ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಲೋಕಸಭೆ ಚುನಾವಣೆ ಫಲಿತಾಂಶ 2024 : ಜೂನ್​ 8ರಂದು ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಾಧ್ಯತೆ

ಉಡುಪಿ:ಲೋಕಸಭೆ ಚುನಾವಣೆ ಫಲಿತಾಂಶ 2024ರ ಫಲಿತಾ೦ಶವು ಸ೦ಪೂರ್ಣವಾಗಿ ಪ್ರಕಟಗೊ೦ಡಿದ್ದು ಇದರಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷಗಳು ಸೇರಿ 293ಸ್ಥಾನವನ್ನು ಗೆದ್ದಿದ್ದು, ಇ೦ಡಿಯಾ ಮಿತ್ರಪಕ್ಷ ಸೇರಿ232 ಸ್ಥಾನವನ್ನು ಪಡೆದರೆ ಇತರರು 18ಮ೦ದಿ ಗೆದ್ದಿದ್ದಾರೆ.ಅ೦ಗಪಕ್ಷಗಳ ಬ೦ಗಾರದ ಪ೦ಜರದಲ್ಲಿ ಇದ್ದು ಸರಕಾರವನ್ನು ನಡೆಸುವ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿ ಇದೀಗ ಸರಕಾರವನ್ನು ನಿರ್ಮಿಸಲು ಎಲ್ಲಾ ಕಸರತ್ತು ನಡೆಸಿದ್ದು ಒ೦ದು ವೇಳೆ ಸರಕಾರವನ್ನು ರಚಿಸಿದರೂ
ಸ್ವತ೦ತ್ರವಾಗಿ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗುವುದಿಲ್ಲ.ನಿತೀಶ್ ಕುಮಾರ್,ಚ೦ದ್ರಬಾಬು ನಾಯ್ಡು ರವರ ಸಹಕಾರವನ್ನು ಪಡೆದೇ ಎಲ್ಲಾ ನಿರ್ಧಾರವನ್ನು ಕೈಕೊಳ್ಳುವ೦ತಹ ಪರಿಸ್ಥಿತಿ.

ಇದೀಗ ಜೂನ್ 8ರಂದು ನರೇಂದ್ರ ಮೋದಿಯವರು ಮತ್ತೆ 3ನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಅದರೆ ಚ೦ದ್ರಬಾಬು ನಾಯ್ಡು ಆ೦ಧ್ರದ ಮುಖ್ಯಮ೦ತ್ರಿಯಾಗಿ ಅಧಿಕಾರವನ್ನು ಸ್ವೀಕರಿಸುತ್ತಾರೆ ಹೊರತು ಕೇ೦ದ್ರದಲ್ಲಿ ಯಾವುದೇ ಸಚಿವ ಸ್ಥಾನವನ್ನು ಪಡೆಯುವುದಿಲ್ಲ.

ಶ್ರೀರಾಮನ ಕ್ಷೇತ್ರವಾದ ಅಯೋಧ್ಯೆಯಲ್ಲಿ ಬಿಜೆಪಿ ಭಾರೀ ಹಿನ್ನಡೆಯಾಗಿರುವುದು ಮೋದಿ,ಅಮಿತ್ ಶಾ,ಯೋಗಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

No Comments

Leave A Comment