ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಯುವತಿಯ ಶವ ಪತ್ತೆ
ಭೋಪಾಲ್ (ಮಧ್ಯಪ್ರದೇಶ): ಭೋಪಾಲ್‌ನ ಶಹಪುರದ ಶೀತಲ್ ಕೌಶಲ್(24) ಎಂದು ಗುರುತಿಸಲಾದ ಯುವತಿಯ ಶವ ಹಿಮಾಚಲ ಪ್ರದೇಶದ ಮನಾಲಿಯ ಹೋಟೆಲ್‌ವೊಂದರಲ್ಲಿ ಪತ್ತೆಯಾಗಿದೆ. ಸೋಶಿಯಲ್ ಮೀಡಿಯಾದ ಮೂಲಕ ಪರಿಚಯವಾದ ಆಕೆಯ ಸ್ನೇಹಿತ ವಿನೋದ್ ಠಾಕೂರ್ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ . ಆರೋಪಿ ವಿನೋದ್ ಆಕೆಯ ಮೃತ ದೇಹವನ್ನು ಲಾಗೇಜ್ ಬ್ಯಾಗ್ನಲ್ಲಿ ತುಂಬಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂಬುದು ವರದಿಯಾಗಿದೆ.
ಸೋಶಿಯಲ್ ಮೀಡಿಯಾದ ಮೂಲಕ ಆರೋಪಿ ವಿನೋದ್ಗೆ ಪರಿಚಯವಾಗಿದ್ದ ಶೀತಲ್. ಮೇ. 05ರಂದು ಮನೆಯಲ್ಲಿದ್ದ 10 ಸಾವಿರ ದುಡ್ಡಿನೊಂದಿಗೆ ಶೀತಲ್ ಮನೆ ಬಿಟ್ಟು ವಿನೋದ್ ಜೊತೆಗೆ ಓಡಿ ಹೋಗಿದ್ದಾಳೆ. ಬಳಿಕ ಈ ಜೋಡಿ ಮನಾಲಿಗೆ ತೆರಳಿ ಹೊಟೇಲ್ ಒಂದರಲ್ಲಿ ತಂಗಿದ್ದರು. ಆದರೆ ಬುಧವಾರ(ಮೇ.08) ಮನಾಲಿಯ ಹೊಟೇಲ್ ಚೆಕ್ ಔಟ್ ಮಾಡುವ ವೇಳೆ ವಿನೋದ್ ಒಬ್ಬನನ್ನೇ ಕಂಡು ಹೋಟೆಲ್ ಸಿಬ್ಬಂದಿ ಅನುಮಾನಗೊಂಡಿದ್ದಾರೆ. ಇದಲ್ಲದೇ ಆತನ ಅಂಗಿಯ ಮೇಲಿನ ರಕ್ತದ ಕಲೆ ಕಂಡು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಆತ ಬ್ಯಾಗ್ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಬುಧವಾರ ತಡರಾತ್ರಿ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ಗಿರಿಧಾಮದ ಎಲ್ಲ ಗಡಿಗಳನ್ನು ಸೀಲ್ ಮಾಡಿದ ಪೊಲೀಸರು ಬುಧವಾರ ರಾತ್ರಿ ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರ್ಯಾಣ ಮೂಲದ ಆರೋಪಿ ವಿನೋದ್ ಠಾಕೂರ್ (23) ಮೂರು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಶೀತಲ್ ಕೌಶಲ್ ಜೊತೆ ಸ್ನೇಹ ಬೆಳೆಸಿದ್ದ ಎಂದು ಮನಾಲಿ ಡಿಎಸ್ಪಿ ಕೆಡಿ ಶರ್ಮಾ ಫ್ರೀ ಪ್ರೆಸ್‌ಗೆ ತಿಳಿಸಿದ್ದಾರೆ.
ಯುವತಿಯನ್ನು ಕೊಂದ ಹಿಂದಿನ ನಿಖರ ಕಾರಣವನ್ನು ಆರೋಪಿ ಬಹಿರಂಗಪಡಿಸಿಲ್ಲ. ಶುಕ್ರವಾರ ಮನಾಲಿ ತಲುಪಿದ ಶೀತಲ್ ತಂದೆ ಮತ್ತು ಇಬ್ಬರು ಸಹೋದರರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.