Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಛತ್ತೀಸ್‌ಗಢ: ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವು

ಕವರ್ಧಾ, ಮೇ.20: ಛತ್ತೀಸ್‌ಗಢದ ಕವರ್ಧಾದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಬೈಗಾ ಬುಡಕಟ್ಟು ಸಮುದಾಯದ 25-30 ಜನರು ತೆಂಡು ಎಲೆಗಳನ್ನು ತರಲು ಪಿಕಪ್​​ನಲ್ಲಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಬಹಪಾನಿ ಪ್ರದೇಶದ ಬಳಿ 20 ಅಡಿ ಆಳದ ಕಂದಕಕ್ಕೆ ವಾಹನ ಬಿದ್ದಿದೆ ಎಂದು ಹೇಳಲಾಗಿದೆ. ಬೈಗಾ ಸಮುದಾಯದವರು ಬೀಡಿ ತಯಾರಿಸುವ ವೃತ್ತಿಯನ್ನು ಮಾಡುತ್ತಿದ್ದರು. ಇದಕ್ಕೆ ತೆಂಡು ಎಲೆಗಳು ಬೇಕಿತ್ತು. ಇದನ್ನು ತರಲು ಪಿಕಪ್​​​ನಲ್ಲಿ ಹೋಗಿದ್ದಾರೆ. ಈ ವೇಳೆ ಪಿಕಪ್​​​​ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ.

ಈ ಘಟನೆಯಿಂದ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆಯಿಂದ ಸಾವನ್ನಪ್ಪಿರುವವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ.

No Comments

Leave A Comment