ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳ ಮೇಲೆ ಬಡಿದ ಸಿಡಿಲು; ಆಘಾತಕಾರಿ ವಿಡಿಯೋ ವೈರಲ್
ಮಳೆಗಾಲದಲ್ಲಿ ಯೊಂದಿಗೆ ಗುಡುಗು ಮಿಂಚುಗಳು ಬರುವುದು ಸಾಮಾನ್ಯ. ಆದರೆ ಗಾಳಿ ಮಳೆಯೊಂದಿಗೆ ಬರುವ ಭಯಾನಕ ಗುಡುಗು ಮಿಂಚುಗಳು ಎದೆಯಲ್ಲಿ ನಡುಕ ಹುಟ್ಟಿಸುವುದು ಮಾತ್ರವಲ್ಲದೆ, ಅನೇಕ ಪ್ರಾಣ ಹಾನಿಯನ್ನೂ ಕೂಡಾ ಉಂಟುಮಾಡುತ್ತದೆ. ಹೀಗೆ ಸಿಡಿಲು ಬಡಿದು ಪ್ರಾಣಿ-ಪಕ್ಷಿಗಳು, ಮನುಷ್ಯರು ಸಾವನ್ನಪ್ಪಿದ ಅನೇಕ ಘಟನೆಗಳು ಈ ಹಿಂದೆಯೂ ನಡೆದಿದೆ. ಇದೀಗ ಅಂತಹದೇ ಭೀಕರ ಘಟನೆಯೊಂದು ನಡೆದಿದ್ದು, ಬೀಚ್‌ನಲ್ಲಿ ಸಂತೋಷವಾಗಿ ಆಟವಾಡುತ್ತಿದ್ದ ಮೂವರ ಮಕ್ಕಳ ಮೇಲೆ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದೆ. ಈ ಆಘಾತಕಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಆಘಾತಕಾರಿ ಘಟನೆ ಅಮೇರಿಕಾದಲ್ಲಿ ನಡೆದಿದ್ದು, ಇಲ್ಲಿನ ಪೋರ್ಟೊ ರಿಕೊ ಕಡಲತೀರದಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳ ಮೇಲೆ ಸಿಡಿಲು ಬಡಿದಿದ್ದು, ಪರಿಣಾಮ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಮಕ್ಕಳಲ್ಲಿ ಒಂದು ಮಗು 7 ವರ್ಷ, ಇನ್ನೊಂದು ಮಗು 10 ವರ್ಷ, ಮೂರನೇ ಮಗು 12 ವರ್ಷ ವಯಸ್ಸಿನದ್ದು ಎಂದು ಗುರುತಿಸಲಾಗಿದೆ. ಈ ಮೂರು ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅದರಲ್ಲಿ 12 ವರ್ಷದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ಹೇಳಿವೆ.
ಈ ಕುರಿತ ವಿಡಿಯೋವನ್ನು @CollinRugg ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಕಡಲತೀರದಲ್ಲಿನ ಮರಳಿನಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳ ಮೇಲೆ ಸಿಡಿಲು ಬಡಿದ ಆಘಾತಕಾರಿ ದೃಶ್ಯವನ್ನು ಕಾಣಬಹುದು. ಸಿಡಿಲು ಬಡಿದ ತಕ್ಷಣ ಮಕ್ಕಳು ಪ್ರಜ್ಞೆ ತಪ್ಪಿ ಬಿದ್ದಿದ್ದು, ಪೋಷಕರು ಮಕ್ಕಳ ಈ ಸ್ಥಿತಿಯನ್ನು ಕಂಡು ಗೋಳಾಡಿದ್ದಾರೆ.
ಮೇ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ಇಂತಹ ಪ್ರಶ್ಕುಬ್ಧ ಹವಾಮಾನವಿರುವ ಪರಿಸ್ಥಿತಿಯಲ್ಲಿ ಮಕ್ಕಳನ್ನು ಕಡಲತೀರದ ಬಳಿ ಕರೆದುಕೊಂಡು ಹೋಗುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.