ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ನಗರಸಭೆಯ ಚುನಾವಣೆಯ ಸಂದರ್ಭದಲ್ಲಿ ಉಡುಪಿಯನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದು ಬೋಬ್ಬಿಟ್ಟ ಮಾಜಿ ಶಾಸಕ ಭಟ್ ಇದೀಗ ಬಿಜೆಪಿ ಅವರನ್ನು ಪಕ್ಷದಿಂದ ಮುಕ್ತಗೊಳಿಸಿದೆ- ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ಕಳೆದ ಉಡುಪಿ ನಗರಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಶಾಸಕರಾಗಿದ್ದುಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿ ವಾರ್ಡ್ಗಳಲ್ಲಿ ಸಭೆಯನ್ನು ನಡೆಸಿ ಕಾಂಗ್ರೆಸ್ ಮುಕ್ತ ಉಡುಪಿಯನ್ನು ಮಾಡುತ್ತೇನೆ ಎಂದು ಬೊಬ್ಬಿರಿದ ಉಡುಪಿಯ ಮಾಜಿ ಶಾಸಕರನ್ನು ಬಿಜೆಪಿ ನಾಯಕರುಗಳು ಪದವೀಧರ ಕ್ಷೇತ್ರಕ್ಕೆ ಸಲ್ಲಿಸಿದ ನಾಮಪತ್ರವನ್ನು ವಾಪಸ್ ಪಡೆಯದಿದ್ದಲ್ಲಿ ಪಕ್ಷದಿಂದ ಮುಕ್ತಗೊಳಿಸುತ್ತಿರುವುದಾಗಿ ಹೇಳಿಕೆಯನ್ನು ನೀಡಿರುತ್ತಾರೆ.

ಈ ಹಿಂದೆ ಕಾಲೇಜಿನಲ್ಲಿ ಹಿಜಾಬ್ ದರಿಸಬಾರದೆಂದು ಇಡೀ ರಾಜ್ಯದ ಕಾಲೇಜು ಗಳಲ್ಲಿ ಗಲಭೆಯನ್ನು ಸೃಷ್ಟಿಕರಿಸಿದ ಮಾಜಿ ಶಾಸಕ ಭಟ್ಟರನ್ನು ತಮ್ಮ ಪಕ್ಷದಿಂದಲೇ ಮುಕ್ತಿ ಗೊಳಿಸಿದಾಗೀ ಮಾಜಿ ಶಾಸಕರ ಆಪ್ತರು ಪರಶುರಾಮನ ನಕಲಿ ಮೂರ್ತಿಯ ಸೃಷ್ಟಿಕರ್ತರು ಇದೀಗ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳು ಮಾಜಿ ಸಚಿವರು ಆದಂತಹ ಸುನಿಲ್ ಕುಮಾರ್ ರವರೆ ಹೇಳುತ್ತಿದ್ದಾರೆ.

ನಾನು ಬಿಜೆಪಿ ಎಲ್ಲಾ ನಾಯಕರಲ್ಲಿ ಹೇಳುತ್ತಿರುವುದು ಇಷ್ಟೆ ನಿಮ್ಮಿಂದ ಮಾತ್ರವಲ್ಲ ನಿಮ್ಮ ರಾಷ್ಟ್ರ ನಾಯಕರಾದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇವರಿಂದಲೂ ಈ ಜನ್ಮದಲ್ಲಿ ಭಾರತ ದೇಶದಲ್ಲಿ ಕಾಂಗ್ರೆಸ್ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.

No Comments

Leave A Comment