ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಬೆಂಗಳೂರು: ಮೃತ ಪೋಲೀಸ್ ಗುರುತಿನ ಚೀಟಿ ಬಳಸಿ ಸಂಚಾರ ಉಲ್ಲಂಘನೆ ದಂಡ ವಸೂಲಿ; ಮೂವರ ಬಂಧನ
ಬೆಂಗಳೂರು: ನಗರದ ಮೃತ ಹೆಡ್ ಕಾನ್‌ಸ್ಟೇಬಲ್ ಗುರುತಿನ ಚೀಟಿ ಬಳಸಿಕೊಂಡು ಸಾರ್ವಜನಿಕರಿಂದ ಸಂಚಾರ ನಿಯಮ ಉಲ್ಲಂಘನೆ ಶುಲ್ಕ ವಸೂಲಿ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮೂವರನ್ನು ಬಂಧಿಸಲಾಗಿದೆ.
ಪೊಲೀಸರು ಆರೋಪಿಗಳನ್ನು ಇಸ್ಮಾಯಿಲ್ ಅಲಿ, ರಂಜನ್ ಕುಮಾರ್ ಪುರ್ಬೆ ಮತ್ತು ಸುಬೀರ್ ಎಂದು ಗುರುತಿಸಿದ್ದಾರೆ, ಎಲ್ಲರೂ ಕಾಲೇಜು ಬಿಟ್ಟವರಾಗಿದ್ದಾರೆ. ಆರೋಪಿಗಳು ಇಂಟರ್‌ನೆಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿರುವ ಹೆಡ್ ಕಾನ್‌ಸ್ಟೆಬಲ್ ಐಡಿಯನ್ನು ಬಳಸುತ್ತಿದ್ದರು ಮತ್ತು ಸಂಚಾರ ಉಲ್ಲಂಘನೆಯ ದಂಡದ ಮೊತ್ತವನ್ನು ಪಾವತಿಸಲು ಸಾರ್ವಜನಿಕರನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಂಚಕರು ಬೆಂಗಳೂರು ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‌ನಲ್ಲಿ ಫೈನ್ ವಿಭಾಗದಲ್ಲಿ ಒಂದಷ್ಟು ವಾಹನಗಳ ನೋಂದಣಿ ಸಂಖ್ಯೆಗಳನ್ನು ಹಾಕಿ ಶೋಧಿಸಿದ್ದಾರೆ. ಆಗ ದಂಡ ಬಾಕಿರುವ ವಾಹನಗಳ ಸಂಖ್ಯೆಗಳನ್ನು ಗುರುತಿಸಿಕೊಂಡು, ಅವುಗಳನ್ನು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗಳಲ್ಲಿ ದಾಖಲಿಸಿ, ವಾಹನಗಳ ಮಾಲೀಕರ ವಿಳಾಸ, ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದರು. ಬಳಿಕ ನಿರ್ದಿಷ್ಟ ವಾಹನ ಮಾಲೀಕರ ವಾಟ್ಸ್ಆ್ಯಪ್ಗೆ ನಾವು ಟ್ರಾಫಿಕ್ ಪೊಲೀಸರು ಹೇಳಿಕೊಂಡು ದಂಡ ಕಟ್ಟುವಂತೆ ಕ್ಯೂಆರ್ ಕೋಡ್ ಸಮೇತ ಸಂದೇಶ ಹಾಗೂ ಮೃತ ಭಕ್ತರಾಮ್ ಗುರುತಿನ ಚೀಟಿ ಕೂಡ ಕಳುಹಿಸಿದ್ದರು.
ಹೆಡ್ ಕಾನ್ ಸ್ಟೇಬಲ್ ಪುತ್ರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಕೋಲ್ಕತ್ತಾದಲ್ಲಿ ಬಂಧಿಸಿದ್ದಾರೆ. ಪೊಲೀಸ್ ಗುರುತಿನ ಚೀಟಿ ಲಭ್ಯತೆ ಮತ್ತು ಸಾರ್ವಜನಿಕರ ಸಂಪರ್ಕಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.