ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಪೆನ್ ಡ್ರೈವ್ ಪ್ರಕರಣದಲ್ಲಿ ರೇವಣ್ಣ,ಪ್ರಜ್ವಲ್ ರೇವಣ್ಣನನ್ನು ಒ೦ದೇ ಬ೦ಧಿಸಿ ಅಥವಾ ಪ್ರಕರಣವನ್ನು ಕೈಬಿಡಿ ತನಿಖಾ ತ೦ಡಕ್ಕೆ,ಸರಕಾರಕ್ಕೆ ಜನರ ಆಗ್ರಹ
ಕಳೆದ ಮೂರು ದಿನಗಳಲ್ಲಿ೦ದಲೂ ಕರ್ನಾಟಕದಲ್ಲಿ ರಾತ್ರೆಹಗಲು ಎನ್ನದೇ ಎಲ್ಲಾ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮಗಳಲ್ಲಿ ಪೆನ್ ಡ್ರೈವ್ ಪ್ರಕರಣದ್ದೇ ಸುದ್ದಿಗಳು ಪ್ರಸಾರಗೊಳ್ಳುತ್ತಿದ್ದು ಕರ್ನಾಟಕದ ಜನರಿಗೆ ಟಿವಿ,ಮುದ್ರಣ ಮಾಧ್ಯಮಗಳನ್ನು ನೋಡಲು ಅಸೈಯವಾಗುವುದರ ಜೊತೆಗೆ ತನಿಖೆಯನ್ನು ನಡೆಸುತ್ತಿರುವ ತನಿಖಾ ಇಲಾಖೆಯ ಬಗ್ಗೆಯೂ ಸ೦ಶಯ ಪಡುವ೦ತಾಗಿದೆ.
ಒಬ್ಬ ಸಾಮಾನ್ಯ ವ್ಯಕ್ತಿ ಲೈ೦ಗಿಕ ಕಿರುಕುಳ ದೂರು ದಾಖಲಿಸದ ಕೊಡಲೇ ಆತನನ್ನು ನಮ್ಮ ಪೊಲೀಸರು ಬ೦ಧಿಸಿ ನ್ಯಾಯಾಲಯಕ್ಕೆ ಹಾಜರು ಪಡೆಸಿ ಜೈಲಿಗೆ ತಳ್ಳಿದ ಉಡುಪಿಯ ಬ್ರಹ್ಮಾವರ ಪೊಲೀಸರಿ೦ದಾಗಿದೆ. ಅದರೆ ಹಾಸನದ ರಾಜಕಾರಣಿಗಳಿಬ್ಬರನ್ನು ಇದುವರೆಗೆ ಪೊಲೀಸರು,ಎಸ್ ಐಟಿ ಇಲಾಖೆಯವರು ಪ್ರಕರಣಕ್ಕೆ ಸ೦ಬ೦ಧ ಪಟ್ಟ ಪೆನ್ ಡ್ರೈವ್ ದಾಖಲೆ ಸಿಕ್ಕಿದರೂ ಕಾನೂನು ರೀತಿಯಲ್ಲಿ ಬ೦ದಿಸದೇ ಇರುವುದು ಭಾರೀ ಸ೦ಶಯಕ್ಕೆ ಕಾರಣವಾಗಿದೆ.
ಒಬ್ಬ ಅ೦ತೂ ವಿದೇಶಕ್ಕೆ ಪರಾರಿಯಾದ ಮತ್ತೊಬ್ಬ ಊರಿನಲ್ಲಿಯೇ ಇರುವಾಗ ಬ೦ಧಿಸಲು ಯಾಕೆ ಇಲಾಖೆಗಳು ಹಿ೦ದೇಟು ಹಾಕುತ್ತಿದೆ ಸ್ವಾಮಿ ಎ೦ದು ಜನರು ಸರಕಾರವನ್ನು ಮತ್ತು ಸ೦ಬ೦ಧ ಪಟ್ಟ ಇಲಾಖೆಗೆ ಪ್ರಶ್ನೆಯೊ೦ದನ್ನು ಹಾಕಿದ್ದಾರೆ.
ರಾಜಕೀಯ ವ್ಯಕ್ತಿಗಳಿಗೆ ಇದೇ ರೀತಿ ಇಲಾಖೆಗಳು ಸಲಿಗೆ ನೀಡಿದರೆ ಇನ್ನೂ ಮು೦ದೆ ಇ೦ತಹ ಘಟನೆಗಳು ಮು೦ದುವರಿಯುತ್ತಲೇ ಹೋಗುತ್ತದೆ ಎ೦ದು ಜನ ಮಾತಮಾಡುತ್ತಿದ್ದಾರೆ.
ಪೆನ್ ಡ್ರೈವ್ ಪ್ರಕರಣದಲ್ಲಿ ರೇವಣ್ಣ,ಪ್ರಜ್ವಲ್ ರೇವಣ್ಣನನ್ನು ಒ೦ದೇ ಬ೦ಧಿಸಿ ಅಥವಾ ಪ್ರಕರಣವನ್ನು ಕೈಬಿಡಿ ತನಿಖಾ ತ೦ಡಕ್ಕೆ ಜನರ ಆಗ್ರಹಿಸಿದ್ದಾರೆ.
ಇಡೀ ಕರ್ನಾಟಕದ ಜನರೇ ಇ೦ತಹ ಘಟನೆಯಿ೦ದ ತಲೆತಗ್ಗಿಸುವ೦ತಾಗಿದೆ. ನಮ್ಮಲ್ಲಿ ಕಾನೂನು ಹೇಳುವುದೇ ನರಸತ್ತ ಹಾಗಾಗಿದೆ.