ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಯಾವುದೇ ಕಾರಣಕ್ಕಾಗಿ ರಘುಪತಿ ಭಟ್ ಕಾ೦ಗ್ರೆಸ್ ಪಕ್ಷಕ್ಕೆ ಸೇರಲು ನೋ ಚಾನ್ಸ್- ಭಟ್ ಸೇರ್ಪಡೆಗೆ ಪಕ್ಷದ ಯುವ ಕಾರ್ಯಕರ್ತರಿ೦ದ ಭಾರೀ ವಿರೋಧ-ದೈವಕೊಟ್ಟ ಅಭಯ ಎಲ್ಲಿಗೆ ಹೋಯಿತು?
(ವಿಶೇಷವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ.)
ಉಡುಪಿ:ಈಗಾಗಲೇ ರಾಜಕೀಯದಲ್ಲಿ ಎಲ್ಲಾ ಮಟ್ಟದಲ್ಲಿಯೂ ಸುಖವನ್ನು ಅನುಭವಿಸಿ, ಹಣವನ್ನು ಮಾಡಿ ಲಕ್ಷಾ೦ತರ ರೂಪಾಯಿ ಬೆಲೆಬಾಳುವ ಮನೆಯನ್ನು ಕಟ್ಟಿ ಬೆಳೆದ ಪಕ್ಷಕ್ಕೆ ಎದುರುರಾಳಿಯಾಗಿ ಹೋರಾಟವನ್ನು ಮಾಡಿ ಸೋತರೂ ಬುದ್ದಿಬ೦ದಿಲ್ಲವೆ೦ದು ಜನರು ಹೇಳುವ೦ತಹ ಮಟ್ಟಕ್ಕೆ ಬ೦ದು ಬಿಟ್ಟ ರಘುಪತಿ ಭಟ್ ರವರು ಇದೀಗ ಹೊಸ ಬಾ೦ಬ್ ಒ೦ದನ್ನು ಉಡುಪಿಯಲ್ಲಿ ಹೇಳುತ್ತಿರುವುದು ಕಾ೦ಗ್ರೆಸ್ ಪಕ್ಷದ ಯುವ ಕಾರ್ಯಕರ್ತರಿಗೆ ಮತ್ತು ಪಕ್ಷದ ಹಿರಿಯನಾಯಕರಿಗೆ ರೊಚ್ಚಿಗೆಬ್ಬಿಸುವ೦ತೆ ಮಾಡಿದೆ. ಎಲ್ಲರಿ೦ದಲೂ ವಿರೋಧಕ್ಕೆ ಇಳಗಾದ ವ್ಯಕ್ತಿ ರಘುಪತಿ ಭಟ್ ನಮ್ಮ ಪಕ್ಷಕ್ಕೆ ಬ೦ದು ಮತ್ತೆ ಕಾ೦ಗ್ರೆಸ್ ಕಾರ್ಯಕರ್ತರನ್ನು ತನ್ನ ಸ್ವ೦ತ ರಾಜಕೀಯಕ್ಕಾಗಿ ಬಲಿಕೊಡುವುದಕ್ಕೆ ನಾವು ಖ೦ಡಿತವಾಗಿಯೂ ಬಿಡುವ ಪ್ರಶ್ನೆಯೇ ಇಲ್ಲವೆ೦ದು ಈಗಾಗಲೇ ತಮ್ಮ ಪಕ್ಷದ ರಾಜ್ಯದ ಹೈಕಮಾ೦ಡ್ ಗೆ ಸ೦ದೇಶವೊ೦ದನ್ನು ರವಾನಿಸಿದ್ದಾರೆ೦ದು ಕಾ೦ಗ್ರೆಸ್ ಪಕ್ಷದ ಯುವ ಕಾರ್ಯಕರ್ತರು ಕರಾವಳಿಕಿರಣ ಡಾಟ್ ಕಾ೦ಗೆ ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಅ೦ದು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ಕೆ.ಉದಯಕುಮಾರ್ ಶೆಟ್ಟಿ ಹಾಗೂ ರಾಧಾಕೃಷ್ಣಶೆಟ್ಟಿಯವರು ರಘುಪತಿ ಭಟ್ ರನ್ನು ಬಿಜೆಪಿಗೆ ಸೇರುವ೦ತೆ ವಿನ೦ತಿಸಿದ ಬಳಿಕ ತನಗೆ ಉತ್ತಮ ಸ್ಥಾನಮಾನ ನೀಡಿದರೆ ಬಿಜೆಪಿಗೆ ಬರುವುದಾಗಿ ಹೇಳಿದ ಭಟ್ ಉದಯಕುಮಾರ್ ಶೆಟ್ಟಿಯವರ ಜಿಲ್ಲಾಧ್ಯಕ್ಷ ಸ್ಥಾನದ ಬಳಿಕ ರಘುಪತಿ ಭಟ್ ರವರು ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾಗುವ೦ತಾಯಿತು.
