ಇಸ್ರೇಲ್ ನಲ್ಲಿ ಯುದ್ಧ ಟ್ಯಾಂಕರ್ ಗಳ ದಾಳಿಯಲ್ಲಿ ಓರ್ವ ಭಾರತೀಯ ಅಧಿಕಾರಿ ಸಾವು: ವಿಶ್ವಸಂಸ್ಥೆ
ಗಾಜಾ: ಇಸ್ರೇಲ್ ನಲ್ಲಿ ಯುದ್ಧ ಟ್ಯಾಂಕರ್ ಗಳ ದಾಳಿಯಲ್ಲಿ ಭಾರತೀಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಮಾಜಿ ಸೇನಾ ಅಧಿಕಾರಿ ಮೃತಪಟ್ಟಿರುವುದಕ್ಕೆ ವಿಶ್ವಸಂಸ್ಥೆ ಸಂತಾಪ ಸೂಚಿಸಿ ಕ್ಷಮೆ ಕೋರಿದೆ. ಯುದ್ಧಗ್ರಸ್ತ ಗಾಜಾದ ರಫಾದಲ್ಲಿ ಈ ಘಟನೆ ನಡೆದಿದ್ದು, ಇಸ್ರೇಲ್ ನದ್ದು ಎನ್ನಲಾದ ಟ್ಯಾಂಕ್ ನಿಂದ ಸಿಡಿದಿರುವ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಕರ್ನಲ್ ವೈಭವ್ ಅನಿಲ್ (46) ಮೃತಪಟ್ಟಿದ್ದು, 2022 ರಲ್ಲಿ ಅವಧಿಗೂ ಮುನ್ನವೇ ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದರು. ಬಳಿಕ ಎರಡು ತಿಂಗಳ ಹಿಂದೆ ವಿಶ್ವ ಸಂಸ್ಥೆಯಲ್ಲಿ ಯುಎನ್ ಡಿಪಾರ್ಟ್ಮೆಂಟ್ ಆಫ್ ಸೇಫ್ಟಿ ಅಂಡ್ ಸೆಕ್ಯುರಿಟಿ (ಡಿಎಸ್ಎಸ್) ನಲ್ಲಿ ಭದ್ರತಾ ಸಮನ್ವಯ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು.
ವೈಭವ್ ಅನಿಲ್ ಕಾಶ್ಮೀರದಲ್ಲಿ 11 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ಗೆ ಕಮಾಂಡರ್ ಆಗಿದ್ದರು, ಕಳೆದ ವರ್ಷ ಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದ ನಂತರ ವಿಶ್ವ ಸಂಸ್ಥೆಗೆ ‘ಮೊದಲ ಅಂತರರಾಷ್ಟ್ರೀಯ ಗಾಯಾಳು ಅಥವಾ ಸಾವನ್ನಪ್ಪಿರುವ ಮೊದಲ ಅಂತಾರಾಷ್ಟ್ರೀಯ ವ್ಯಕ್ತಿಯಾಗಿದ್ದಾರೆ.