ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಜಮ್ಮು ಮತ್ತು ಕಾಶ್ಮೀರ: ರಾಂಬನ್ ನಲ್ಲಿ ಭೂಕುಸಿತ, 1 ಕಿಮೀ ವರೆಗೂ ಭೂಮಿ ಮುಳುಗಡೆ, 30 ಮನೆಗಳಿಗೆ ಹಾನಿ!
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಬರೊಬ್ಬರಿ 1 ಕಿ.ಮೀ ವರೆಗೂ ರಸ್ತೆಗಳಲ್ಲಿನ ಭೂಮಿ ಮುಳುಗಡೆಯಾಗಿ 30ಮನೆಗಳು ಹಾನಿಗೊಳಗಾಗಿದೆ.
ಗುರುವಾರ ಸಂಜೆಯಿಂದ ಜಮ್ಮು ಮತ್ತು ಕಾಶ್ಮೀರದ ರಂಬಾನ್-ಗೂಲ್ ರಸ್ತೆಯಲ್ಲಿ ಸುಮಾರು 1 ಕಿ.ಮೀ.ನಷ್ಟು ಪ್ರದೇಶದಲ್ಲಿ ಭೂಮಿ ಮುಳುಗಡೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನಿಂದ 6 ಕಿಮೀ ದೂರದಲ್ಲಿರುವ ಪೆರ್ನೋಟ್ ಗ್ರಾಮದಲ್ಲಿ ಸುಮಾರು 30 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನಿನ್ನೆ ಸಂಜೆಯಿಂದ ರಸ್ತೆಗಳಲ್ಲಿ ಸಣ್ಣಪುಟ್ಟ ಬಿರುಕುಗಳು ಉಂಟಾಗಿದ್ದು, 1000-1200 ಮೀಟರ್ ಉದ್ದದ ರಸ್ತೆಗೆ ಹಾನಿಯಾಗಿದೆ. ಈ ಭಾಗದಲ್ಲಿ ಭೂಮಿ ನಿಧಾನವಾಗಿ ಮುಳುಗುತ್ತಿದ್ದು, ಭೂಕುಸಿತದಿಂದಾಗಿ ಕೆಲವೆಡೆ 10-12 ಮೀಟರ್‌ಗಳಷ್ಟು ರಸ್ತೆ ಕುಸಿದಿದೆ. ಇಲ್ಲಿ ಇನ್ನೂ ಭೂ ಕುಸಿತ ಮುಂದುವರೆದಿದೆ. ಸಂತ್ರಸ್ತ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್‌ನ ಕಮಾಂಡಿಂಗ್ ಅಧಿಕಾರಿ ಎಸ್‌ಕೆ ಗೌತಮ್ ಹೇಳಿದ್ದಾರೆ.
“ನಿನ್ನೆ ಸಂಜೆ ರಾಂಬನ್ ನಿಂದ ಸುಮಾರು 5 ಕಿ.ಮೀ ದೂರದಲ್ಲಿ ಭೂಕುಸಿತ ಪ್ರಾರಂಭವಾಯಿತು. ಭೂ ಕುಸಿತ ಮತ್ತು ಭೂಮಿ ಮುಳುಗಡೆಯಿಂದಾಗಿ ರಸ್ತೆಗಳು ಹಾಳಾಗಿವೆ. ಸಮೀಪದ ಪ್ರದೇಶಗಳಲ್ಲಿ ಸುಮಾರು 30-40 ಮನೆಗಳು ಸಹ ಹಾನಿಗೊಳಗಾಗಿವೆ. ನಾವು ಈ ಭಾಗದಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಿದ್ದೇವೆ ಮತ್ತು ಅವರು ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ರಾಂಬನ್ ಎಡಿಡಿಸಿ ರೋಷನ್ ಲಾಲ್ ಮಾಹಿತಿ ನೀಡಿದ್ದಾರೆ.
ಜಮೀನು ಮುಳುಗಡೆಯಿಂದ ಬೆಳೆ ಹಾನಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.