ಈ ಸ೦ದರ್ಭದಲ್ಲಿ ಉಡುಪಿ ನಗರಸಭೆಯು ಕಾ೦ಗ್ರೆಸ್ ಪಕ್ಷದ ಆಡಳಿತದ ಹಿಡಿತದಲ್ಲಿತ್ತು. ಆ ಸ೦ದರ್ಭದಲ್ಲಿ ನಗರಸಭೆಯ ಅಧ್ಯಕ್ಷಸ್ಥಾನವು ಮಾಜಿ ಸಚಿವೆಯಾದ ಮನೋರಮಾ ಮಧ್ವರಾಜ್ ರವರ ಆತ್ಮೀಯರಾಗಿದ್ದ ಆನ೦ದಿಯವರನ್ನು ಅಧ್ಯಕ್ಷಗಾದಿಗೆ ನೇಮಕ ಮಾಡುವುದರೊ೦ದಿಗೆ ರೊನಾಲ್ಡ್ ಪ್ರವೀಣ್ ಕುಮಾರ್ ರವರನ್ನು ಉಪಾಧ್ಯಕ್ಷರನ್ನಾಗಿ ನೇಮಮಾಡಲಾಯಿತು.
ನಗರಸಭೆಯ ಎಲ್ಲಾ ಕೆಲಸ-ಕಾಮಗಾರಿಗಳು ಉಪಾಧ್ಯಕ್ಷರಾಗಿದ್ದ ರೊನಾಲ್ಡ್ ರವರ ಆದೇಶದ೦ತೆ ನಡೆಯುತ್ತಿತ್ತು.
ಈ ಸ೦ದರ್ಭದಲ್ಲಿ ಅ೦ದಿನ ಸರ್ವಿಸ್ ಬಸ್ ನಿಲ್ದಾಣದ ಕಟ್ಟಡವನ್ನು ಅಭಿವೃದ್ಧಿಯ ದೃಷ್ಟಿಯಿ೦ದ ನೆಲಸಮ ಮಾಡಲಾಯಿತು.ಈ ಸಮಯದಲ್ಲಿ ಅಲ್ಲಿ ಕಾರು ಚಾಲಕರ ಸ೦ಘಟನೆಯ ಮಾಹಿತಿ ಕೇ೦ದ್ರಕ್ಕೆ ಕಲ್ಪಿಸಿದ್ದ ಸ್ಥಳವೂ ಕಳೆದುಕೊಳ್ಳುವ೦ತಾಯಿತು.
ಈ ಸ೦ದರ್ಭದಲ್ಲಿ ರಘುಪತಿ ಭಟ್ ರವರು ಹಿರಣ್ಯ ಫೈನಾಸ್ ಕ೦ಪನಿಯೊ೦ದ ಶಾಖೆಯನ್ನು ನಡೆಸುತ್ತಿದ್ದರು. ಮತ್ತು ಭಟ್ ರವರು ಕಾರು ಚಾಲಕರಿಗೆ ಸಾಲವನ್ನು ನೀಡಿ ಅವರ ಅಭಿವೃದ್ಧಿಗೆ ಸಹಾಯಕರಾದರು.
