ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಕಾರ್ಕಳ : ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಮೂರ್ತಿ ಪುನರ್ ಸ್ಥಾಪನೆಗೆ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ

ಕಾರ್ಕಳ :ಮಾ, 27: ಕಾರ್ಕಳ ಕ್ಷೇತ್ರದ ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲೂರು ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕರಾವಳಿಯ ಸೃಷ್ಟಿಕರ್ತನೆಂದೆ ಕರೆಯಲ್ಪಡುವ ಶ್ರೀ ಪರಶುರಾಮ ಮೂರ್ತಿಯನ್ನು ಪುನರ್ ಸ್ಥಾಪಿಸಲು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ.(ರಿ) ಎಂಬ ಸಮಿತಿಯು ಮಾರ್ಚ್ 18ರಂದು ಅಸ್ತಿತ್ವಕ್ಕೆ ಬಂದಿರುತ್ತದೆ.

ಸಮಿತಿಯ ಮೊದಲ ಸಭೆಯು ಮಾರ್ಚ್ 25 ಸೋಮವಾರದಂದು ಉಡುಪಿಯ ಖಾಸಗಿಹೋಟೆಲಿನಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಕೆ ಕೃಷ್ಣಮೂರ್ತಿ ಆಚಾರ್ಯ ಮತ್ತು ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ಯವರ ನೇತೃತ್ವತ್ವದಲ್ಲಿ ನಡೆಯಿತು.

ಸಮಿತಿಯ ಸಲಹೆಗಾರರಾದ ವಿಶ್ವಾಸ್ ವಿ ಅಮೀನ್, ಉಪಾಧ್ಯಕ್ಶರಾದ ನಲ್ಲೂರು ಪ್ರದೀಪ್ ಶೆಟ್ಟಿ , ಬೆಳುವಾಯಿಯ ನಿತಿನ್ ಪೂಜಾರಿ ರವರು , ಪ್ರಧಾನ ಕಾರ್ಯದರ್ಶಿಯವರಾದ ಕಾಂತಾವರದ ಪ್ರದೀಪ್ ಕುಲಾಲ್,ಜತೆ ಕಾರ್ಯದರ್ಶಿವರಾದ ಬೋಳದ ಸಂತೋಷ ರವರ ಜೊತೆ ಕೋಶಾಧಿಕಾರಿಯಾದ ಹವಾಲ್ದಾರ್ ಬೆಟ್ಟು ಶಶಿಧರ ರವರು ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರಾದ ಪೆರ್ಡೂರು ನವೀನ್ ಸಾಲಿಯಾನ್, ಚೇರ್ಕಾಡಿಯ ವಿಗ್ನೇಶ್, ಕಡ್ತಲದ ಹರೀಶ್ ಪೂಜಾರಿ, ಹೆಬ್ರಿ ಚಾರದ ದಿನೇಶ್ ಕುಮಾರ್ ಮತ್ತು ಮರ್ಣೆ ರಾಜೇಶ್ ಶೆಟ್ಟಿಯವರು ಸಭೆಯಲ್ಲಿದ್ದು ಸಮಿತಿಯ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

No Comments

Leave A Comment