ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ನಲ್ಲಿ ಗುರುವಾರ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಜಾರಿ ನಿರ್ದೇಶನಾಲಯದ ಏಳು ದಿನಗಳ ಅವಧಿ ಅಂತ್ಯಗೊಂಡಿದೆ. ಆಡಳಿತಾರೂಢ ಬಿಜೆಪಿ ತಮ್ಮ ಪಕ್ಷವನ್ನು “ಪುಡಿಮಾಡಲು” ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಯಾವುದೇ ನ್ಯಾಯಾಲಯ ತಮ್ಮನ್ನು ಅಪರಾಧಿ ಎಂದು ಸಾಬೀತುಪಡಿಸಿಲ್ಲ ಎಂದು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 15 ರಂದು ಇಡಿಯಿಂದ ಬಂಧಿಸಲ್ಪಟ್ಟ ಕೇಜ್ರಿವಾಲ್ ಒತ್ತಿ ಹೇಳಿದರು. ಅಲ್ಲದೆ ಇಡಿ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ. ನನ್ನನ್ನು ಬಂಧಿಸಲಾಯಿತು. ಆದರೆ ಯಾವ ನ್ಯಾಯಾಲಯವೂ ನನ್ನನ್ನು ಅಪರಾಧಿ ಎಂದು ಸಾಬೀತುಪಡಿಸಿಲ್ಲ. ಸಿಬಿಐ 31,000 ಪುಟಗಳು ಮತ್ತು ಇಡಿ 25,000 ಪುಟಗಳ ಚಾರ್ಚ್ ಶೀಟ್ ಸಲ್ಲಿಸಿದೆ. ನೀವು ಅವುಗಳನ್ನು ಒಟ್ಟಿಗೆ ಓದಿದರೂ ಸಹ ನನ್ನನ್ನು ಏಕೆ ಬಂಧಿಸಲಾಗಿದೆ? ಎಂಬ ಪ್ರಶ್ನೆ ಉಳಿದಿದೆ ಎಂದು ಕೇಜ್ರಿವಾಲ್ ನ್ಯಾಯಾಲಯವನ್ನು ಪ್ರಶ್ನಿಸಿದರು.
ಇದೊಂದು ರಾಜಕೀಯ ಪಿತೂರಿ, ಜನರೇ ಉತ್ತರ ನೀಡುತ್ತಾರೆ” ಎಂದು ಕೇಜ್ರಿವಾಲ್ ಅವರು ನ್ಯಾಯಾಲಯದ ಕೊಠಡಿ ಪ್ರವೇಶಿಸುತ್ತಿದ್ದಂತೆ ಸುದ್ದಿಗಾರರಿಗೆ ಹೇಳಿದ್ದರು. ಕೇಜ್ರಿವಾಲ್ ಅವರನ್ನು ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರ ಮುಂದೆ ಹಾಜರುಪಡಿಸಲಾಯಿತು. ಎಎಪಿ ಸಚಿವರಾದ ಅತಿಶಿ, ಗೋಪಾಲ್ ರಾಯ್ ಮತ್ತು ಸೌರಭ್ ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಪತ್ನಿ ಸುನೀತಾ ಕೇಜ್ರಿವಾಲ್ ನ್ಯಾಯಾಲಯದ ಒಳಗೇ ಇದ್ದರು.