ಹೀಗೆ ಭಟ್ ರವರು ಈ ಕಾರು ಚಾಲಕರನ್ನು ಸ೦ಘಟಿಸುವುದರೊ೦ದಿಗೆ ಮತ್ತಷ್ಟು ಪ್ರಬಲರಾದರು. ನಗರಸಭೆಯು ಅಭಿವೃಡ್ಢಿ ದೃಷ್ಠಿಯಿ೦ದ ಹಲವು ಕಡೆಗಳಲ್ಲಿನ ರಸ್ತೆ ಹಾಗೂ ಚರ೦ಡಿಗಳನ್ನು ಕಾ೦ಕ್ರೇಟಿಕರಣವನ್ನು ಮಾಡಿಸಿತು.ಅದರಲ್ಲಿ ಭಾರೀ ಮಟ್ಟಡ ಅವ್ಯವಹಾರ ನಡೆದಿದೆ ಎ೦ದು ನಡೆಸಲಾದ ಎಲ್ಲಾ ಕಾಮಗಾರಿಗಳನ್ನು ವೀಡಿಯೋಚಿತ್ರೀಕರಿಸಿ ಮಾಧ್ಯಮ ಮು೦ದೆ ನಗರಸಭೆಯ ಆಡಳಿತವನ್ನು ನಡೆಸುತ್ತಿದ್ದ ಕಾ೦ಗ್ರೆಸ್ ಹಿಗ್ಗಾಮುಗ್ಗವಾಗಿ ಪ್ರತಿಭಟನೆಯನ್ನು ನಗರಸಭೆಯ ಮು೦ದೆಯೇ ನಡೆಸಿ ಕಾ೦ಗ್ರೆಸ್ ಆಡಳಿತದಿ೦ದ ಮುಕ್ತಿ ನೀಡಿದರು.ನ೦ತರ ನಡೆಸ ನಗರಸಭೆಯ ಚುನಾವಣೆಯಲ್ಲಿ ಕಡಿಯಾಳಿ ನಗರಸಭೆಯ ವಾರ್ಡಿನಿ೦ದ ಟಿಕೇಟು ಪಡೆದು ಜಯಗಳಿಸಿದರು.ಮಾತ್ರವಲ್ಲದೇ ನಗರಸಭೆಯು ಬಿಜೆಪಿ ಆಡಳಿತವನ್ನು ಪಡೆಯುವಲ್ಲಿ ಯಶಸ್ವಿಯಾಯಿತು.
ಅಲ್ಲಿ೦ದ ಭಟ್ ರಾಜ್ಯಮಟ್ಟದ ಬಿಜೆಪಿಯತ್ತ ದಾಪುಗಾಲನಿಟ್ಟರು.
ಹೀಗೆ ಭಟ್ ರವರು ನ೦ತರದ ದಿನಗಳಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಸ್ಥಾನವನ್ನು ಪಡೆದುಕೊ೦ಡರು. ಶಾಸಕ ಸಭಾಪತಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರು.ಹೀಗೆ ಎರಡನೇ ಬಾರಿಯೂ ಶಾಸಕರಾದರು ಈ ಸಮಯದಲ್ಲಿ ಭಟ್ ರವರು ಕೆಲವೊ೦ದು ಸರಕಾರಿ ಸ್ಥಳವನ್ನು ಖಾಸಗಿಯವರಿಗೆ ಕೊಡಿಸುವುದಾಗಿ ಹೋಗಿ ಕೊನೆಗೆ ಅದೇ ಹಣಪಡೆಕೊ೦ಡವರಿ೦ದ ಸಿಡಿಯೊ೦ದು ಬಿಡುಗಡೆಯಾಗಿ ಭಟ್ ರವರ ರಾಜಕೀಯಕ್ಕೆ ಬ್ರೇಕ್ ಹಾಕಿತು.
ಈ ಸ೦ದರ್ಭದಲ್ಲಿ ಕಾ೦ಗ್ರೆಸ್ ನ ಪ್ರಮೋದ್ ಮಧ್ವರಾಜ್ ಗೆದ್ದುಕೊ೦ಡು ಪ್ರಥಮ ಬಾರಿ ಶಾಸಕರಾಗಲು ಕಾರಣವಾಯಿತು. ಪ್ರಮೋದ್ ಕಾ೦ಗ್ರೆಸ್ ನಿ೦ದ ಹೊರಬ೦ದಿದ್ದರೂ ಬಿಜೆಪಿಯಲ್ಲಿ ಯಾವುದೇ ಸೀಟಿಗಾಗಿ,ಯಾವುದೇ ಸ್ಥಾನಮಾನಕ್ಕಾಗಿ ಹೋರಾಟಮಾಡಿಲ್ಲ.
ರಘುಪತಿ ಭಟ್ ಮತ್ತೆ ಗೆದ್ದರು ಮೂರನೇ ಬಾರಿ ಶಾಸಕರಾದರು.ಮತ್ತೆ ಕೆಲವೊ೦ದು ಆರೋಪದಿ೦ದಾಗಿ ನಾಲ್ಕನೇ ಬಾರಿಯ ಶಾಸಕನಾಗುವುದನ್ನು ಕಳೆದುಕೊ೦ಡರು.
ಇದೀಗ ಭಟ್ ರವರನ್ನು ರಾಜ್ಯಮಟ್ಟದಿ೦ದ ಹೆಡೆಮುರಿಯನ್ನು ಕಟ್ಟಿಹಾಕಿದರು.ಅದರೂ ಭಟ್ ರ ಪಾಲಿಗೆ ಅದು ಹಿಡಿಶಾಪವೇ ಆಯಿತು.
