ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಮಣಿಪುರ: ಸಿಎಂ ಎನ್ ಬಿರೇನ್ ಸಿಂಗ್ ಬಂಗಲೆ ಬಳಿ ಭಾರೀ ಅಗ್ನಿ ಅವಘಡ!
ಗುವಾಹಟಿ: ಮಣಿಪುರದ ಮಾಜಿ ಐಎಎಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಶನಿವಾರ ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದು ಬಾಬುಪಾರಾದಲ್ಲಿರುವ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಅಧಿಕೃತ ಬಂಗಲೆಯ ಇನ್ನೊಂದು ಬದಿಯಲ್ಲಿದೆ. ರಾಜ್ಯ ಸಚಿವಾಲಯವೂ ಸಮೀಪದಲ್ಲಿದ್ದು, ಹೆಚ್ಚಿನ ಭದ್ರತೆ ಹೊಂದಿರುವ ಪ್ರದೇಶವಾಗಿದೆ.
ಈ ಕಟ್ಟಡ ಗೋವಾದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮಾಜಿ ಐಎಎಸ್ ಅಧಿಕಾರಿ ತಂಗ್ಖೋಪಾವೊ ಕಿಪ್ಗೆನ್ ಅವರ ಕುಟುಂಬದ ಒಡೆತನದಲ್ಲಿದೆ. ಅವರು 2005 ರಲ್ಲಿ ನಿಧನರಾದರು.ಕಳೆದ ವರ್ಷದಿಂದ ಕಟ್ಟಡವನ್ನು ಅನಾಥವಾಗಿ ಬಿಡಲಾಗಿದೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದ ತಕ್ಷಣ ಮೂರು ಅಗ್ವಿಶಾಮಕ ವಾಹನಗಳು ಸ್ಥಳಕ್ಕೆ ಧಾರಿವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.
ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಮಣಿಪುರದಲ್ಲಿ ಹಿಂಸಾಚಾರ ನಡೆದಾಗಿನಿಂದ ಮನೆಯನ್ನು ಅನಾಥವಾಗಿ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬೆಂಕಿಯ ಪರಿಣಾಮವಾಗಿ, ಮನೆಯ ಮೊದಲ ಮಹಡಿ ಭಾಗಶಃ ಸುಟ್ಟುಹೋಗಿದೆ, ಬೆಂಕಿಗೆ ನಿಖರವಾದ ಕಾರಣ ತಿಳಿದಿಲ್ಲ. ಘಟನೆಯ ಸತ್ಯತೆ ಕಂಡುಹಿಡಿಯಲು ತನಿಖೆಗಾಗಿ ಇಂಫಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.