Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ದೇಶದಲ್ಲಿ ಭಾರತೀಯ ಜನತಾ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂಬುದು ಈ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ- ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ತಾನೇ ದೇವಮಾನವ ಎಂದು ಹೇಳಿಕೊಂಡು ನಮ್ಮ ದೇಶದ ಜನಸಾಮಾನ್ಯರಲ್ಲಿ ಸುಳ್ಳು ಹೇಳಿಕೊಂಡು ತಾನೇ ದೊಡ್ಡ ಭವಿಷ್ಯದ ನಾಯಕ ಎಂದು ಬಿಂಬಿಸಿದ ನರೇಂದ್ರ ಮೋದಿಯವರ ಡೋಂಗಿ ರಾಜಕಾರಣಕ್ಕೆ ತೆರೆ ಹಾಕಿದ ನಮ್ಮ ದೇಶದ ಮತದಾರರು ಎ೦ದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸುರೇಶ್ ಶೆಟ್ಟಿ ಬನ್ನಂಜೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿ ಚುನಾವಣೆ ನಡೆದಾಗ ಬಿಜೆಪಿಯ ಮಮ್ ಭಕ್ತರು ಮೋದಿಯವರ ಹೆಸರೇ ಹೇಳಿಕೊಂಡು ಮೋದಿ ಮೋದಿ ಎಂದು ಹಾಕಿದ ಬೊಬ್ಬೆ ಈ ಕರಾವಳಿಯ ಜನರಿಗಲ್ಲದೆ ಉತ್ತರದ ಜನರಿಗೆ ಇದು ಬೇಕಾಗಿರಲಿಲ್ಲ ಆದಕಾರಣ ಶ್ರೀ ರಾಮದೇವರ ಹೆಸರು ಹೇಳಿಕೊಂಡು ಇಷ್ಟು ಸಮಯ ಆಡಳಿತ ನಡೆಸಿ ಇಡೀ ದೇಶದ ಬಡ ಜನರ ಮಧ್ಯ ವರ್ಗದವರ ರೈತರ ಕಾರ್ಮಿಕರ ವಿರೋಧಿಯಾದ ಈ ಮೋದಿಯ ಆಡಳಿತವನ್ನು ನಮ್ಮ ದೇಶದ ಮತದಾರ ಬಾಂಧವರು ವಿಶೇಷವಾಗಿ ಶ್ರೀ ರಾಮ ಕ್ಷೇತ್ರವಾದ ಅಯೋಧ್ಯೆಯಲ್ಲಿ ಮೋದಿ ಹಾಗೂ ಬಿಜೆಪಿಯನ್ನು ಸೋಲಿಸಿ ತಕ್ಕ ಉತ್ತರವನ್ನು ನೀಡಿರುತ್ತಾರೆ ಏನು ತಾನು ಹೇಳಿದಂತೆ ನಡೆಯಬೇಕು ನಾನು ಮಾಡಿದಂತೆ ಆಗಬೇಕು ಎಂದು ವರ್ತಿಸುತ್ತಿದ್ದ ಮೋದಿಯವರಿಗೆ ಈಗ ಮಾನ್ಯ ನಿತೀಶ್ ಕುಮಾರ್ ಹಾಗೂ ಮಾನ್ಯ ಚಂದ್ರಬಾಬು ನಾಯ್ಡು ಅವರ ಅವಶ್ಯಕತೆ ಇದ್ದು ಅವರಲ್ಲಿ ಸಹಾಯವನ್ನು ಮೋದಿಯವರು ಬೇಡುವಂತೆ ಮಾಡಿದ ನಮ್ಮ ದೇಶದ ಪ್ರಜ್ಞಾವಂತ ಮತದಾರರಿಗೆ ಅಭಿನಂದನೆಗಳು ಸನ್ಮಾನ್ಯ ಮೋದಿಯವರ ಅಧಿಕಾರದ ಆಸೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ನಮ್ಮ ದೇಶದ ಜನತೆ ನೋಡುವಂತಾಯಿತು ಮಾನ್ಯ ರಾಹುಲ್ ಗಾಂಧಿಯವರ ನೈತಿ ಕತೆಯನ್ನು ಕುಗ್ಗಿಸಲು ಹೊರಟ ಮೋದಿಯವರು ತಾವೇ ಕುಬ್ಜರಾಗಿ ಹೋಗಿದ್ದಾರೆ ಇದು ನಮ್ಮ ದೇಶದಲ್ಲಿ ಭಾರತೀಯ ಜನತಾ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂಬುದು ಈ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment