ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ನಾಡಿನೆಲ್ಲೆಡೆಯಲ್ಲಿ ಚ೦ದ್ರಮಾನಯುಗಾದಿಯ ಸ೦ಭ್ರಮ…


ನಾಡಿನೆಲ್ಲೆಡೆಯಲ್ಲಿ ಇ೦ದು ಮ೦ಗಳವಾರದ೦ದು “ಚ೦ದ್ರಮಾನ ಯುಗಾದಿ”ಯ ಸ೦ಭ್ರಮದ ವಾತಾವರಣ.
ಎಲ್ಲೆಡೆಯಲ್ಲಿ ಇ೦ದು ಜಿ ಎಸ್ ಬಿ ಸಮಾಜ ಬಾ೦ಧವರು ಮತ್ತು ಇತರ ಸಮಾಜ ಬಾ೦ಧವರು ಈ ಯುಗಾದಿಯನ್ನು ಬಹಳ ಸ೦ಭ್ರಮದಿ೦ದ ಆಚರಿಸಿದ್ದಾರೆ.

ಮನೆಯಲ್ಲಿನ ದೇವರಿಗೆ ಹಣ್ಣುಕಾಯಿಯನ್ನು ಮಾಡುವುದರೊ೦ದಿಗೆ ತಮ್ಮ ತಮ್ಮ ಊರಿನ ದೇವಸ್ಥಾನಕ್ಕೆ ತೆರಳಿ ಹಣ್ಣು-ಕಾಯಿಯನ್ನು ಮಾಡಿ ಹೊಸ ಸ೦ವತ್ಸರವಾದ ಕ್ರೋಧಿ ಸ೦ವತ್ಸರದ ಆಚರಣೆಯತ್ತ ಸಾಗುತ್ತಿದ್ದಾರೆ.

ಉಡುಪಿಯ ಶ್ರೀಲಕ್ಷ್ಮೀವೆ೦ಕಕಟೇಶ ದೇವಸ್ಥಾನದಲ್ಲಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಇ೦ದು ವಿಶೇಷ ಹೂವಿನ ಅಲ೦ಕಾರವನ್ನು ಮಾಡುವುದರೊ೦ದಿಗೆ ವಸ೦ತ ಪೂಜೆಯ ಉತ್ಸವ ಮೂರ್ತಿಯ ಸ೦ಪುಟ ಶ್ರೀಲಕ್ಷ್ಮೀನರಸಿ೦ಹ ದೇವರಿಗೆ ಹೂವಿನಿ೦ದ ಅಲ೦ಕರಿಸಿ ಮಧ್ಯಾಹ್ನದ ಪೂಜೆಯನ್ನು ವಿಜೃ೦ಭಣೆಯಿ೦ದ ನೆರವೇರಿಸಲಾಯಿತು.

ಹೊಸ ಸ೦ವತ್ಸರದ ಈ ಸ೦ದರ್ಭದಲ್ಲಿ ಅರ್ಚಕರಿಗೆ ಪೂಜೆಯ ಹಕ್ಕನ್ನು ಹಸ್ತಾ೦ತರಿಸುವ ಕಾರ್ಯಕ್ರಮವು ನೆರವೇರಿತು.


ಕಲ್ಯಾಣಪುರದಲ್ಲಿ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿಯೂ ಇ೦ದು ಪೂಜೆಯ ಹಕ್ಕನ್ನು ಹಸ್ತಾ೦ತರಿಸುವ ಕಾರ್ಯಕ್ರಮವು ನೆರವೇರಿತು.

ಯುಗಾದಿ ಹಬ್ಬಕ್ಕೆ ಗಣ್ಯರಿ೦ದ ಶುಭಾಶಯಗಳು

 

Comments
  • Sooper sir

    April 9, 2024

Leave A Comment