Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಸಂತ್ರಸ್ತೆ ಹೇಳಿಕೆ ಮೇಲೆ ರೇವಣ್ಣ ಕಿಡ್ನ್ಯಾಪ್‌ ಕೇಸ್‌ ಭವಿಷ್ಯ, ಅಪ್ಪ-ಮಗನ ಹಣೆಬರಹ ಬರೆಯಲಿರುವ ಮಹಿಳೆ

ಬೆಂಗಳೂರು:ಮೇ 05: ಜೆಡಿಎಸ್​ ಶಾಸಕ ಎಚ್‌.ಡಿ.ರೇವಣ್ಣ ಸಂಬಂಧಿಯಾದ ಸತೀಶ್‌ ಬಾಬು ಎಂಬಾತನು ಲೈಂಗಿಕ ದೌರ್ಜನ್ಯಕೀಡಾದ ಸಂತ್ರಸ್ತೆಯನ್ನು ಅಪಹರಿಸಿ, ಹುಣಸೂರಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಇರಿಸಿದ್ದು, ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ರಕ್ಷಿಸಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಎಸ್‌ಐಟಿ ಅಧಿಕಾರಿಗಳು ಎಚ್‌.ಡಿ.ರೇವಣ್ಣ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮನೆಯಿಂದಲೇ ವಶಪಡಿಸಿಕೊಂಡಿಸಿಕೊಂಡಿದ್ದಾರೆ. ಇನ್ನು ರೇವಣ್ಣ ಅವರನ್ನು ಇಂದು(ಮೇ 05) ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ. ಇನ್ನು ಸಂತ್ರಸ್ತೆ ಹೇಳಿಕೆ ಮೇಲೆಯೇ ರೇವಣ್ಣ ಕಿಡ್ನ್ಯಾಪ್‌ ಪ್ರಕರಣದ ಭವಿಷ್ಯ ನಿಂತಿದೆ. ಸಂತ್ರಸ್ತೆ ಮಹಿಳೆ ಕಿಡ್ನಾಪ್ ಆಗಿರುವುದು ನಿಜ ಎಂದು ಒಪ್ಪಿಕೊಂಡರೆ ಅಪ್ಪನ ಜೊತೆ ಮಗನಿಗೂ ಸಂಕಷ್ಟ ಎದುರಾಗಲಿದೆ. ಹೀಗಾಗಿ ಮಧ್ಯಾಹ್ನದ ಬಳಿಕ ರೇವಣ್ಣ ಹಣೆಬರಹ ನಿರ್ಧಾರವಾಗುವ ಸಾಧ್ಯತೆಗಳಿವೆ.

ಪ್ರಜ್ವಲ್ ರೇವಣ್ಣನಿಂದ ಲೈಂಗಿಕ ದೌರ್ಜನ್ಯಕೀಡಾಗಿದ್ದ ಸಂತ್ರಸ್ತೆ ಮಹಿಳೆಯನ್ನು ಎಚ್​ಡಿ ರೇವಣ್ಣ ಅವರು ಕಿಡ್ನಾಪ್ ಮಾಡಿಸಿದ್ದಾರೆ ಎಂದು ಮಹಿಳೆಯ ಪುತ್ರ ದೂರು ನೀಡಿದ್ದಾನೆ. ಈ ದೂರಿನ ಮೇರೆಗೆ ರೇವಣ್ಣ ವಿರುದ್ಧ ಮೈಸೂರಿನ ಕೆ.ಆರ್ ನಗರ ಪೊಲೀಸ್​ಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಎಸ್​ಐಟಿ ಅಧಿಕಾರಿಗಳು ಕಿಡ್ನಾಪ್ ಆಗಿದ್ದ ಮಹಿಳೆಯನ್ನು ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಸಂತ್ರಸ್ತೆ ಮಹಿಳೆ ಹುಣಸೂರು ತಾಲೂಕಿನ ಕಾಳೇಹಳ್ಳಿಯಲ್ಲಿರುವ ರೇವಣ್ಣ ಆಪ್ತ ರಾಜಗೋಪಾಲ್ ತೋಟದಲ್ಲಿದ್ದ ಪತ್ತೆಯಾಗಿದ್ದಾಳೆ. ಇದರ ಬೆನ್ನಲ್ಲೇ ಎಸ್​ಐಟಿ ಅಧಿಕಾರಿಗಳು ನಿನ್ನೆ ರೇವಣ್ಣ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆ ದೂರು ನೀಡಬಾರದು ಎಂದು ಆಕೆಯನ್ನೆ ಅಪಹರಣ ಮಾಡಿದ ಗಂಭೀರ ಆರೋಪ ಈಗ ಹೆಚ್ ಡಿ ರೇವಣ್ಣ ಮೇಲಿದೆ. ಪ್ರಜ್ವಲ್​ ಅತ್ಯಾಚಾರ ವಿಚಾರ ರೇವಣ್ಣನಿಗೆ ಗೊತ್ತಿತ್ತಾ.? ವಿಚಾರ ಗೊತ್ತಿದ್ದು ಅತ್ಯಾಚಾರ ಮಾಡಿದ್ದ ಆರೋಪಿ ಪ್ರಜ್ವಲ್ ರೇವಣ್ಣನಿಗೆ ಸಹಾಯ ಮಾಡುವ ಉದ್ದೇಶದಿಂದ ಮಹಿಳೆಯನ್ನು ಕಿಡ್ನಾಪ್ ಮಾಡಿಸಿದ್ರಾ.? ದೂರು ಕೊಟ್ಟಲ್ಲಿ ನಿನಗೆ ಏನಾದ್ರು ಮಾಡುತ್ತೆವೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದಾರೆಯೇ? ಹೀಗೆ ಹಲವಾರು ಆಯಾಮದಲ್ಲಿ ವಿಚಾರಣೆ ನಡೆಸಲಿದ್ದಾರೆ.