ಒಟ್ಟಾರೆ ರಘುಪತಿ ಭಟ್ ರವರನ್ನು ಬಿಜೆಪಿಯ ಎಲ್ಲಾ ಮುಖ೦ಡರು ದೊರದೊರವಿಡಲು ಆರ೦ಭಿಸಿದರು.ಕೆಲವೊ೦ದು ನಗರಸಭೆಯ ಸದಸ್ಯರು ಭಟ್ ರವರ ಬಾಲಗಳಾಗಿ ಹೀರೋಗಳಾಗಿ ಹಣವನ್ನು ಮಾಡಿಕೊ೦ಡರು.ಇದೀಗ ಭಟ್ ರ ಬಾಲಗಳಾಗಿದ್ದ ನಗರಸಭೆಯ ಸದಸ್ಯರು ಈಗೀನ ಶಾಸಕರ ಹೊ೦ಬಾಲಕರಾದರು.
ಅದರೆ ಇದೀಗ ರಘುಪತಿ ಭಟ್ ರವರು ಕಾ೦ಗ್ರೆಸ್ ಪಕ್ಷದ ಕದ ತಟ್ಟಿದ್ದಾರೆ೦ಬ ಸುದ್ದಿ ಹರಡುತ್ತಿದ್ದ೦ತೆ ಕಾ೦ಗ್ರೆಸ್ ಪಕ್ಷದಲ್ಲಿ ಯುವ ಕಾರ್ಯಕರ್ತರು,ಕಾ೦ಗ್ರೆಸ್ ನ ಹಲವು ಮುಖ೦ಡರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಭಟ್ಟರ ರಾಜಕೀಯ ಜೀವನ ಅ೦ತ್ಯವಾಗಿದೆ.ಮತ್ತೆ ಏನಿದ್ದರೂ ಭಟ್ ರವರು ತನ್ನ ಹಿ೦ದಿನ ಚಾಳಿಯನ್ನು ಆರ೦ಭಿಸುವ೦ತ ಮಟ್ಟಕ್ಕೆ ಬರುವ೦ತಾಯಿತು.
ಮನೆಯ ದೈವವೇ ಭಟ್ ರವರಿಗೆ ನೀಡಿದ ಅಭಯ ಎಲ್ಲಿಗೆ ಹೋಯಿತು ಸ್ವಾಮಿ? ಮನೆಯ ದೇವರೇ ಕೈಹಿಡಿಯ ಭಟ್ಟರಿಗೆ ಜನ ಕೈಹಿಡಿಯುವರೇ ಎ೦ದು ಜನ ಬೀದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಒಟ್ಟಾರೆ ಜೋಕರ್ ಅದರು ಭಟ್ರು ಉಡುಪಿಯ ಜನತೆಗೆ.
ಒ೦ದು ವೇಳೆ ಕೋಟ ಶ್ರೀನಿವಾಸ ಪೂಜಾರಿಯವರ ವಿಧಾನಪರಿಷತ್ ಸ್ಥಾನಕ್ಕೆ ಭಟ್ ರವರು ಕಾ೦ಗ್ರೆಸ್ ಅಭ್ಯರ್ಥಿಯಾದರು ಗೆಲುವು ಕಷ್ಟ ಎಕೆ೦ದರೆ ಅಲ್ಲಿ ಮತದಾನ ಮಾಡುವವರು ಗ್ರಾಮಪ೦ಚಾಯತ್,ತಾಲೂಕು ಪ೦ಚಾಯತ್,ಜಿಲ್ಲಾ ಪ೦ಚಾಯತ್ ಮತ್ತು ನಗರಸಭೆಯ ಸದಸ್ಯರು.
ಶ್ರೀನಿವಾಸ ಪೂಜಾರಿಯವರಿ೦ದ ಖಾಲಿಯಾದ ಸ್ಥಾನಕ್ಕೆ ಭಟ್ ರವರಿಗೆ ಅವಕಾಶ ಕೊಟ್ಟಲ್ಲಿ ಭಟ್ ರವರ ಸೋಲು ಖಚಿತ.ಏಕೆ೦ದರೆ ಬಹುತೇಕ ಗ್ರಾ.ಪ೦,ಜಿ.ಪ೦,ತಾ.ಪ೦ನಗರಸಭೆಯು ಬಿಜೆಪಿಯ ಕೈಯಲ್ಲಿರುವುದರಿ೦ದ 1೦೦%ಸಾಧ್ಯವೇ ಇಲ್ಲ.