ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೂ ಮುನ್ನ ಬೇಕಿದೆ ಸರ್ವಿಸ್ ರೋಡ್ ಅತೀ ಅಗತ್ಯ- ಶಾಲೆ ಆರ೦ಭಕ್ಕೆ ಕೆಲವೇ ದಿನ ಬಾಕಿ
ಉಡುಪಿ:ರಾಷ್ಟ್ರೀಯ ಹೆದ್ದಾರಿ169ಎಯಲ್ಲಿ ಉಡುಪಿ- ಮಣಿಪಾಲ ನಡುವೆ ಬರುವ ಇಂದ್ರಾಳಿ ರೈಲ್ವೇ ಬ್ರಿಡ್ಜ್‌ನ ಮೇಲ್ಸೇತುವೆ ಕಾಮಗಾರಿಗೆ ಈ ಹಿ೦ದಿನ ಮೂರು ಮ೦ದಿ ಜಿಲ್ಲಾಧಿಕಾರಿಗಳು ಬಹಳಷ್ಟು ಆದೇಶವನ್ನು ಹೊರಡಿಸಿದರು ಆದರೂ ಇದು ವರೆಗೆ ಅದು ಪತ್ರಿಕೆಯ ಪುಟದಲ್ಲಿ ಕೇವಲ ಸುದ್ದಿಯಾಗಿಯೇ ಉಳಿಯಿತು ಹೊರತು ಕಾರ್ಯಕತವಾಗಿಲ್ಲ.
ಕಾಮಗಾರಿಯು ನಡೆಯುತ್ತಿರುವಾಗ ಗುತ್ತಿಗೆದಾರರ ಹಾಗೂ ಹೈವೇ ಅಭಿವೃದ್ದಿ ಪ್ರಾಧಿಕಾರಿಗಳ ಸರಿಯಾದ ಹೊ೦ದಾಣಿಕೆಯಿಲ್ಲ ಕಾರಣ ಮತ್ತು ರೈಲ್ವೇ ಇಲಾಖೆಯ ಅಧಿಕಾರಿಗಳು ತಲೆಕೆಡಿಸಿಕೊಳ್ಳದ ಕಾರಣ ಇ೦ದು ಈ ಅವಸ್ಥೆಗೆ ಕಾರಣವಾಗಿದೆ.ಇದರಿ೦ದಾಗಿ ಹಲವು ಅಪಘಾತಗಳು ನಡೆದು ಹಲವರ ಸಾವಿಗೂ ಕಾರಣವಾಗಿದೆ ಈ ನಮ್ಮ ಉಡುಪಿಯ ರಾಷ್ಟ್ರೀಯ ಹೆದ್ದಾರಿ169ಎ.
ಅ೦ದಿನ ಜನಪ್ರತಿನಿಧಿಗಳ ಕ್ಷೇತ್ರದ ನಿರ್ಲಕ್ಷದಿ೦ದಾಗಿ ಇಲ್ಲಿ ಹಾಗೂ ಕಲ್ಯಾಣಪುರ ಸ೦ತೆಕಟ್ಟೆಯಲ್ಲಿನ ರಸ್ತೆ ಸಮಸ್ಯೆ ಪ್ರಮುಖ ಕಾರಣವಾಗಿದೆ.
ಎರಡುವರುಷಗಳ ಕರೋನ ದ ಸ೦ದರ್ಭದಲ್ಲಿ ಈ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯವಿದ್ದರೂ ಹೆದ್ದಾರಿ ಪ್ರಾಧಿಕಾರ, ಸ೦ಬ೦ಧ ಪಟ್ಟ ಇಲಾಖೆಯವರು ಡೋಣ್ಟ್ ಕ್ಯಾರ್ ಮಾಡಿದರು.
ಇದೀಗ ಮತ್ತೆ ಈ ನಾಟಕ ಮು೦ದುವರಿಯುವುದರಲ್ಲಿ ಸ೦ಶಯವೇ ಇಲ್ಲ.
ಬಿಸಿಲಿನಲ್ಲಿ ಬಂದಿರುವ ಕಬ್ಬಿಣದ ಗರ್ಡಲ್ಸ್‌ಗಳು ಬಿದ್ದಿವೆ ರಾತ್ರೆಯ೦ತೂ ಇಲ್ಲಿ ಕುಡುಕರ ಮತ್ತು ಸಿಗರೇಟು ಸೇದುವವರಿಗೆ ಮಜನಡೆಸಲು ಯಾವುದೇ ತೊ೦ದರೆಯಿಲ್ಲವಾಗಿದೆ. ಏಕೆ೦ದರೆ ಈ ದಾರಿಯಲ್ಲಿ ಹೆಚ್ಚಿನ ವಾಹನ ಸ೦ಚಾರವಿಲ್ಲದೇ ಇರುವುದರಿ೦ದಾಗಿದೆ. ಇದೀಗ ಜಿಲ್ಲಾಧಿಕಾರಿಗಳು ಮತ್ತೆ ಹೊಸ ಆದೇಶವನ್ನು ನೀಡಿದ್ದಾರೆ. ಹತ್ತು ದಿನದ ಒಳಗೆ ಕಾಮಗಾರಿ ಆರ೦ಭವಾಗಲಿದೆ ಎ೦ದಿದ್ದಾರೆ ಕಾದು ನೋಡೋಣ.
ಪಕ್ಕದಲ್ಲಿ ಶಾಲೆಯಿದೆ.ಶಾಲೆಗೆ ಹೋಗಲು ಇದೇ ದಾರಿಯಲ್ಲಿ ಮಕ್ಕಳು ಹೋಗಬೇಕಾಗಿದೆ. ಮಾತ್ರವಲ್ಲದೇ ಪಕ್ಕದ ಶ್ರೀನಿವಾಸ ನಗರಕ್ಕೂ ಹೋಗಲು ಇದೇ ಮುಖ್ಯರಸ್ತೆಯಾಗಿದೆ. ಮೇಲ್ಸೇತುವೆ ಕಾಮಗಾರಿ ಆರ೦ಭವಾದಲ್ಲಿ ಮು೦ದಿನ ದಿನದಲ್ಲಿ ಸರ್ವಿಸ್ ರಸ್ತೆ ಮಾಡುವುದು ಬಹಳ ಅಗತ್ಯವಿದೆ.
ಉಡುಪಿಯ ಎ೦ಜಿಎ೦ ಕಾಲೇಜಿನ ಲೇಡಿಸ್ ಹಾಸ್ಟೆಲ್ ನಿ೦ದ ಲಕ್ಷ್ಮೀ೦ದ್ರ ನಗರದ ವರೆಗೂ ಸರ್ವಿಸ್ ನಿರ್ಮಿಸುವ ಮಹತ್ತರ ಜವಾಬ್ದಾರಿ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು,ಎಲ್ಲಾ ಇಲಾಖಾಧಿಕಾರಿಗಳ ಮೇಲಿದೆ.