ಸಂತ್ರಸ್ತೆ ಹೇಳಿಕೆಯೇ ನಿರ್ಣಾಯಕ!
ಹೌದು….ಈಗಾಗಲೇ ಕಿಡ್ನಾಪ್​ ಪ್ರಕರಣದಲ್ಲಿ ಎಚ್​ಡಿ ರೇವಣ್ಣ ಅವರ ಬಂಧನವಾಗಿದೆ. ಒಂದು ವೇಳೆ ರೇವಣ್ಣ ಅವರು ಈ ಕೇಸ್​ನಿಂದ ಬಚಾವ್ ಆಗಬೇಕೆಂದರೆ ಸಂತ್ರಸ್ತೆ ಮಹಿಳೆಯ ಹೇಳಿಕೆ ಮುಖ್ಯವಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಅಧಿಕಾರಿಗಳು ರಾತ್ರಿ ಎಚ್ ಡಿ ರೇವಣ್ಣ ಅವರನ್ನು ವಿಚಾರಣೆ ನಡೆಸಿ ಕೆಲ ಮಾಹಿತಿ ಪಡೆದುಕೊಂಡಿದ್ದಾರೆ. ಆದ್ರೆ, ರೇವಣ್ಣ ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎನ್ನುವ ಮಾತುಗಳನ್ನಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಇದೀಗ ಎಸ್​ಐಟಿ ಅಧಿಕಾರಿಗಳು ಸಂತ್ರಸ್ತೆ ಮಹಿಳೆಯನ್ನು ವಿಚಾರಣೆಗೊಳಪಡಿಸಲಿದ್ದ,ಈ ಮಹಿಳೆ ನೀಡುವ ಹೇಳಿಕೆ ಮೇಲೆ ರೇವಣ್ಣ ಭವಿಷ್ಯ ನಿರ್ಧಾರವಾಗಲಿದೆ.

ಮಹಿಳೆಯ ಹೇಳಿಕೆ ಬಹುಮುಖ್ಯ…
ಇಂದು ರೇವಣ್ಣ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮೊದಲೇ ಸಂತ್ರಸ್ತೆ ಮಹಿಳೆಯಿಂದ ಮಾಹಿತಿ ಮತ್ತು ಹೇಳಿಕೆಯನ್ನು ಪಡೆಯಲಿದ್ದಾರೆ. ಈ ಹೇಳಿಕೆ ಪ್ರಕರಣದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಒಂದು ವೇಳೆ ಮಹಿಳೆ ಕಿಡ್ನಾ ಮಾಡಿ ತನಗೆ ಬೆದರಿಕೆ ಹಾಕಿದ್ದರು. ತನ್ನ ಮೇಲೆ ಅತ್ಯಾಚಾರ ಆಗಿದೆ ಈ ವಿಚಾರ ಹೊರ ಬಾರದಂತೆ ತಡೆದರು ಎಂದು ಹೇಳಿಕೆ ನೀಡಿ ಸಾಕ್ಷಾ ನೀಡಿದ್ರೆ ರೇವಣ್ಣ ಕುಟುಂಬಕ್ಕೆ ಸಂಕಷ್ಟ ಎದುರಾಗಲಿದೆ.

ಇಲ್ಲ ತಾನಾಗಿಯೇ ಹೋಗಿದ್ದೆ ಯಾವ ಒತ್ತಡ ಇರಲಿಲ್ಲ ಎಂದು ಹೇಳಿಕೆ ನೀಡಿದ್ರೆ ಮಾತ್ರ ರೇವಣ್ಣ ಮತ್ತು ಕುಟುಂಬಕ್ಕೆ ಕೊಂಚ ರಿಲೀಫ್​ ಸಿಕ್ಕಂತಾಗುತ್ತದೆ. ಸದ್ಯ ಕಿಡ್ನಾಪ್ ಆಗಿದ್ದ ಮಹಿಳೆ ಹೇಳಿಕೆ ಹಾಗೂ ಇತರ ಸಾಕ್ಷಿಗಳ ಮೇಲೆ ರೇವಣ್ಣ ಮತ್ತು ಪುತ್ರ ಪ್ರಜ್ವಲ್​ ಭವಿಷ್ಯ ನಿರ್ಧಾರವಾಗಲಿದೆ. ಹೀಗಾಗಿ ಸಂತ್ರಸ್ತೆ ಮಹಿಳೆ ಎಸ್​ಐಟಿ ಮುಂದೆ ಏನೆಲ್ಲಾ ಹೇಳಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

No Comments

Leave A Comment