ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಬದಲಾಯಿತು ವಿಚಾರಣೆ ಭಾಷೆ; ಪೊಲೀಸರ ಕಾಲಿಗೆ ಬಿದ್ದ ಕೊಲೆ ಆರೋಪಿ ದರ್ಶನ್

ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರು ಕೊಲೆ ಮಾಡಿದ್ದಾರೆ ಎಂದು ಸಾಬೀತು ಮಾಡಲು ಅನೇಕ ಸಾಕ್ಷಿಗಳು ಸಿಗುತ್ತಿವೆ ಎನ್ನಲಾಗಿದೆ. ಮೊದಲ ಐದು ದಿನದ ವಿಚಾರಣೆ ವೇಳೆ ದರ್ಶನ್ ಅವರು ತುಟಿ ಬಿಚ್ಚಿರಲಿಲ್ಲ ಎನ್ನಲಾಗಿದೆ. ಇತರರ ಹೇಳಿಕೆ ಇಟ್ಟುಕೊಂಡು ವಿಚಾರಣೆ ಮಾಡಲಾಗುತ್ತಿತ್ತು. ಈಗ ದರ್ಶನ್ ಅವರು ನಿಧಾನವಾಗಿ ಬಾಯ್ಬಿಡುತ್ತಿದ್ದಾರೆ ಎನ್ನಲಾಗಿದೆ. ಪೊಲೀಸರ ಕಾಲಿಗೂ ಬೀಳೋಕೆ ಅವರು ಹೋಗಿದ್ದಾರೆ ಎಂದು ವರದಿ ಆಗಿದೆ.

ಮೊದಲ ಐದು ದಿನದ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ತುಟಿ ಬಿಚ್ಚಿರಲಿಲ್ಲ. ಏನೇ ಕೇಳಿದ್ರು ಗೊತ್ತಿಲ್ಲ, ನಾನು ಮಾಡಿಲ್ಲ ಎಂದು ಉತ್ತರ ಕೊಡುತ್ತಿದ್ದರು. ದರ್ಶನ್ ಪೊಲೀಸರಿಗೆ ಉಡಾಫೆಯಿಂದ ಉತ್ತರ ಕೊಡುತ್ತಿದ್ದರು. ಎರಡನೇ ಬಾರಿ ಕಸ್ಟಡಿಗೆ ಪಡೆದಾಗ ನಟ ದರ್ಶನ್ ಪೇಚಾಟ ಶುರುವಾಗಿದೆ. ಪೊಲೀಸ್ ಭಾಷೆಯಲ್ಲೇ ತನಿಖೆ ನಡೆಸಿದಾಗ ದರ್ಶನ್ ಸೈಲಂಟ್ ಆಗಿದ್ದಾರಂತೆ ‘ಸರ್ ನನ್ನ ಬಿಟ್ಟು ಬಿಡಿ’ ಎಂದು ಪೊಲೀಸರ ಕಾಲಿಗೆ ಬೀಳಲು ಹೋಗಿದ್ದಾರೆ ಎಂದು ವರದಿ ಆಗಿದೆ.

ದರ್ಶನ್ ಸ್ಟಾರ್ ಹೀರೋ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರಿತ್ತು. ಈ ಕಾರಣಕ್ಕೆ ದರ್ಶನ್​ ಅವರನ್ನು ಸರಳವಾಗಿ ಪ್ರಶ್ನೆ ಮಾಡುವ ಆಲೋಚನೆ ಪೊಲೀಸರಿಗೆ ಇತ್ತು. ಆದರೆ, ಇದಕ್ಕೆಲ್ಲ ಪೊಲೀಸರಿಗೆ ಸಿಕ್ಕಿದ್ದು ಉಡಾಫೆಯ ಉತ್ತರ. ಹೀಗಾಗಿ, ತಮ್ಮ ಸ್ಟೈಲ್​ನಲ್ಲಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಎರಡನೇ ಬಾರಿ ಕಸ್ಟಡಿಗೆ ಹೋದಾಗ ಪೊಲೀಸ್ ಸ್ಟೈಲ್‌ನಲ್ಲಿ ಪ್ರಶ್ನೆ ಮಡಲಾಗಿದೆ. ಸರ್ ನನ್ನ ಬಿಟ್ಟು ಬಿಡಿ ಎಂದು ಪರಿಪರಿಯಾಗಿ ದರ್ಶನ್ ಕೇಳಿಕೊಂಡಿದ್ದಾರಂತೆ. ‘ಸರ್ ನಿಮಗೆ ಕೈ ಮುಗಿದು ಕೇಳಿಕೊಳ್ತೇನೆ ನನ್ನ ಬಿಟ್ಟು ಬಿಡಿ’ ಎಂದು ಅವರು ಕೇಳಿದ್ದಾರಂತೆ. ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಾಗಿದೆ ನನ್ನ ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದಿದಾರಂತೆ.

ದರ್ಶನ್ ನೋಡಲು ಯಾರೂ ಬಂದಿಲ್ಲ..

ದರ್ಶನ್ ಅವರು ಕುಟುಂಬದವರನ್ನು ತಮ್ಮಿಂದ ದೂರವೇ ಇಟ್ಟಿದ್ದರು. ಪತ್ನಿ ಜಯಲಕ್ಷ್ಮಿ ಅವರನ್ನು ದೂರ ಇಟ್ಟಿದ್ದರು. ತಾಯಿ ಮೀನಾ ತುಗೂದೀಪ ಕೂಡ ದರ್ಶನ್ ಜೊತೆ ಇಲ್ಲ. ಹೀಗಾಗಿ ಅವರ್ಯಾರೂ ದರ್ಶನ್ ಅವರನ್ನು ನೋಡಲು ಬಂದಿಲ್ಲ. ಇನ್ನು ಆಪ್ತರು ಎನಿಸಿಕೊಂಡ ಕೆಲವರು ಕೂಡ ದರ್ಶನ್​ನಿಂದ ದೂರವೇ ಇದ್ದಾರೆ. ಇನ್ನು ಕೆಲವು ಆಪ್ತರು ಜೈಲಿನಲ್ಲೇ ಇದ್ದಾರೆ. ಹೀಗಾಗಿ, ಅವರನ್ನು ನೋಡೋಕೆ ಯಾರೆಂದರೆ ಯಾರೂ ಬಂದಿಲ್ಲ.

No Comments

Leave A Comment