ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಒಂದಕ್ಕಿಂತ ಒಂದು ಕಠಿಣ ಕೇಸ್‌ಗಳನ್ನ ದಾಖಲಿಸಿದ ಎಸ್‌ಐಟಿ, ಪ್ರಜ್ವಲ್‌ಗೆ ಬಿಗಿಯಾದ ಉರುಳು, ಏನೇನು ಶಿಕ್ಷೆ?!

ಬೆಂಗಳೂರು, (ಮೇ.10): ಹಾಸನ  ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ  ವಿರುದ್ಧ ಒಂದರ ಮೇಲೊಂದು ಎಫ್​ಐಆರ್ ದಾಖಲಾಗುತ್ತಿವೆ. ಅದರಲ್ಲೂ ಮೂರನೇ ಎಫ್​ಐಆರ್​ ದಾಖಲಾಗಿರುವ ಸೆಕ್ಷನ್ ಪ್ರಜ್ವಲ್ ರೇವಣ್ಣಗೆ ಕಾನೂನು ಕಂಟಕ ಎದುರಾಗಿದೆ. ಪ್ರಜ್ವಲ್​ ರೇವಣ್ಣ ವಿರುದ್ಧ ಮೂರನೇ ಎಫ್​ಐಆರ್​ನಲ್ಲಿ ಐಪಿಸಿ 376(2)(N), 376(2)(K), 354(A), 354(B), 354(C) ಹಾಗೂ 506 ಅಡಿಯಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಎಫ್ಐಆರ್ ನಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್ ಗಳನ್ನು ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್​ಗೆ ದಿನದಿಂದ ದಿನಕ್ಕೆ ಉರುಳು ಬಿಗಿಯಾಗುತ್ತಿದೆ.

ಹಾಗಾದ್ರೆ, ಪ್ರಜ್ವಲ್ ವಿರುದ್ದದ ಮೂರನೇ ಎಫ್​ಐಆರ್​ನಲ್ಲಿ ದಾಖಲಾಗಿರುವ ಸೆಕ್ಷನ್​ಗಳು ಏನೇನು ಹೇಳುತ್ತೆ ಎನ್ನುವುದನ್ನು ನೋಡುವುದಾದರೆ, 376(2)(N)- ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ, 376(2)(K)- 354(A) – ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ‌, 354(B)-ಬಟ್ಟೆ ಹಿಡಿದು ಎಳೆದಾಡಿದ ಆರೋಪ, 354(C) ಖಾಸಗಿ ಚಿತ್ರಗಳನ್ನ ಸೆರೆ ಹಿಡಿದು ವೀಕ್ಷಣೆ ಮಾಡುವುದು, ಆಕೆಯ ಒಪ್ಪಿಗೆ ಇಲ್ಲದೆ ಪ್ರಸಾರ ಮಾಡುವುದು, 506- ಬೆದರಿಕೆ ಹಾಕುವುದು. ಹೀಗೆ ಎಸ್ಐಟಿ ಮೂರನೇ ಎಫ್ಐಆರ್ ನಲ್ಲಿ ಕಠಿಣ ಸೆಕ್ಷನ್ ಗಳನ್ನ ಹಾಕಿದೆ.

ಯಾವ ಸೆಕ್ಷನ್​ಗೆ ಏನೇನು ಶಿಕ್ಷೆ?

ಐಪಿಸಿ 376(2)(N), 376(2)(K), 354(A), 354(B), 354(C) ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಯಾವ ಸೆಕ್ಷನ್​ಗೆ ಏನು ಶಿಕ್ಷೆ ಎನ್ನುವ ವಿವರ ಈ ಕೆಳಗಿನಂತಿದೆ.

  • 376(2)(N)- ಅತ್ಯಾಚಾರ ಮಾಡುವಾಗ ದೈಹಿಕವಾಗಿ ಘಾಸಿಗೊಳಿಸುವುದು ಕನಿಷ್ಟ 10 ವರ್ಷಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆ.

  • 376(2)(K)- ಒಪ್ಪಿಗೆ ನೀಡಲು ಸಾಧ್ಯವಾಗದ ಮಹಿಳೆ ಮೇಲೆ ಅತ್ಯಾಚಾರ ಕನಿಷ್ಟ 10 ವರ್ಷಗಳಿಂದ ಗರಿಷ್ಟ ಜೀವಾವಧಿ ಶಿಕ್ಷೆ

  • 354(A) – ಲೈಂಗಿಕ ದೌರ್ಜನ್ಯ ಕ್ಕೆ 3 ವರ್ಷಗಳವರೆಗೆ ಶಿಕ್ಷೆ.

  • 354(B) – ಮಹಿಳೆಯ ವಿವಸ್ತ್ರಗೊಳಿಸಲು ಬಲಪ್ರಯೋಗ 3 ರಿಂದ 7 ವರ್ಷಗಳವರೆಗೆ ಶಿಕ್ಷೆ

  • 354(C) ಮಹಿಳೆಯ ಲೈಂಗಿಕ ಕ್ರಿಯೆಯನ್ನು ಚಿತ್ರೀಕರಿಸುವುದು, ವೀಕ್ಷಿಸುವುದು 3 ರಿಂದ 7 ವರ್ಷಗಳವರೆಗೆ ಶಿಕ್ಷೆ.

  • 506- ಬೆದರಿಕೆ ಹಾಕುವುದು 7 ವರ್ಷಗಳವರೆಗೆ ಶಿಕ್ಷೆ

ಮತ್ತೊಂದೆಡೆ, ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣರನ್ನು ಭಾರತಕ್ಕೆ ಕರೆದೊಂದು ಬಂಧಿಸುವ ವಿಚಾರವಾಗಿ ವಿಶೇಷ ತನಿಖಾ ತಂಡ ಕಾರ್ಯ ಪ್ರವೃತ್ತವಾಗಿದೆ. ಕಿಡ್ನಾಪ್ ಪ್ರಕರಣದ ಆರೋಪಿ, ಮಾಜಿ ಸಚಿವ ಹೆಚ್ ಡಿ ರೇವಣ್ಣ ನ್ಯಾಯಾಂಗ ಬಂಧನ ಮುಂದುವರಿದಿದ್ದು, ಜಾಮೀನು ಅರ್ಜಿಯ ವಿಚಾರಣೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.

ಇನ್ನು, ವಿಡಿಯೋ ಲೀಕ್ ಮಾಡಿದವರ ವಿರುದ್ಧ ಹೋರಾಟ ನಡೆಸುತ್ತಿರುವ ಜೆಡಿಎಸ್ ರಾಜ್ಯ ಅಧ್ಯಕ್ಷ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ವಿಶೇಷ ತನಿಖಾ ತಂಡಕ್ಕೆ ದೂರು ನೀಡಿದ್ದು, ಕುಮಾರಸ್ವಾಮಿ ಸಂತ್ರಸ್ತೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

kiniudupi@rediffmail.com

No Comments

Leave A Comment