ಹಿಡಿದುಕೊಂಡು ನಮ್ಮ ಭಾರತ ದೇಶದ ಜನಸಾಮಾನ್ಯರನ್ನು ಬಡಜನರನ್ನು ಮಧ್ಯಮ ವರ್ಗದವರನ್ನು ರೈತರನ್ನು ಕೂಲಿ ಕಾರ್ಮಿಕರನ್ನು ದೇಶದ ವಿದ್ಯಾವಂತ ನಿರುದ್ಯೋಗಿ ಯುವಕರನ್ನು ತಮ್ಮ ಬೆಲೆ ಏರಿಕೆ ನೀತಿಯಿಂದ ಅವರಿಗೆ ಉಸಿರೇ ಇಲ್ಲದಂತೆ ಇದೇ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾಡಿತ್ತು ಇದು ಎಲ್ಲರಿಗೂ ತಿಳಿದಿದೆ.

ಇದೀಗ ಬಿಜೆಪಿಯವರು ರಾಜ್ಯ ಸರಕಾರ ಪೆಟ್ರೋಲ್ ಮೇಲೆ ತೆರಿಗೆಯನ್ನು ಕಡಿಮೆ ಮಟ್ಟದಲ್ಲಿ ಏರಿಸುವುದಕ್ಕೆ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಸಂಪೂರ್ಣವಾಗಿ ಇಳಿಕೆಯಾಗಿದ್ದು ತೈಲದ ಬೆಲೆ ಕಡಿಮೆಗೊಳಿಸುವಂತೆ ರಾಜ್ಯದ ಬಿಜೆಪಿ ನಾಯಕರು ಮೋದಿ ಹಾಗೂ ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆಯನ್ನು ಮಾಡಲಿ ಅದನ್ನು ಬಿಟ್ಟು ಅನಗತ್ಯವಾಗಿ ನಮ್ಮ ರಾಜ್ಯದ ಜನರಿಗೆ ಸುಳ್ಳು ಹೇಳಿ ಜನಸಾಮಾನ್ಯರನ್ನು ತಪ್ಪು ತಪ್ಪು ದಾರಿಗೆ ಎಳೆಯುವಂತಹ ಕೆಲಸವನ್ನು ಬಿಜೆಪಿಯ ರಾಜ್ಯ ನಾಯಕರು ಮಾಡುತ್ತಿದ್ದಾರೆ.

ಬಿಜೆಪಿ ಎಂದರೆ ಸುಳ್ಳು ಮೋದಿ ಎಂದರೆ ಸುಳ್ಳಿನ ನಾಯಕ ಎಂಬುದು ಇಡೀ ದೇಶದ ಜನರಿಗೆ ಇದೀಗಲೇ ತಿಳಿದಿದೆ ರಾಜ್ಯದ ಪಾಲಿಗೆ ಬರಬೇಕಾದ ಜಿಎಸ್‌ಟಿ ಹಣವನ್ನು ನೀಡದೆ ನಮ್ಮ ರಾಜ್ಯಕ್ಕೆ ಮೋಸಗೊಳಿಸಿದ ಕೇಂದ್ರದ ಬಿಜೆಪಿ ಸರಕಾರ ಹಾಗೂ ಅವರನ್ನು ಬೆಂಬಲಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರು ತಮ್ಮ ತಮ್ಮ ಸ್ಥಾನಕ್ಕೆ ಪ್ರಪ್ರಥಮವಾಗಿ ರಾಜೀನಾಮೆ ನೀಡಿ ನಮ್ಮ ರಾಜ್ಯಕ್ಕೆ ಬರಬೇಕಾದ ಹಣವನ್ನು ಒದಗಿಸುವಂತೆ ಕೇಂದ್ರದ ಬಿಜೆಪಿ ನಾಯಕರ ಮನೆ ಎದುರು ಪ್ರತಿಭಟನೆ ಮಾಡಲಿ.

ಈ ಹಿಂದೆ ಕಾಂಗ್ರೆಸ್ ಪಕ್ಷದ ಸರಕಾರ ಇ ರುವಾಗ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆ ಇರುವವರಿಗೆ ಉಚಿತವಾಗಿ ಚೆಕ್ ಪುಸ್ತಕ ಸಿಗುತ್ತಿತ್ತುಆದರೆ ಈಗ ಅದಕ್ಕೂ ನಾವು ಹಣ ನೀಡಬೇಕಾಗಿದೆ. ಎಟಿಎಂ ನಲ್ಲಿ ಹಣ ಡ್ರಾ ಮಾಡಿದರು ನಮ್ಮ ಅಕೌಂಟ್ ನಲ್ಲಿ ದುಡ್ಡು ಕಟ್ಟಾಗುತ್ತಿದೆ ಇದು ಮೋದಿ ಹಾಗೂ ಬಿಜೆಪಿ ಸರಕಾರ ನಮ್ಮ ದೇಶದ ಜನಸಾಮಾನ್ಯರಲ್ಲಿ ಈ ರೀತಿ ಲೂಟಿ ಮೋದಿ ಹಾಗೂ ಬಿಜೆಪಿ ಸರಕಾರ ನಮ್ಮ ದೇಶದ ಜನಸಾಮಾನ್ಯರಲ್ಲಿ ಈ ರೀತಿ ಲೂಟಿ ಮಾಡಿಕೊಂಡು ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡುತ್ತಿದೆ.

ಇದರ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಪ್ರತಿಭಟನೆ ಮಾಡಲಿ ಮಾನ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ರಾಜ್ಯದ ಒಳಿತಿಗಾಗಿ ಬಡ ಜನರ ಹಿತಕ್ಕಾಗಿ ನಮ್ಮ ರಾಜ್ಯವನ್ನು ಅಭಿವೃದ್ಧಿಪಡಿಸಲು ನಮ್ಮ ರಾಜ್ಯಕ್ಕಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಸ್ವಲ್ಪ ಹೆಚ್ಚಿಸಿರುತ್ತಾರೆ ಆದರೆ ಇದು ರಾಜ್ಯದ ಜನರಿಗಾಗಿ. ಮೋದಿಯವರು ಏರಿಸಿದ ಬೆಲೆ ಏರಿಕೆ ಕೇವಲ ಅಂಬಾನಿಹಾಗೂ ಅಧಾನಿಗೋಸ್ಕರ ಮತ್ತು ತಮ್ಮ ಅಪ್ತಾ ಉದ್ಯಮಿಗಳ ಪರವಾಗಿ ಎಂದು ಇಡೀ ದೇಶದ ಜನರಿಗೆ ಇದೀಗಲೇ ತಿಳಿದಿದೆ.

ಅದಕ್ಕೆ ತಕ್ಕ ಉತ್ತರವನ್ನು ನಮ್ಮ ದೇಶದ ಮತದಾರರು ಇದೀಗಲೇ ನೀಡಿರುತ್ತಾರೆ೦ದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment