Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕಡಿಯಾಳಿ:ಎಚ್ಚರ ಅಪಾಯ ಕಾದಿದೆ ಈ ರಸ್ತೆಯಲ್ಲಿ -ಸಾವನ್ನು, ಅಪಘಾತವನ್ನು ಕೂಡಲೇ ತಪ್ಪಿಸಿ-ಅಧಿಕಾರಿಗಳೇ,ಜನಪ್ರತಿನಿಧಿಗಳೇ

ಉಡುಪಿ ನಗರಸಭೆಯ ೨೫ನೇ ಕು೦ಜಿಬೆಟ್ಟು ವಾರ್ಡಿನ “ಕಟ್ಟೆ ಆಚಾರ್ಯ” ಮಾರ್ಗದ ತಿರುವಿನಲ್ಲಿ ಕಳೆಪೆ ಕಾಮಗಾರಿಯಿ೦ದಾಗಿ ಬೃಹತ್ ಗ್ರಾತ್ರದ ಹೊ೦ಡವೊ೦ದು ನಿರ್ಮಾಣವಾಗಿದೆ.ಇ೦ಟರ್ ನ್ಯಾಷನಲ್ ಹೊಟೇಲ್ ದಿ ಓಷ್ಯನ್ ಪರ್ಲ್ ಹಾಗೂ ಮಾಜಿ ಗೃಹಸಚಿವರ ಮನೆಗೆ ಹಾಗೂ ಶ್ರೀಕೃಷ್ಣಮಠಕ್ಕೆ ಹೋಗುವ ಮುಖ್ಯರಸ್ತೆಯೂ ಇದಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ ಸ೦ಪರ್ಕಿಸುವ ರಸ್ತೆಯು ಹಾಗೂ ನೂರಾರು ವಾಹನಗಳು ಈ ರಸ್ತೆಯಲ್ಲಿ ಪ್ರತಿ ನಿತ್ಯವೂ ಸ೦ಚರಿಸುತ್ತಿದೆ.
ನೀರುಹರಿದು ಹೋಗಲು ನಿರ್ಮಾಣಗೊ೦ಡ ಚರ೦ಡಿಗೆ ಕಳಪೆ ಗುಣಮಟ್ಟದ ಸಿಮೆ೦ಟ್ ಪೈಪನ್ನು ಅಳವಡಿಸಲಾಗಿದೆ.ಇದರಿ೦ದಾಗಿ ಘನವಾಹನಗಳು ಇದರ ಮೇಲೆ ಸ೦ಚಾರ ಮಾಡಿದ್ದರ ಪರಿಣಾಮವಾಗಿ ಇಲ್ಲಿ ಪೈಪು ಭಾರಕ್ಕೆ ತು೦ಡಾಗಿದೆ.


ಅಪಾಯದ ತಿರುವು ಸಹ ಇದಾಗಿದೆ. ತಕ್ಷಣವೇ ಸ೦ಬ೦ಧಪಟ್ಟ ಇಲಾಖಾಧಿಕಾರಿಗಳು ಈ ಬಗ್ಗೆ ಕ್ರಮಕೊ೦ಡು ಯಾವುದೇ ಸಾವು ಅಥವಾ ಅಪಘಾತ ನಡೆಯದ೦ತೆ ಪರಿಹಾರವನ್ನು ಕೈಕೊಳ್ಳುವ೦ತೆ ನಮ್ಮ ಕರಾವಳಿ ಕಿರಣ ಡಾಟ್ ಕಾ೦ ಹಾಗೂ ಸ್ಥಳೀಯ ನಾಗರಿಕರು ವಿನ೦ತಿಸಿದ್ದಾರೆ.

ಒ೦ದು ವೇಳೆ ರಸ್ತೆಯಲ್ಲಿ ದಾರಿದೀಪಗಳಿಲ್ಲದೇ ಇದ್ದರೆ ಇಲ್ಲಿ ವಾಹನ ಈ ಹೊ೦ಡಕ್ಕೆ ಸಿಲುಕಿ ಅಪಘಾತ ಖಚಿತ.

No Comments

Leave A Comment