ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಗಾಯಕ ಚಂದನ್ ಶೆಟ್ಟಿ-ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು-ವಿಚ್ಛೇದನ ಪಡೆದ ತಾರಾಜೋಡಿ
ಸ್ಯಾಂಡಲ್ ವುಡ್ ನ ಖ್ಯಾತ ತಾರಾಜೋಡಿ, ಕ್ಯೂಟ್ ಕಪಲ್ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಇದ್ದಕ್ಕಿದ್ದಂತೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ.
ಮೊನ್ನೆ ಮೊನ್ನೆಯವರೆಗೂ ಜೊತೆಯಾಗಿಯೇ ಇದ್ದ, ರೀಲ್ಸ್ ಗಳ ಮೂಲಕ ನಕ್ಕು ನಗಿಸಿದ್ದ ಜೋಡಿ ಇದೀಗ ಏಕಾಏಕಿ ವಿಚ್ಛೇದನ ನಿರ್ಧಾರ ಕೈಗೊಳ್ಳಲು ಕಾರಣವೇನು? ಎಂಬುದು ನುಗೂಢವಾಗಿದೆ.
ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಚಂದನ್ ಹಾಗೂ ನಿವೇದಿತಾ ನಡುವೆ ಸ್ನೇಹವಿತ್ತು. ಬಳಿಕ ಮೈಸೂರು ದಸರಾದಲ್ಲಿ ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಳಿಗೆ ಪ್ರಪೋಸ್ ಮಾಡುವ ಮೂಲಕ ಪ್ರೇಮ ನಿವೇದನೆ ಮಾಡಿದ್ದರು. ನಂತರದಲ್ಲಿ ಎರಡು ಕುಟುಂಬದ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ವಿವಾಹವಾಗಿದ್ದರು.
ಚಂದನ್ ರ್ಯಾಪ್ ಸಾಂಗ್ ಮೂಲಕ ಜನಪ್ರಿಯತೆ ಗಳಿಸಿದ್ದರೆ, ನಿವೇದಿತಾ ಕಿರುತೆರೆ ಕಾಮಿಡಿ ಶೋಗಳಲ್ಲಿ ಹೆಸರು ಮಾಡಿದ್ದರು. ಅಲ್ಲದೇ ಚಂದನ್ ಹಾಗೂ ನಿವೇದಿತಾ ಆಗಾಗ ರೀಲ್ಸ್ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿಯೂ ಗಮನ ಸೆಳೆಯುತ್ತಿದ್ದರು. ಯೂಟ್ಯೂಬ್ ಚಾನಲ್ ನಲ್ಲಿಯೂ ಇಬ್ಬರೂ ತೊಡಗಿಸಿಕೊಂಡಿದ್ದರು. ಪ್ರೀತಿಸಿ ವಿವಾಹವಾಗಿ ಕರ್ನಾಟಕದ ಮನೆಮಾತಾಗಿದ್ದ ಕ್ಯೂಟ್ ಜೋಡಿಯ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದು, ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ 2ನೇ ಕೌಟುಂಬಿಕ ಹೆಚ್ಚುವರಿ ಕೋರ್ಟ್ ಗೆ ಹಾಜರಾಗಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಇಬ್ಬರಲ್ಲಿಯೂ ತಾವು ದೂರಾಗುತ್ತಿರುವ ಬಗ್ಗೆ ಬೇಸರ ಅಥವಾ ನೋವು ಇಲ್ಲ. ಇಬ್ಬರೂ ನಗುನಗುತ್ತಲೇ ಕೋರ್ಟ್ ಹಾಲ್ ನಲ್ಲಿ ಕುಳಿತಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯಸ್ಥಿಕೆದಾರರಿಂದ ಇಬ್ಬರ ಮನವೊಲಿಕೆ ಯತ್ನ ನಡೆದಿದೆ. ಆದರೆ ಜೊತೆಯಲ್ಲಿರಲೂ ಇಬ್ಬರೂ ಒಪ್ಪಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಚಂದನ್ ಹಾಗೂ ನಿವೇದಿತಾಗೆ ವಿಚ್ಛೇದನ ಮಂಜೂರು ಮಾಡಿದ್ದು, ನಾಲ್ಕು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ.