ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಸುಧಾಮೂರ್ತಿ ಸಹೋದರ ಶ್ರೀನಿವಾಸ್ ಆರ್. ಕುಲಕರ್ಣಿಗೆ ಖಗೋಳಶಾಸ್ತ್ರದ ಪ್ರತಿಷ್ಠಿತ ‘ಶಾ ಪ್ರಶಸ್ತಿ ಪುರಸ್ಕಾರ’
ಬೆಂಗಳೂರು: ಭಾರತೀಯ ಮೂಲದ ಅಮೆರಿಕಾ ವಿಜ್ಞಾನಿ ಮತ್ತು ಸುಧಾಮೂರ್ತಿ ಅವರ ಸಹೋದರ ಶ್ರೀನಿವಾಸ್ ಆರ್ ಕುಲಕರ್ಣಿ ಅವರು ಖಗೋಳಶಾಸ್ತ್ರ ವಿಭಾಗದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ‘ಶಾ ಪುರಸ್ಕಾರ’ ನೀಡಲಾಗಿದೆ.
ಕರ್ನಾಟಕ ಮೂಲದ ಶ್ರೀನಿವಾಸ್ ಆರ್. ಕುಲಕರ್ಣಿ ಅವರು ಅಮೆರಿಕದಲ್ಲಿ ಖಗೋಳ ಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀನಿವಾಸ್ ಆರ್. ಕುಲಕರ್ಣಿ ಅವರು ಖಗೋಳ ಶಾಸ್ತ್ರದ ಹಲವು ಮಹತ್ವದ ಸಂಶೋಧನೆಗಳನ್ನು ಮಾಡಿದ್ದಾರೆ. ಮಿಲಿಸೆಕೆಂಡ್ ಪಲ್ಸರ್ಸ್, ಗಾಮಾ – ರೇ ಬರ್ಸ್ಟ್, ಸೂಪರ್ ನೋವಾ ಹಾಗೂ ಹಲವು ಮಾರ್ಪಡುವ ಹಾಗೂ ಸಂಚರಿಸುವ ಬಾಹ್ಯಾಕಾಶ ವಸ್ತುಗಳ ಕುರಿತಾಗಿ ಸಂಶೋಧನೆ ಮಾಡಿದ್ದಾರೆ.
2024ರ ಸಾಲಿನ ‘ಶಾ ಪ್ರಶಸ್ತಿ ವಿಜೇತರ ಪಟ್ಟಿ’ ಕಳೆದ ಮಂಗಳವಾರವಷ್ಟೇ ಪ್ರಕಟವಾಗಿದೆ. ಈ ಪೈಕಿ ಶ್ರೀನಿವಾಸ್ ಆರ್. ಕುಲಕರ್ಣಿ ಅವರು ಅಗ್ರಗಣ್ಯರಾಗಿ ಹೊರ ಹೊಮ್ಮಿದ್ದಾರೆ.
ಕುಲಕರ್ಣಿ ಅವರ ಸಂಶೋಧನೆಗಳ ಮೂಲಕ ಮಾನವ ಜನಾಂಗ ಬಾಹ್ಯಾಕಾಶದ ಬಗ್ಗೆ ತನ್ನ ತಿಳುವಳಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ ಎಂದು ಶಾ ಪುರಸ್ಕಾರ ಪ್ರತಿಷ್ಠಾನವು ಶ್ಲಾಘನೆ ವ್ಯಕ್ತಪಡಿಸಿದೆ.
ಶ್ರೀನಿವಾಸ್ ಆರ್. ಕುಲಕರ್ಣಿ ಅವರು ಭಾರತೀಯರು, ಅದಕ್ಕಿಂತಲೂ ಹೆಚ್ಚಾಗಿ ಕನ್ನಡಿಗರು. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಕುರುಂದ್ವಾಡ್ ಎಂಬ ಪುಟ್ಟ ಪಟ್ಟಣವಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಈ ಪಟ್ಟಣದಲ್ಲಿ 1955ರಲ್ಲಿ ಜನಿಸಿದ ಶ್ರೀನಿವಾಸ್ ಆರ್. ಕುಲಕರ್ಣಿ ಅವರು ಬೆಳವಣಿಗೆ ಕಂಡು ಪ್ರವರ್ಧಮಾನಕ್ಕೆ ಬಂದಿದ್ದು ಕರ್ನಾಟಕದ ಹುಬ್ಬಳ್ಳಿಯಲ್ಲಿ. ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ಶ್ರೀನಿವಾಸ್ ಆರ್. ಕುಲಕರ್ಣಿ, 1978ರಲ್ಲಿ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ ವ್ಯಾಸಂಗ ಮಾಡಿದರು. ಬಳಿಕ 1983ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡಿದರು. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಖಗೋಳ ಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.