ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

‘ಗೋಬ್ಯಾಕ್’ ಅನ್ನಿಸಿಕೊಳ್ಳುವ ಪರಿಸ್ಥಿತಿ ನನಗೆ ಬಂದಿಲ್ಲ: ರಘುಪತಿ ಭಟ್-

ಮಂಗಳೂರು, ಜೂ.1: ನನ್ನನ್ನು ಕ್ಷೇತ್ರದಲ್ಲಿ ಮತದಾರರು ನಿರ್ಲಕ್ಷ್ಯ ಮಾಡಿಲ್ಲ. ಒಂದು ಚುನಾವಣೆಯನ್ನೂ ಸೋತಿಲ್ಲ. ಕಾರ್ಯಕರ್ತರು ನನ್ನನ್ನು ವಿರೋಧಿಸಿ ಗೋಬ್ಯಾಕ್ ಅಂದಿಲ್ಲ. ನಮ್ಮಲ್ಲಿ ಗೋಬ್ಯಾಕ್ ಅಂದವರಿಗೇ ಬೇರೆ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ನನಗೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ರಘುಪತಿಭಟ್ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯ ಸಂದರ್ಭ, ಕೆಲವರಿಗೆ ಅಧಿಕಾರ ಇಲ್ಲದೆ ಇರಲು ಆಗದು ಎಂಬ ಬಿ.ಎಲ್. ಸಂತೋಷ್ ಅವರ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

ಅವರು ಈ ಮಾತನ್ನು ಎಲ್ಲರನ್ನೂ ಉದ್ದೇಶಿಸಿ ಹೇಳಿರಬಹುದು. 70 ವರ್ಷ ಮೇಲ್ಪಟ್ಟವರು, ಸೋತವರನ್ನೂ ಲೋಕಸಭೆಗೆ ನಿಲ್ಲಿಸಲಾಗಿದೆ. ತಾನು ಮುಖ್ಯಮಂತ್ರಿಯಾಗಬೇಕು, ತನ್ನ ಪುತ್ರ ಅಧ್ಯಕ್ಷನಾಗ ಬೇಕು ಎಂಬ ನಾಯಕರಿಗೂ ಹೇಳಿರಬಹುದು. ನಾನು ಈ ಸ್ಪರ್ಧೆ ಮಾಡಲು ಕಾರಣ ನಾನು ಸಕ್ರಿಯವಾಗಿ ಜನಪ್ರತಿನಿಧಿಯಾಗಿದ್ದವನು.

ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ವಯಸ್ಸು ನನ್ನದಲ್ಲ. ವಿಧಾನ ಪರಿಷತ್ ಪಕ್ಷದಲ್ಲಿ ಅವಕಾಶ ವಂಚಿತರಿಗೆ ನೀಡುವ ಸ್ಥಾನಮಾನ. ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಮತ್ತೆ ಚುನಾವಣಾ ರಾಜಕೀಯದಲ್ಲಿ ಇರಲು ಸಾಧ್ಯವಾಗದು. ಕೇವಲ ಕಾರ್ಯಕರ್ತನಾಗಿ ಇರಬೇಕಾಗುತ್ತದೆ. ವಿಧಾನಸಭೆಗೆ ಇನ್ನು ನಾಲ್ಕು ವರ್ಷ ಕಾಯುವುದಾದರೆ ಅಲ್ಲಿ ನಾನೇ ಗೆಲ್ಲಿಸಿದ ಶಾಸಕರಿದ್ದು, ಮತ್ತೆ ಸ್ಪರ್ಧಿಸಲು ಆಗದು.

ಲೋಕಸಭೆಯಲ್ಲಿ ನಮ್ಮದು ಸಣ್ಣ ಮತದಾರರ ಜಾತಿ ಎನ್ನುವ ಕಾರಣಕ್ಕೆ ಸ್ಪರ್ಧೆ ಸಾಧ್ಯವಿಲ್ಲ. ವಿಧಾನ ಪರಿಷತ್‌ನಿಂದಲೂ ನೀಡುವ ಸಾಧ್ಯತೆ ಇಲ್ಲ.ಹಾಗಾಗಿ ಪದವೀಧರ ಮತದಾರರನ್ನು ವಿಶ್ವಾಸದಲ್ಲಿಟ್ಟು ಸ್ಪರ್ಧಿಸುತ್ತಿದ್ದೇನೆ ಎಂದರು.
ಹಿರಿಯ ಕಾರ್ಯಕರ್ತನಿಗೆ ಟಿಕೆಟ್ ತಪ್ಪುವುದು ಟಿವಿಯಲ್ಲಿ ಪ್ರಕಟವಾದಾಗ ತಿಳಿಯುವುದಲ್ಲ. ನಾಯಕರು ಕರೆದು ಈ ರೀತಿಯ ಸಾಮಾಜಿಕ ನ್ಯಾಯಕ್ಕಾಗಿ ನೀಡಲಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡುವ ವ್ಯವಸ್ಥೆ ಆಗಬೇಕು. ಕೊನೆಯವರೆಗೂ ಟಿಕೆಟ್ ಕೊಡುವುದಾಗಿ ಹೇಳಿ ತಪ್ಪಿಸುವುದು ಸರಿಯಲ್ಲ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪಕ್ಷದ ಮಾನದಂಡಗಳನ್ನು ಅವರು ಆತ್ಮವಿಮರ್ಶೆ ಮಾಡಬೇಕಾಗಿದೆ ಎಂದು ಮಾತಿನ ಮೂಲಕ ಕುಟುಕಿದರು.

ಸುಮಾರು 25 ಲಕ್ಷ ಪದವೀಧರರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 85000 ಮಾತ್ರ ಆಗಿದ್ದು, ಈ ವ್ಯವಸ್ಥೆಯನ್ನು ಬದಲಿಸಬೇಕಾಗಿದೆ. ಮುಂದೆ ಗೆದ್ದು ಬಂದಾಗ ಈ ಬಗ್ಗೆ ಪರಿಷತ್‌ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಿಂದೆ ಪಕ್ಷದ ಆಧಾರದಲ್ಲಿ ಗೆಲುವು ಸಾಧಿಸಲಾಗುತ್ತಿತ್ತು. ಆದರೆ ಈ ಬಾರಿ ಗೆಲುವಿಗೆ ವ್ಯಕ್ತಿಗಳ ಸಾಧನೆಯೇ ಪ್ರಮುಖವಾಗಲಿದೆ ಎಂದವರು ಹೇಳಿದರು.

No Comments

Leave A Comment