Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಉಡುಪಿ: ಹೂಡೆ ಹಂಪನಕಟ್ಟೆ ಸಮೀಪ ಕಾರು-ಆಟೋ ರಿಕ್ಷಾ ಅಪಘಾತ

ಉಡುಪಿ: ಹಂಪನಕಟ್ಟೆ ಬಳಿ ಕಾರು ಮತ್ತು ರಿಕ್ಷಾ ಅಪಘಾತಗೊಂಡ ಕುರಿತು ವರದಿಯಾಗಿದೆ.

ಈ ಅಪಘಾತದಲ್ಲಿ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರ ಸಹಾಯದಿಂದ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಕರಿದ್ದು ಸಣ್ಣ ಪುಟ್ಟ ಗಾಯಗಳಾಗಿವೆಯೆಂದು ತಿಳಿದು ಬಂದಿದೆ. ರಿಕ್ಷಾ ಹಂಪನಕಟ್ಟೆಯಿಂದ ಸಂತೆಕಟ್ಟೆ ಕಡೆಗೆ ಮತ್ತು ಕಾರು ಸಂತೆಕಟ್ಟೆಯಿಂದ ಬರುತ್ತಿತ್ತು ಎನ್ನಲಾಗಿದೆ.

ಅಪಘಾತಗೊಂಡ ರಭಸಕ್ಕೆ ಕಾರು ಮತ್ತು ರಿಕ್ಷಾ ನಜ್ಜುಗುಜ್ಜಾಗಿದೆ. ಸಂತೆಕಟ್ಟೆ-ಹೂಡೆ ಮುಖ್ಯರಸ್ತೆಯಲ್ಲಿ ಅಪಘಾತ ನಡೆದಿದ್ದು ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

No Comments

Leave A Comment