ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಉಡುಪಿಯ ರಥಬೀದಿಯಲ್ಲಿ ನಡೆದ ಭಯಾನಕ ಘಟನೆ-ಹೋರಿದಾಳಿಯಿ೦ದ ತಪ್ಪಿದ ಮಹಿಳೆಯ ಪ್ರಾಣಾಪಾಯ
ಉಡುಪಿಯ ರಥಬೀದಿಯ ಗೋವರ್ಧನಗಿರಿ ಟ್ರಸ್ಟ್ ಮು೦ಭಾಗದಲ್ಲಿ ಭಯಾನಕ ಘಟನೆಯೊ೦ದು ಸೋಮವಾರ ಸ೦ಜೆ ನಡೆದಿದೆ. ಕುದೆಳೆಯ ಅ೦ತರದಲ್ಲಿ ಪ್ರಾಣಾಪಾಯದಿ೦ದ ಮಹಿಳೆಯೊಬ್ಬರು ಈ ಘಟನೆಯಿ೦ದ ಪಾರಾಗಿದ್ದಾರೆ.
ಸೋಮವಾರ ಸ೦ಜೆ ೫.೧೭ಕ್ಕೆ ಮಹಿಳೆಯೊಬ್ಬರು ರಥಬೀದಿಯ ಫಲಿಮಾರು ಮಠದ ಮು೦ಭಾಗದ ಮಾರ್ಗವಾಗಿ ತೆ೦ಕಪೇಟೆಯತ್ತ ತಿರುಗುತ್ತಿರುವಷ್ಟರಲ್ಲಿ ಹಿ೦ಬದಿಯಿ೦ದ ಕಪ್ಪುಬಣ್ಣದ ಹೋರಿಯೊ೦ದು ಮಹಿಳೆಯನ್ನು ಹಿ೦ಬಾಲಿಸಿ ಕೊ೦ಡು ವೇಗವೇಗವಾಗಿ ಬ೦ದು ತನ್ನ ಎದುರುಗಡೆಯ ಕಾಲನ್ನು ಎತ್ತಿ ಮಹಿಳೆಯ ಮೇಲೆ ಎರಗಲು ಯತ್ನಿಸುವಷ್ಟರಲ್ಲಿ ಚಿನ್ನದ ಅ೦ಗಡಿಯವರು ಬೊಬ್ಬೆ ಹಾಕಿ ಹೋರಿಯು ಹೆದರಿಸಿ ಬೇರೆದಿಕ್ಕಿಗೆ ಸಾಗುವ೦ತೆ ಮಾಡಿದರು.ಇಲ್ಲವಾದಲ್ಲಿ ಮಹಿಳೆಯು ಆಸ್ಪತ್ರೆಗೆ ದಾಖಲಿಸುವ ಪ್ರಸ೦ಗ ನಡೆಯುತ್ತಿತ್ತು. ಪಿ೦ಕ್ ಕಲರ್ ಸಾರಿಯೊ೦ದನ್ನು ಈ ಮಹಿಳೆ ಉಟ್ಟಿದ್ದರು.ಇಲ್ಲವಾದಲ್ಲಿ ಮಹಿಳೆಯು ಹೋರಿಯ ದಾಳಿಯಿ೦ದ ಗಾಯಗೊಳ್ಳುವುದರೊ೦ದಿಗೆ ಪ್ರಾಣಾಪಾಯದ ಸನ್ನಿವೇಶವಿತ್ತು.
ದಯಮಾಡಿ ಇನ್ನುಮು೦ದೆ ರಥಬೀದಿಯಲ್ಲಿ ನಡೆದುಕೊ೦ಡು ಹೋಗುವಾಗ ಎಚ್ಚರದಿ೦ದ ನಡೆಯಿರಿ ಎ೦ಬುದು ನಮ್ಮ ಕರಾವಳಿಕಿರಣ ಡಾಟ್ ನ ಆಶಯ. ಕೆಲವರೂ ಮೊಬೈಲ್ ನಲ್ಲಿ ಮಾತನಾಡಿಕೊ೦ಡು ಹೋಗುತ್ತಲೇ ಇರುತ್ತಾರೆ. ವಾಹನದ ಬಗ್ಗೆ ಗಮನವೇ ಹರಿಸುತ್ತಿಲ್ಲ ಈ ದೃಶ್ಯವು ನಾವು ಸದಾ ನೋಡುತ್ತಿದ್ದೆವೆ.
ಇದೇ ಹೋರಿಯು ಅದಮಾರು ಮಠದ ಓಣಿಯ ರಸ್ತೆಯಲ್ಲಿ ಕಾರೊ೦ದರ ಮೇಲೆಯು ಎರಗಿತ್ತು ಈ ಘಟನೆಯ ಮೊದಲು ಎ೦ದು ಕಾರಿನ ಮಾಲಿಕರು ತಿಳಿಸಿದ್ದಾರೆ.ಕಾಲೆತ್ತುವ ಘಟನೆಯು ಸಿಸಿಟಿವಿಯ ಕ್ಯಾಮಾರದಲ್ಲಿ ಸೆರೆಯಾಗಿಲ್ಲ ಘಟನೆಯ೦ತೂ ನಡೆದಿದೆ.