ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಜಯಪ್ರದಾಗೆ ಬಣ್ಣದ ಬದುಕಿನ ಬಾಗಿಲು ತೆರೆಯಿತು ಸ್ಕೂಲ್​ನಲ್ಲಿ ಮಾಡಿದ ಆ ಡ್ಯಾನ್ಸ್

ನಟಿ ಜಯಪ್ರದಾ (Jayaprada) ಅವರಿಗೆ ಇಂದು (ಏಪ್ರಿಲ್ 3) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅವರು ಚಿತ್ರರಂಗದಲ್ಲಿ ದೊಡ್ಡ ಗೆಲುವು ಕಂಡರು. ಸಾಕಷ್ಟು ಮನ್ನಣೆ ಪಡೆದಿರುವ ಅವರು 80 ಹಾಗೂ 90ರ ದಶಕದಲ್ಲಿ ಸ್ಟಾರ್ ನಟಿ ಆಗಿ ಮಿಂಚಿದ್ದರು. ನಂತರ ಅವರು ರಾಜಕೀಯಕ್ಕೆ ಬಂದರು. ಈಗ ಜಯಪ್ರದಾಗೆ 82 ವರ್ಷ. ಸಿನಿಮಾಗಳಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಅವರು ಮೊದಲ ಚಿತ್ರಕ್ಕೆ ಪಡೆದಿದ್ದು ಕೇವಲ 10 ರೂಪಾಯಿ. ಈ ಅಚ್ಚರಿಯ ವಿಚಾರ ರಿವೀಲ್ ಆಗಿದೆ.

ಆಂಧ್ರಪ್ರದೇಶದ ಚಿಕ್ಕ ಹಳ್ಳಿಯಾದ ರಾಜಮಂಡ್ರಿಯಲ್ಲಿ ಜನಿಸಿದ ಜಯಪ್ರದಾ ಅವರ ನಿಜವಾದ ಹೆಸರು ಲಲಿತಾ ರಾಣಿ. ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಜಯಪ್ರದಾ ಅವರ ತಂದೆ ಕೃಷ್ಣ ತೆಲುಗು ಸಿನಿಮಾಗಳ ವಿತರಣೆ ಮಾಡುತ್ತಿದ್ದರು. ಜಯಾಗೆ ಚಿಕ್ಕಂದಿನಿಂದಲೂ ನೃತ್ಯದಲ್ಲಿ ತುಂಬಾ ಆಸಕ್ತಿ ಇತ್ತು. ತಾಯಿ ಅವರ ಕಲೆಯನ್ನು ಅರ್ಥಮಾಡಿಕೊಂಡರು. ಹೀಗಾಗಿ ಮಗಳಿಗೆ ನೃತ್ಯ ತರಬೇತಿ ನೀಡಿದರು. ಅವರು ತಮ್ಮ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ.

ಜಯಪ್ರದಾ ಅವರಿಗೆ ಆಗ ಕೇವಲ 14 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಶಾಲೆಯ ಸಮಾರಂಭದಲ್ಲಿ ನೃತ್ಯ ಮಾಡುವ ಅವಕಾಶವನ್ನು ಪಡೆದರು. ಜಯಾ ಡ್ಯಾನ್ಸ್ ನೋಡಿ ನಿರ್ದೇಶಕರೊಬ್ಬರು ತುಂಬಾ ಇಂಪ್ರೆಸ್ ಆದರು. ಅದರ ನಂತರ ನಿರ್ದೇಶಕರು ಜಯಾ ಅವರಿಗೆ 1974ರಲ್ಲಿ ತೆಲುಗು ಸಿನಿಮಾ ‘ಭೂಮಿ ಕೋಸಂ’ನಲ್ಲಿ 3 ನಿಮಿಷಗಳ ಪಾತ್ರವನ್ನು ನೀಡಿದರು. ಅವರ ದೃಶ್ಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿತು. ಇದರಿಂದ ಸಂತೋಷಗೊಂಡ ನಿರ್ಮಾಪಕರು ಜಯಾಗೆ 10 ರೂಪಾಯಿ ನೀಡಿದರು. ಇದು ಅವರ ಮೊದಲ ಸಂಭಾವನೆ1976ರ ವರ್ಷವು ಜಯಪ್ರದಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತ್ತು. ‘ಸೀತಾ ಕಲ್ಯಾಣಂ’ ಸಿನಿಮಾದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಿದ್ದರು.

ಕ್ರಮೇಣ ಜಯಾ ಯಶಸ್ಸಿನ ಮೆಟ್ಟಿಲು ಏರತೊಡಗಿದರು. 17ನೇ ವಯಸ್ಸಿನಲ್ಲಿ ಜಯಾ ದಕ್ಷಿಣ ಚಿತ್ರರಂಗದ ದೊಡ್ಡ ತಾರೆಯಾದರು. ಅವರು ರಾಜ್​ಕುಮಾರ್, ಕಮಲ್ ಹಾಸನ್, ಮೋಹನ್ ಲಾಲ್ ಮತ್ತು ರಜನಿಕಾಂತ್ ಅವರಂತಹ ದಕ್ಷಿಣದ ದೊಡ್ಡ ತಾರೆಗಳೊಂದಿಗೆ ಕೆಲಸ ಮಾಡಿದ್ದಾರೆ.

1977ರಲ್ಲಿ ‘ಸನಾದಿ ಅಪ್ಪಣ್ಣ’ ಸಿನಿಮಾ ಮೂಲಕ ಜಯಪ್ರದಾ ಕನ್ನಡ ಲೋಕಕ್ಕೆ ಕಾಲಿಟ್ಟರು. ‘ಹುಲಿಯ ಹಾಲಿನ ಮೇವು’, ‘ಕವಿರತ್ನ ಕಾಳಿದಾಸ’ ಮೊದಲಾದ ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 1979ರಲ್ಲಿ ಜಯಪ್ರದಾ ಅವರು ‘ಸರ್ಗಮ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಪ್ರವೇಶಿಸಿದರು. ಈ ಚಿತ್ರ ಜಯಪ್ರದಾ ಅವರನ್ನು ಬಾಲಿವುಡ್‌ನಲ್ಲಿ ರಾತ್ರೋರಾತ್ರಿ ಫೇಮಸ್ ಮಾಡಿತು. ಅವರ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.

No Comments

Leave A Comment