Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಅಮೇರಿಕದಲ್ಲಿ ಭೀಕರ ಕಾರು ಅಪಘಾತಕ್ಕೆ ಮೂವರು ಭಾರತೀಯರು ಮೃತ್ಯು

ವಾಷಿಂಗ್ಟನ್‌, ಏ. 27: ಅಮೇರಿಕಾದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗುಜರಾತ್‌ನ ಮೂವರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಗುಜರಾತಿನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಮೃತ ದುರ್ದೈವಿಗಳು.

ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಕೌಂಟಿಯಲ್ಲಿ ಎಸ್‌ಯುವಿ ಕಾರು ಅಪಘಾತ ಸಂಭವಿಸಿದೆ. ಐ-85 ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ ಈ ಕಾರು, ಎಲ್ಲಾ ಲೇನ್‌ಗಳನ್ನು ದಾಟಿ ಒಡ್ಡುಗಳ ಮೇಲೇರಿದೆ. ಕೊನೆಗೆ ಸೇತುವೆಯ ಎದುರು ಭಾಗದಲ್ಲಿದ್ದ ಮರಗಳಿಗೆ ಅಪ್ಪಳಿಸಿದೆ ಎನ್ನಲಾಗಿದೆ.

ಇನ್ನು ಕಾರನ್ನು ಮಿತಿಗಿಂತ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಲಾಗಿತ್ತು. ಕಾರು ಮರದ ಮೇಲೆ ಸಿಲುಕಿಕೊಂಡಿದ್ದು, ಹಲವು ತುಂಡುಗಳಾಗಿ ಛಿದ್ರಗೊಂಡಿತ್ತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಕಾರು ಢಿಕ್ಕಿ ಹೊಡೆದಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

No Comments

Leave A Comment