ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

POCSO Case: ಪೋಕ್ಸೋ ಪ್ರಕರಣದಲ್ಲಿ ಬಿಎಸ್​ ಯಡಿಯೂರಪ್ಪಗೆ ಬಿಗ್​ ರಿಲೀಫ್​

ಬೆಂಗಳೂರು, ಜೂನ್​ 14: ತಮ್ಮ ವಿರುದ್ಧದ ಪೊಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಿಗ್​ ರಿಲೀಫ್​ ಸಿಕ್ಕಿದೆ. ತನಿಖೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಜೂ. 17ರಂದು ಹಾಜರಾಗುವುದಾಗಿ ಬಿ.ಎಸ್ ಯಡಿಯೂರಪ್ಪ ಉತ್ತರಿಸಿದ್ದಾರೆ. ಅವರಿಗೆ ವಯಸ್ಸಾಗಿದ್ದು ಸಹಜವಾಗಿಯೇ ಅನಾರೋಗ್ಯ ಸಮಸ್ಯೆಗಳಿರುತ್ತವೆ. ಹೀಗಾಗಿ ಬಂಧಿಸಿ ತನಿಖೆಗೊಳಪಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.

ಪೊಲೀಸರು ಸಲ್ಲಿಸಿದ್ದ ಅರ್ಜಿ ಮನ್ನಿಸಿದ ಕೋರ್ಟ್ ಯಡಿಯೂರಪ್ಪಗೆ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಕೇಸ್ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾ.ಕೃಷ್ಣ ಎಸ್​ ದೀಕ್ಷಿತ್​​​​​ರವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ಮಾಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದೀರಾ? ಎಂದು ಯಡಿಯೂರಪ್ಪ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿದ್ದು, ಹೈಕೋರ್ಟ್ ಆದೇಶ ಪಾಲಿಸಲಾಗುವುದು ಎಂದು ಸಿ.ವಿ.ನಾಗೇಶ್ ಹೇಳಿದ್ದಾರೆ.

ಎಫ್ಐಆರ್ ನಂತರ ತನಿಖೆ ಯಾವಾಗ ಆರಂಭವಾಯಿತು ಎಂದು ಹೈಕೋರ್ಟ್ ಪ್ರಶ್ನಿಸಿದ್ದು, ಮಾರ್ಚ್ 14ರ ಎಫ್ಐಆರ್ ನಂತರ ಏ.12ರಂದು ನೋಟಿಸ್ ನೀಡಿದ್ದಾರೆ. ಅಲ್ಲಿಯವರೆಗೆ ಪೊಲೀಸರು ಏನು ಮಾಡಿದರೆಂಬುದು ತಿಳಿದಿಲ್ಲ ಎಂದು ಸಿ.ವಿ.ನಾಗೇಶ್ ವಾದಿಸಿದರು.

ಈಗ ಬಿಎಸ್​ವೈ ಬಂಧನ ಏಕೆ ಬೇಕಾಗಿದೆ ಎಂದು ಹೈಕೋರ್ಟ್ ಮರು ಪ್ರಶ್ನಿಸಿದ್ದು, ಜೂನ್ 12ರಂದು ಹಾಜರಾಗುವಂತೆ ಬಿಎಸ್​ವೈಗೆ ನೋಟಿಸ್ ನೀಡಲಾಗಿತ್ತು. ಮೊಬೈಲ್‌ನಲ್ಲಿದ್ದ ವಿಡಿಯೋ, ಧ್ವನಿ ಪರೀಕ್ಷೆ ನಂತರ ನೋಟಿಸ್ ನೀಡಲಾಯಿತು. ಹಾಜರಾಗದ ಕಾರಣಕ್ಕೆ ಬಂಧನದ ವಾರಂಟ್ ಪಡೆಯಲಾಗಿದೆ. ಮೇ 13ರಂದು ಎಫ್ಎಸ್ಎಲ್ ವರದಿ ಬಂದಿದೆ. ಸುಟ್ಟ ಮೊಬೈಲ್ ಚಿಪ್​ನಲ್ಲಿದ್ದ ಡಾಟಾ ತೆಗೆಯಲು ಗುಜರಾತ್ FSLಗೆ ಕಳುಹಿಸಲಾಯಿತು. ಅದಾದ ನಂತರ ಧ್ವನಿ ಪರೀಕ್ಷೆಗೆ ಬೆಂಗಳೂರು ಎಫ್ಎಸ್ಎಲ್​ಗೆ ಕಳುಹಿಸಲಾಯಿತು ಎಂದು ಹೈಕೋರ್ಟ್​​​ಗೆ ಎಡಿಜಿಪಿ ಬಿ.ಕೆ.ಸಿಂಗ್ ಹೇಳಿದ್ದಾರೆ.

ಬಿಎಸ್​​​ವೈ ಮನೆಯಲ್ಲಿಯೇ ಈ ಘಟನೆ ನಡೆದಿದೆ. ಅವರ ಮನೆಯಲ್ಲಿನ ಸಿಸಿ ಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ. ತನಿಖೆ ಹೇಗೆ ನಡೆಸಬೇಕೆಂಬುದನ್ನ ತನಿಖಾಧಿಕಾರಿ ನಿರ್ಧರಿಸಬೇಕು ಎಂದು ಹೈಕೋರ್ಟ್ ಹೇಳಿದ್ದಾರೆ.

kiniudupi@rediffmail.com

No Comments

Leave A Comment