Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಬೈಕಂಪಾಡಿ : ಸಮಾಜಸೇವಕ ಆಸೀಫ್ ಆಪತ್ಬಾಂಧವ ಅವರ ಮೇಲೆ ಅಪರಿಚಿತರಿಂದ ಹಲ್ಲೆ

ಸುರತ್ಕಲ್‌: ಸಾಮಾಜಿಕ ಕಾರ್ಯಕರ್ತ ಆಸೀಫ್ ಆಪತ್ಬಾಂಧವ ಅವರಿಗೆ ಬೈಕ್ ನಲ್ಲಿ ಬಂದ ಅಪರಿಚಿತರಿಬ್ಬರು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೈಕಂಪಾಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಆಸೀಫ್ ಅವರು ಮಂಗಳೂರಿನಿಂದ ಹಳೆಯಂಗಡಿಯ ಆಪತ್ಬಾಂಧವ  ಆಶ್ರಮಕ್ಕೆ ತನ್ನ ಕಾರಿನಲ್ಲಿ ಬರುತ್ತಿದ್ದರು. ಬೈಕಂಪಾಡಿ ತಲುಪುತ್ತಿದ್ದಂತೆ ಬೈಕ್ ನಲ್ಲಿ ಇಬ್ಬರು ಎಪಿಎಂಸಿ ಕಡೆಯಿಂದ ಏಕಾಏಕಿ ರಸ್ತೆಗೆ ಬಂದಿದ್ದಾರೆ. ಆಗ ಆಸೀಪ್ ಕಾರಿನ ಹಾರ್ನ್ ಹಾಕಿದ್ದಾರೆ. ಇದೇ ವಿಚಾರವಾಗಿ ತಗಾದೆ ತೆಗೆದ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಅಪರಿಚಿತರು ಆಸೀಫ್‌ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಆಸೀಫ್ ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

No Comments

Leave A Comment