ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ರಾಜ್ಯ NDA ನಾಯಕರಿಗೆ ಶಾಕ್​​: ಸಂಜಯ ಪಾಟೀಲ್​, ಕುಮಾರಸ್ವಾಮಿಗೆ ನೋಟಿಸ್; ಮಹಿಳಾ ಆಯೋಗ

ಬೆಂಗಳೂರು, ಏಪ್ರಿಲ್​ 15: ಮಹಿಳೆಯರ ಘನತೆ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತಂದ ಆರೋಪದಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ್​ ಪಾಟೀಲ್ ​ ಅವರಿಗೆ ಮಹಿಳಾ ಆಯೋಗ  ನೋಟಿಸ್​ ನೀಡಿದೆ. ಇಬ್ಬರೂ ನಾಯಕರು ಖುದ್ದು ಮಹಿಳಾ ಆಯೋಗಕ್ಕೆ ಏಳು ದಿನಗಳೊಳಗೆ ವಿವರಣೆ ನೀಡಬೇಕು. ತಪ್ಪು ಸಾಬೀತಾದರೆ ಜೈಲು ಶಿಕ್ಷೆಯಾಗುತ್ತೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರಿತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಿಳೆಯರ ಬಗ್ಗೆ ಕೀಳುಮಟ್ಟದ ಭಾಷೆ ಬಳಕೆ ಮಾಡಬಾರದು. ಗಂಭಿರ ಸ್ವರೂಪ ಪಡೆದ್ರೆ ಜೈಲು ಶಿಕ್ಷೆ ಆಗುತ್ತದೆ. ಹೆಣ್ಣುಮಕ್ಕಳಿಗೆ ಅವಮಾನ ಮಾಡಿದರೆ ಹೇಗೆ? ಒಬ್ಬರು ಪೆಗ್ ಅಂತಾರೆ, ಮತ್ತೊಬ್ಬರು ಗ್ಯಾರಂಟಿ ಯೋಜನೆ ವಿಚಾರದಲ್ಲಿ ಮಹಿಳಯರನ್ನು ಅವಮಾನ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಹೆಣ್ಣಮಕ್ಕಳನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲೆ ಮಾಡುವುದು ಸರ್ಕಾರದ ಗುರಿ. ಸಂವಿಧಾನ ಕೂಡ ಇದನ್ನೇ ಹೇಳಿದೆ. ಪ್ರಮಾಣ ವಚನದ ಸ್ವೀಕಾರದ ವೇಳೆ ಹೆಣ್ಣುಮಕ್ಕಳಿಗೆ ಗೌರವ ನೀಡುವುದಾಗಿ ಹೇಳತ್ತಾರೆ. ರಾಜಕೀಯ ಲಾಭಕ್ಕೆ ಹೆಣ್ಣುಮಕ್ಕಳನ್ನು ಬಳಕೆ ಮಾಡಬಾರದು ಎಂದರು.

ಏನಿದು ಘಟನೆ:-

ಶನಿವಾರ (ಏ.13) ರಂದು ಹಿಂಡಲಗಾದಲ್ಲಿ ನಡೆದಿದ್ದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ್ ಮಾತನಾಡಿ, “ಅಕ್ಕನ ಕ್ಷೇತ್ರದಲ್ಲಿಯೇ ಬಿಜೆಪಿ ಸಮಾವೇಶದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಸೇರಿದ್ದಾರೆ. ಅಕ್ಕ ನಿದ್ದೆಗೆಡುವುದು ಗ್ಯಾರಂಟಿ.‌ ಅವರಿಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು ಎಕ್ಸ್‌ಟ್ರಾ ಪೆಗ್ ಹೆಚ್ಚುವರಿ ಕುಡಿಯಬೇಕು” ಎಂದು ಹೇಳಿದ್ದರು.

ಸಂಜಯ ಪಾಟೀಲ್ ಹೇಳಿಕೆ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ತುಮಕೂರಿನಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ, ಗ್ಯಾರಂಟಿಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

No Comments

Leave A Comment